ಮೆಕ್ಸಿಕೋದಲ್ಲಿ ಗ್ಯಾಂಗ್ ವಾರ್, 19 ಮಂದಿ ಸಾವು
ಮೆಕ್ಸಿಕೊ ನಗರ, ಎಪ್ರಿಲ್ 5, ಮೆಕ್ಸಿಕೊದ ಉತ್ತರ ರಾಜ್ಯ ಚಿಹೋವಾದಲ್ಲಿ ಎರಡು ಗ್ಯಾಂಗ್ ಗಳ ನಡುವೆ ಸಂಭವಿಸಿದ ಶೂಟೌಟ್ ನಲ್ಲಿ ಕನಿಷ್ಠ 19 ಜನರು ಸಾವನ್ನಪ್ಪಿದ್ದಾರೆ ಮತ್ತು ಒಬ್ಬರು ಗಾಯಗೊಂಡಿದ್ದಾರೆ ಎಂದು ರಾಜ್ಯ ಅಟಾರ್ನಿ ಜನರಲ್ ಕಚೇರಿ ತಿಳಿಸಿದೆ.ಕಚೇರಿಯ ಪ್ರಕಾರ, ಪಶ್ಚಿಮ ಚಿಹೋವಾದಲ್ಲಿನ ಮಡೆರಾ ಪುರಸಭೆಯ ಚುಹುಚುಪ ಪಟ್ಟಣದಲ್ಲಿ ಶುಕ್ರವಾರ ಶೂಟೌಟ್ ವರದಿಯಾಗಿದೆ. ಸುದ್ಇ ತಿಳಿದ ನಂತರ ಘಟನಾ ಸ್ಥಳಕ್ಕೆ ಆಗಮಿಸಿದ ಭದ್ರತಾ ಸೇವೆಗಳು 18 ನಾಗರಿಕರ ಶವಗಳನ್ನು ಪತ್ತೆ ಮಾಡಿವೆ ಎಂದು ಮೆಕ್ಸಿಕನ್ ಮಿಲೆನಿಯೊ ಪತ್ರಿಕೆ ಅಟಾರ್ನಿ ಜನರಲ್ ಹೇಳಿಕೆ ಉಲ್ಲೇಖಿಸಿ ವರದಿ ಮಾಡಿದೆ . ಗಾಯಗೊಂಡ ಇಬ್ಬರನ್ನು ಕುವ್ಟೆಮೋಕ್ ಪುರಸಭೆಯ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅವರಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಗುಂಡಿನ ಚಕಮಕಿ ನಡೆದ ಸ್ಥಳದಲ್ಲಿ 18 ಬಂದೂಕುಗಳು, ಎರಡು ಗ್ರೆನೇಡ್‌ಗಳು ಮತ್ತು ಎರಡು ಕಾರು ವಶಪಡಿಸಿಕೊಳ್ಳಲಾಗಿದೆ, ರಾಜ್ಯ ಅಟಾರ್ನಿ ಜನರಲ್ ಕಚೇರಿಯ ಅಧಿಕಾರಿಗಳು ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 