ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ: ಡಾ. ಪ್ರಭಾಕರ ಕೋರೆ
Give children good morals: Dr. Prabhakar Kore
ಬೆಳಗಾವಿ 26: ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಮಕ್ಕಳಿಗೆ ಉತ್ತಮ ಸಂಸ್ಕಾರ, ಉತ್ತಮ ಆಹಾರಚರ್ಯೆ , ಉತ್ತಮ ನಡುವಳಿಕೆ ನೀಡುವುದು ಇಂದಿನ ಅಗತ್ಯವಾಗಿದೆ ಎಂದು ಕೆ.ಎಲ್.ಇ.ಸಂಸ್ಥೆಯ ಗೌರವಾಧ್ಯಕ್ಷ ಪದ್ಮಶ್ರೀ ಡಾ. ಪ್ರಭಾಕರ ಕೋರೆ ಅವರು ಇಂದಿಲ್ಲಿ ಹೇಳಿದರು. ಬೆಳಗಾವಿಯ ಕೋಟೆ ಆವರಣದಲ್ಲಿನ ಕಮಲ ಬಸದಿಯಲ್ಲಿ ನಡೆಯುತ್ತಿರುವ ಧರ್ಮಚಕ್ರ ಆರಾಧನಾ ಮಹೋತ್ಸವದ ಸಮಾರಂಭಕ್ಕೆ ಮುಖ್ಯ ಅತಥಿಯಾಗಿ ಆಗಮಿಸಿ ಮಾತನಾಡಿದ ಅವರು, ಜೈನ ಧರ್ಮದ ಇತಿಹಾಸ ಅಪಾರವಾಗಿದೆ. ಇಲ್ಲಿನ ಕಮಲ ಬಸದಿ ಪುರಾತತ್ವ ಇಲಾಖೆಯ ಅಧೀನದಲ್ಲಿದೆ.
ಈ ಹಿಂದೆಯೂ ಈ ಬಸದಿ ಜಿರ್ಣೋದ್ದಾರಕ್ಕೆ ಕ್ರಮ ಕೈಗೊಳ್ಳಲಾಗಿತ್ತು, ಆದರೆ ಈ ಬಾರಿ ಈ ಬಸದಿಯನ್ನು ಇನ್ನಷ್ಟು ಸುಶೋಭೀಕರಣ ಮಾಡುವ ಮೂಲಕ ಈ ಬಸದಿಗೆ ಐತಿಹಾಸಿಕ ಸ್ಥಳಕ್ಕೆ ಇನ್ನಷ್ಟು ಮೆರಗು ತಂದಿದೆ ಎಂದರು . ಕರ್ನಾಟಕ ಮತ್ತು ಮಹಾರಾಷ್ಟ್ರ ದಲ್ಲಿ ಜೈನ ಸಮಾಜ ಅಪಾರವಾಗಿದೆ. ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಜೈನ ಸಮಾಜದ ಕೊಡುಗೆ ಅಪಾರವಾಗಿದೆ. ಇಂದು ಕನ್ನಡ ಭಾಷೆ ಜೀವಂತ ಇರಲಿಕ್ಕೆ ಜೈನ ಸಮಾಜ ಕಾರಣ ಎಂದು ಹೇಳಿದ ಅವರು, ನಾನು ಸಹ ಬೆಳೆದಿದ್ದು ಜೈನ ಸಮಾಜದ ನಡುವೆ ಬೆಳೆದಿದ್ದೇನೆ. ಹೀಗಾಗಿ ಅಹಿಂಸೆ ಸೇರಿದಂತೆ ಜೈನ ಸಂಸ್ಕಾರಗಳು ನನ್ನಲ್ಲಿ ಸಹ ಅಳವಡಿಸಿಕೊಂಡಿವೆ ಎಂದರು.
ಸಮಾರಂಭದಲ್ಲಿ ಮಾಜಿ ಶಾಸಕ ಅನಿಲ ಬೆನಕೆ ಅವರು ಮಾತನಾಡಿ , ಧಾರ್ಮಿಕ ಕಾರ್ಯಗಳು ಸಂಸ್ಕಾರ ಬೆಳೆಸಲು ಸಹಕಾರಿಯಾಗುತ್ತವೆ. ಸದಾ ಧರ್ಮದ ಚಿಂತನೆ ಮತ್ತು ಧರ್ಮದ ಪಾಲನೆಯಲ್ಲಿ ಜೀವನ ನಡೆಸಿ ಸಕಲ ಸಮಾಜಗಳ ಉನ್ನತಿಗೆ ಜೈನ ಸಮಾಜ ಶ್ರಮಿಸುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದರು. ಶಾಸಕ ಅಭಯ ಪಾಟೀಲ ಅವರು ಮಾತನಾಡಿ , ಇಂದು ಕಮಲ ಬಸದಿಯ ಜೀರ್ಣೋದ್ಧಾರ ಕಾರ್ಯಕ್ಕೆ ಹಾಗೂ ಸುಶೋಭಿಕರಣಕ್ಕೆ ಸುನಿಲ ಹನಮಣ್ಣವರ ಅವರು ಕಾರಣ . ಅವರ ನಿರಂತರ ಪರಿಶ್ರಮದಿಂದಾಗಿ ಇಂದು ದೊಡ್ಡ ಮಟ್ಟದ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದೆ.
ಯಾವುದೇ ವ್ಯಕ್ತಿ ಹಣದಿಂದ ಶ್ರೀಮಂತನಾಗುವುದಿಲ್ಲ. ಧರ್ಮ ಆಚರಣೆ ಮತ್ತು ಸಂಸ್ಕಾರದಿಂದ ಮಾತ್ರ ಶ್ರೀಮಂತನಾಗಿರಬೇಕು.ಆಗ ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದರು. ಸಮಾರಂಭದ ವೇದಿಕೆ ಮೇಲೆ ಭರತ ಪಾಟೀಲ, ಡಾ.ರಮೇಶ ದೊಡ್ಡಣ್ಣವರ, ಸನ್ಮತಿ ಕಸ್ತೂರಿ, ಅಭಿನಂದನ ಜಾಬನ್ನವರ, ಹೀರಾಚಂದ ಕಲಮನಿ, ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. ಇದೆ ಸಂದರ್ಭದಲ್ಲಿ ಡಾ.ಪ್ರಭಾಕರ ಕೋರೆ, ಮಾಜಿ ಶಾಸಕ ಅನಿಲ ಬೆನಕೆ, ಶಾಸಕ ಅಭಯ ಪಾಟೀಲ, ಹಿರಿಯ ನ್ಯಾಯವಾದಿಗಳಾದ ಸದಾಶಿವ ಶಾಂತನಗೌಡ ಮತ್ತು ರವಿರಾಜ ಪಾಟೀಲ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು .
ಇದಕ್ಕೂ ಮುನ್ನ ಸುಮಾರು 150 ಮಕ್ಕಳಿಗೆ ಮೌಂಜಿ ಬಂಧನ ಉಪನಯನದ ಕಾರ್ಯಕ್ರಮ ನಡೆಯಿತು. ಆಚಾರ್ಯ ಶ್ರೀ ಧರ್ಮಸೇನ ಮುನಿಗಳು ಮೌಂಜಿ ಬಂಧನ ಮಕ್ಕಳಿಗೆ ವೃತಧಾರಣೆ ಮತ್ತು ನಿಯಮಗಳನ್ನು ನೀಡಿದರು. ವಿನೋದ ದೊಡ್ಡಣ್ಣವರ ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ಪಂಡಿತರಾದ ಅಮೋಲ ಉಪಾಧ್ಯೆ, ಮಹಾವೀರ ಉಪಾಧ್ಯೆ ಧಾರ್ಮಿಕ ವಿಧಿ ವಿಧಾನಗಳು ನಡೆಸಿಕೊಟ್ಟರು. ಪದ್ಮರಾಜ ವೈಜನ್ನವರ ಕಾರ್ಯಕ್ರಮ ನಿರೂಪಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 