ಜಾಗತಿಕ ಕೋವಿಡ್ ಸಂಖ್ಯೆ 5 ದಶಲಕ್ಷಕ್ಕೆ ಏರಿಕೆ
ವಾಷಿಂಗ್ಟನ್, ನ. 01: ಕೊರೋನಾ ವೈರಸ್ ನಿಂದಾಗಿ ಜಾಗತಿಕವಾಗಿ ಸಾವನ್ನಪ್ಪಿದವರ ಸಂಖ್ಯೆ 5 ದಶಲಕ್ಷ ಮೀರಿದೆ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯ ಮಾಹಿತಿ ನೀಡಿದೆ.
ಕೊವಿಡ್ ನಿಂದಾದ ಜಾಗತಿಕ ಸಾವಿನ ಸಂಖ್ಯೆ 5,000,425 ಕ್ಕೆ ತಲುಪಿದೆ, ಒಟ್ಟು ಪ್ರಕರಣಗಳ ಸಂಖ್ಯೆ 246.7 ಮಿಲಿಯನ್ ಮೀರಿದೆ ಎಂದು ವಿಶ್ವವಿದ್ಯಾಲಯದ ಅಂಕಿಅಂಶಗಳು ತಿಳಿಸಿವೆ.
ಜಗತ್ತಿನಲ್ಲಿಯೇ ಅತಿ ಹೆಚ್ಚು ಸಾವುಗಳನ್ನು ಅಮೆರಿಕ ದಾಖಲಿಸಿದ್ದು, 745,000ಕ್ಕೂ ಹೆಚ್ಚು ಕೋವಿಡ್ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.