ಅಂತರರಾಷ್ಟ್ರೀಯ

ಜೈಲಿನಲ್ಲಿ ಗ್ಯಾಂಗ್ ವಾರ್ .. 100 ದಾಟಿದ ಸಾವಿನ ಸಂಖ್ಯೆ

ಜೈಲಿನಲ್ಲಿ   ಗ್ಯಾಂಗ್   ವಾರ್ .. 100  ದಾಟಿದ  ಸಾವಿನ ಸಂಖ್ಯೆ

ಕ್ವಿಟೊ, ಸೆ 30: ಈಕ್ವೆಡಾರ್ ನ  ಜೈಲಿನಲ್ಲಿ   ಎರಡು   ಗುಂಪುಗಳ     ನಡುವೆ   ನಡೆದ   ಭೀಕರ   ಘರ್ಷಣೆಯಲ್ಲಿ ಸಾವಿನ   ಸಂಖ್ಯೆ ನೂರು ದಾಟಿದೆ. ಈಕ್ವೆಡಾರ್‌ನ ಗುಯಾಕ್ವಿಲ್ ಜೈಲಿನಲ್ಲಿ ಮಂಗಳವಾರ ರಾತ್ರಿ ಎರಡು ಗುಂಪುಗಳ ನಡುವೆ  ಘರ್ಷಣೆ  ನಡೆದಿದೆ.   ಎರಡು  ಬಣಗಳು  ಪರಸ್ಪರ  ಬಾಂಬ್  ಹಾಗೂ  ಬಂದೂಕುಗಳ  ಮೂಲಕ  ದಾಳಿ  ನಡೆಸಿದ್ದವು.   ಘರ್ಷಣೆಯಲ್ಲಿ ಈವರೆಗೆ  116 ಕೈದಿಗಳು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು  ತಿಳಿಸಿದ್ದಾರೆ.    ಜೈಲಿನಲ್ಲಿ ನಡೆದ ಘರ್ಷಣೆ ದೇಶದ  ಇತಿಹಾಸದಲ್ಲಿ ಅತ್ಯಂತ  ಹೀನವಾದ ಘಟನೆಯಾಗಿ  ಉಳಿಯಲಿದೆ  ಎಂದು ಅವರು ಹೇಳಿದ್ದಾರೆ.

ಗುಯಾಕ್ವಿಲ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಎರಡು ಡ್ರಗ್  ಗ್ಯಾಂಗ್‌ಗಳ ನಡುವೆ   ಮಂಗಳವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ  ಉಂಟಾದ  ಗಲಾಟೆ   ಅತಿರೇಕಕ್ಕೆ ತಿರುಗಿ  ಸಂಘರ್ಷವಾಗಿ ಮಾರ್ಪಟ್ಟಿತು.  ಸಂಜೆಯ ವೇಳೆಗೆ  ಬಾಂಬ್‌ಗಳು,     ಗುಂಡಿನ ದಾಳಿಗಳಿಂದ ಪ್ರಕ್ಷುಬ್ಧಗೊಂಡಿತು. ಘರ್ಷಣೆಯನ್ನು ನಿಯಂತ್ರಿಸಲು ಹೆಚ್ಚುವರಿಯಾಗಿ  ಸೇನೆ  ಹಾಗೂ   400 ಮಂದಿ ಪೊಲೀಸರು   5 ಗಂಟೆಗಳ ಕಾಲ  ಹರಸಾಹಸ  ನಡೆಸಬೇಕಾಯಿತು.  

ಈಕ್ವೆಡಾರ್‌ನಲ್ಲಿ ಮೂರು ಜೈಲಿನಲ್ಲಿ  ಕಳೆದ ಫೆಬ್ರವರಿಯಲ್ಲಿ  ನಡೆದ ಗಲಭೆಗಳಲ್ಲಿ 79  ಮಂದಿ  ಸಾವನ್ನಪ್ಪಿದ್ದರು. ಜುಲೈನಲ್ಲಿ ನಡೆದ  ಮತ್ತೊಂದು  ಘಟನೆಯಲ್ಲಿ 22 ಕೈದಿಗಳು  ಮೃತಪಟಿದ್ದರು.

ಸುದ್ದಿ ಓದಿ