ಅಂತರರಾಷ್ಟ್ರೀಯ

ಜನರಲ್‌ ರಾವತ್‌ ಹೆಲಿಕಾಪ್ಟರ್‌ ಅಪಘಾತ... ಚೀನಾ ವ್ಯಂಗ್ಯ

ಜನರಲ್‌  ರಾವತ್‌  ಹೆಲಿಕಾಪ್ಟರ್‌  ಅಪಘಾತ... ಚೀನಾ ವ್ಯಂಗ್ಯ

ಬೀಜಿಂಗ್,  ಡಿ 10:  ಚೀನಾ  ಕನಿಷ್ಠ  ಮಾನವೀಯತೆಯನ್ನೂ   ಮರೆತಿದೆ.   ಸಂಯಮ ಪ್ರದರ್ಶಿಸಬೇಕಾದ  ಸಮಯದಲ್ಲಿ  ವ್ಯಂಗ್ಯವಾಡಿದೆ.   ಭಾರತೀಯ  ಸಶಸ್ತ್ರ ಪಡೆಗಳ  ಮುಖ್ಯಸ್ಥ (ಸಿ ಡಿ ಎಸ್)  ಜನರಲ್  ಬಿಪಿನ್ ರಾವತ್  ಪ್ರಯಾಣಿಸಿದ   ಹೆಲಿಕಾಪ್ಟರ್  ಅಪಘಾತದ ಬಗ್ಗೆ ಹಾಸ್ಯಾಸ್ಪದ   ಹೇಳಿಕೆ  ನೀಡಿದೆ.  ಭಾರತೀಯ  ಸೇನೆಗೆ    ಶಿಸ್ತಿನ ಕೊರತೆಯಿದೆ,   ಸಮರ    ಸನ್ನದ್ದತೆ   ಹೊಂದಿಲ್ಲ ಎಂದು    ಹೇಳಿದೆ.  ಜನರಲ್  ರಾವತ್ ಅವರ   ಸಾವು  ಭಾರತೀಯ ಸೇನೆಯ ಆಧುನೀಕರಣಕ್ಕೆ ದೊಡ್ಡ ಹೊಡೆತವಾಗಿದೆ  ಎಂದು    ಹೇಳಿದೆ.  ಚೀನಾದ  ತಜ್ಞರನ್ನು ಉಲ್ಲೇಖಿಸಿ       ಸರ್ಕಾರಿ  ಪತ್ರಿಕೆ      ಗ್ಲೋಬಲ್ ಟೈಮ್ಸ್    ಈ  ಸುದ್ದಿ ಪ್ರಕಟಿಸಿದೆ.  

ರಾವತ್    ಮೃತಪಟ್ಟರೂ...

ಚೀನಾ     ವಿರುದ್ದ    ಬೆಂಕಿ ಚಂಡಿನಂತಿದ್ದ     ಭಾರತದ  ಉನ್ನತಮಟ್ಟದ  ಸೇನಾ  ನಾಯಕರೊಬ್ಬರು  ಸಾವನ್ನಪ್ಪಿದ್ದರೂ,   ಚೀನಾದ  ಬಗ್ಗೆ ಭಾರತದ ಆಕ್ರಮಣಕಾರಿ ಧೋರಣೆ  ಬದಲಾಗುವ   ಸಾಧ್ಯತೆಯಿಲ್ಲ ಎಂದು  ಚೀನಾದ ವಿಶ್ಲೇಷಕರು ಹೇಳುತ್ತಾರೆ.   ಭಾರತೀಯ ಮಾಧ್ಯಮಗಳು ನೀಡಿರುವ ಕಾರಣಗಳನ್ನು ಪರಿಶೀಲಿಸಿದರೆ ಅಪಘಾತಕ್ಕೆ  ಮಾನವ ಲೋಪ ಕಾರಣ ಎಂಬುದು ಗೊತ್ತಾಗುತ್ತದೆ. ರಷ್ಯಾದಲ್ಲಿ ತಯಾರಿಸಿದ MI-17 ಸರಣಿಯ ಹೆಲಿಕಾಪ್ಟರ್‌ಗಳನ್ನು ಇತರ ದೇಶಗಳಲ್ಲಿಯೂ ವ್ಯಾಪಕವಾಗಿ ಬಳಸಲಾಗುತ್ತದೆ ಎಂಬುದನ್ನು   ಅದು  ಒತ್ತಿ ಹೇಳಿದೆ.


ಶಿಸ್ತು  ಇಲ್ಲ...

ಶಿಸ್ತು   ರಹಿತ    ಸಂಸ್ಕೃತಿಗೆ  ಭಾರತೀಯ   ಸೇನೆ    ಮತ್ತೊಂದು    ಹೆಸರು ಎಂದು  ವ್ಯಂಗ್ಯವಾಡಿದೆ.  ಪ್ರಮಾಣಿತ ನಿರ್ವಹಣಾ ಕಾರ್ಯವಿಧಾನಗಳು ಹಾಗೂ  ನಿಬಂಧನೆಗಳನ್ನು   ಭಾರತೀಯ  ಪಡೆಗಳು  ಸಾಮಾನ್ಯವಾಗಿ ಅನುಸರಿಸುವುದಿಲ್ಲ ಎಂದು   ಹೇಳಿದೆ. 2013 ರಲ್ಲಿ  ಜಲಾಂತರ್ಗಾಮಿ ನೌಕೆಯಲ್ಲಿ ಸ್ಫೋಟ ಸಂಭವಿಸಿತ್ತು.  2019 ರಲ್ಲಿ ವಿಮಾನವಾಹಕ ನೌಕೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು  ಇವೆಲ್ಲವಕ್ಕೂ    ಮಾನವ ದೋಷ  ಕಾರಣವಲ್ಲ  ಎಂದು  ವ್ಯಾಖ್ಯಾನಿಸಿದೆ. 

ತಡೆಗಟ್ಟಬಹುದಾದ...

 ಜನರಲ್  ಬಿಪಿನ್‌  ರಾವತ್  ಪ್ರಯಾಣಿಸುತ್ತಿದ್ದ   ಹೆಲಿಕಾಪ್ಟರ್‌     ಅಪಘಾತ   ತಡೆಗಟ್ಟಬಹುದಾಗಿತ್ತು..    ಹವಾಮಾನ  ಸುಧಾರಿಸುವವರೆಗೆ  ಹಾರಾಟವನ್ನು ಮುಂದೂಡಿದ್ದರೆ  ಅಪಘಾತ ಸಂಭವಿಸುತ್ತಿರಲಿಲ್ಲ.  ಪೈಲಟ್  ಹೆಚ್ಚು  ಕೌಶಲ್ಯ  ಹಾಗೂ  ಜಾಗರೂಕರಾಗಿರಬೇಕಾಗಿತ್ತು.   ನೆಲದ ಮೇಲಿನ  ನಿರ್ವಹಣಾ ಸಿಬ್ಬಂದಿ ಮತ್ತಷ್ಟು ಜಾಗೃತೆ ವಹಿಸಿದ್ದರೆ    ಏನು  ನಡೆದಿದೆಯೋ  ಅದು  ನಡೆಯುತ್ತಿರಲಿಲ್ಲ  ಎಂದು  ಹೇಳಿದೆ.   ಈ  ಅಪಘಾತದಿಂದ   ಭಾರತೀಯ  ಸೇನೆ  ಯುದ್ದ  ಸನ್ನದ್ದತೆ    ಹೊಂದಿಲ್ಲ ಎಂಬುದನ್ನು  ಮತ್ತೊಮ್ಮೆ ತೋರಿಸುತ್ತಿದೆ ಎಂದು   ಅದು ಹೇಳಿದೆ.

ಒಂದೊಮ್ಮೆ  ಯುದ್ಧ ಆರಂಭವಾದರೆ...

ಈ  ಸಾಮಾನ್ಯ   ಸಮಸ್ಯೆ    ಇಡೀ   ಭಾರತ  ಸೇನೆಯಲ್ಲಿದೆ.  ಚೀನಾ-ಭಾರತದ ಗಡಿಯಲ್ಲಿರುವ    ಸೈನ್ಯಕ್ಕೂ ಇದೆ   . ಗಡಿಯಲ್ಲಿ  ಸೇನೆ  ಪ್ರಚೋದನಾಕಾರಿ ಕೃತ್ಯ ಎಸಗುತ್ತಿದ್ದು,  ನಿಜವಾಗಿಯೂ  ಯುದ್ಧ   ಆರಂಭವಾದರೆ   ಚೀನಾ ಸೇನೆಯನ್ನು  ಎದುರಿಸುವ  ಅವಕಾಶ  ಇರುವುದಿಲ್ಲ ಸಾಧ್ಯತೆ ಇಲ್ಲ ಎಂದು ತಿಳಿಸಿದೆ.

ಆಧುನೀಕರಣ ಯೋಜನೆ ಅಸ್ತವ್ಯಸ್ತವಾಗಿದೆ

ಭಾರತೀಯ  ಸೇನೆ, ನೌಕಾಪಡೆ  ಹಾಗೂ  ವಾಯುಪಡೆಗಳ   ನಡುವಣ   ವೈರುದ್ಯಗಳ  ನಿವಾರಿಸಿ   ಸಮನ್ವಯತೆ  ಸಾಧಿಸಲು ಭಾರತ ಸರ್ಕಾರ ಜನರಲ್ ರಾವತ್ ಅವರನ್ನು CDS ಆಗಿ  ನೇಮಿಸಿದೆ.   ಸೇನೆಯನ್ನು  ಆಧುನೀಕರಿಸಲು ಈ ಮೂರು  ಪಡೆಗಳನ್ನು  ಒಗ್ಗೂಡಿಸುವುದು  ಸಿಡಿಎಸ್   ಗುರಿಯಾಗಿದೆ ಎಂದು  ಹೇಳಿದೆ.  ಜನರಲ್ ರಾವತ್ ಸಾವಿನ  ನಿಂದ  ಭಾರತೀಯ ಸೇನೆಯ ಆಧುನೀಕರಣ ಯೋಜನೆ ಅಸ್ತವ್ಯಸ್ತವಾಗಿದೆ ಎಂದು   ವ್ಯಾಖ್ಯಾನಿಸಿದೆ.

ತೈವಾನ್‌ನ ಸೇನಾ ಮುಖ್ಯಸ್ಥ ಕೂಡ...

ಏತನ್ಮಧ್ಯೆ ,  ಚೀನಾಗೆ  ತೈವಾನ್,  ಭಾರತದೊಂದಿಗೆ  ಸಂಘರ್ಷ,   ವಿವಾದಗಳನ್ನು ಹೊಂದಿದೆ. ಜನರಲ್ ರಾವತ್ ಅವರಂತೆ,  ತೈವಾನ್ ನ ಚೀಫ್ ಆಫ್ ಸ್ಟಾಫ್ ಜನರಲ್ ಶೆನ್ ಯಿ-ಮಿಂಗ್ (62)  ಕಳೆ ದ ವರ್ಷ ಜನವರಿಯಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ  ಸಾವನ್ನಪ್ಪಿದ್ದರು.  UH-60M ಹೆಲಿಕಾಪ್ಟರ್   ಹಾರಾಟ  ಆರಂಭಿಸಿದ  ಆದ ಕೆಲವೇ ಸಮಯದಲ್ಲಿ ನ್ಯೂ ತೈಪೆ ಸಿಟಿ ಬಳಿ    ರಾಡಾರ್‌ ನೊಂದಿಗೆ ಸಂಪರ್ಕ ಕಳೆದುಕೊಂಡಿತು. ಹೆಲಿಕಾಪ್ಟರ್‌ನಲ್ಲಿ ಸಿಬ್ಬಂದಿ ಸೇರಿದಂತೆ 13 ಮಂದಿ ಇದ್ದರು. ಆದಾಗ್ಯೂ, ಶೆನ್‌  ಸೇರಿದಂತೆ  ಏಳು ಮಂದಿ  ಜೀವ  ಕಳೆದುಕೊಂಡರು,  ಐದು ಮಂದಿ  ಬದುಕುಳಿದಿದ್ದರು. 

ಸುದ್ದಿ ಓದಿ