ಹುಕ್ಕೇರಿ

ಬೇಡ ಜಂಗಮರಿಗೆ ನ್ಯಾಯ ವದಗಿಸಿ: ಕಿರಣ ಕರೋಶಿ

ಬೇಡ ಜಂಗಮರಿಗೆ ನ್ಯಾಯ ವದಗಿಸಿ: ಕಿರಣ ಕರೋಶಿ

ಹುಕ್ಕೇರಿ 07: ನಗರದಲ್ಲಿ ಪರಿಶಿಷ್ಟ ಜಾತಿ, ಪಂಗಡದ ಮೀಸಲಾತಿ ಮುಂದುವರಿಸುವಂತೆ ಆಗ್ರಹಿಸಿ ಬೇಡ ಜಂಗಮ ಸಂಘಟನೆಯ ಹುಕ್ಕೇರಿ ತಾಲೂಕಾ ಘಟಕ ಸದಸ್ಯರು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು. 

ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ನೂರಾರು ಸದಸ್ಯರು ಪಟ್ಟಣದ ತಾಲೂಕಾ ಆಡಳಿತ ಭವನಕ್ಕೆ ತೆರಳಿ ಪ್ರತಿಭಟನೆ ನಡೆಸಿದರು. ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಮುಖಂಡ ಕಿರಣ ಕರೋಶಿ ಕೇಂದ್ರ ಸರ್ಕಾರದ ಆದೇಶದಂತೆ ಬೇಡ ಜಂಗಮ ಜಾತಿಯನ್ನು ಪರಿಶಿಷ್ಟ ಜಾತಿಗೆ ಸೇರಿಸಲಾಗಿದೆ ಆದರೆ ರಾಜ್ಯ ಸರ್ಕಾರ ಬೇಡ ಜಂಗಮ, ಬುದ್ಗ ಜಂಗಮಕ್ಕೆ ನೀಡುತ್ತಿರುವ ಮೀಸಲಾತಿ ನಿಲ್ಲಿಸಿರುವದು ಸರಿಯಲ್ಲ. ಸರ್ಕಾರದ ಈ ನೀತಿಯನ್ನು ವಿರೋಧಿಸಿ ಪ್ರತಿಭಟನೆ ಮಾಡಲಾಗುತ್ತಿದೆ ಎಂದರು.ಗುರು ಶಿವಯೋಗಿಮಠ ಮಾತನಾಡಿ ಡಾ, ಬಾಬಾಸಾಹೇಬ ಅಂಬೇಡ್ಕರ್ ರವರ ಸಂವಿದಾನದಲ್ಲಿ ಹೇಳಿದ ಪ್ರಕಾರ ನಮಗೆ ನಮ್ಮ ಹಕ್ಕು ದೋರಕಬೇಕು ಮತ್ತು ನಮ್ಮ ರಾಜ್ಯಾದ್ಯಕ್ಷ ಬಿ ಡಿ ಹಿರೇಮಠರ  ಹೋರಾಟಕ್ಕೆ ರಾಜ್ಯ ಸರ್ಕಾರ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ ಇದನ್ನು ಖಂಡಿಸಿ ಪ್ರತಿಭಟನೆ ಮಾಡಲಾಗುತ್ತಿದೆ ಎಂದರು. 

ನಂತರ ಆಡಳಿತ ಭವನದ ಆವರಣದಲ್ಲಿ ಕೆಲಕಾಲ ಧರಣಿ ಜರುಗಿಸಿದ ಪ್ರತಿಭಟನಾಕಾರರು ತಹಸಿಲ್ದಾರ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಕೆ ಬಿ ಮಠಪತಿ, ಶಾಂತಾ ಗವಿಮಠ, ಪಿ ಜೆ ಎಣಗಿಮಠ, ಬಿ ಎಸ್ ಸಾರಂಗಮಠ, ಪೂಜೇರಿ, ಎಮ್ ವಿ ಹಿರೇಮಠ, ದುಂಡಯ್ಯಾ ಮಠಪತಿ, ಎಸ್ ಆರ್ ಹಿರೇಮಠ, ಮಲ್ಲಯ್ಯಾ ಮಠಪತಿ, ಪ್ರಕಾಶ ಮಠಪತಿ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 


ಸುದ್ದಿ ಓದಿ