ಅಂತರರಾಷ್ಟ್ರೀಯ

ಚಿಲಿ ದೇಶದ ಅಧ್ಯಕ್ಷರಾಗಿ ಗೇಬ್ರಿಯಲ್ ಬೋರಿಕ್ ಪ್ರಮಾಣವಚನ

ಚಿಲಿ ದೇಶದ ಅಧ್ಯಕ್ಷರಾಗಿ ಗೇಬ್ರಿಯಲ್ ಬೋರಿಕ್ ಪ್ರಮಾಣವಚನ

ಸ್ಯಾಂಟಿಯಾಗೊ: ಮಾರ್ಚ್ 13 : ಚಿಲಿಯ ನೂತನ ಅಧ್ಯಕ್ಷರಾಗಿ ಎಡಪಂಥೀಯ ವಿಚಾರವಾದಿ ಗೇಬ್ರಿಯಲ್ ಬೊರಿಕ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ದೇಶದಲ್ಲಿನ ಆರ್ಥಿಕ ಅಸಮಾನತೆಗಳ ಬಗ್ಗೆ ರಾಷ್ಟ್ರವ್ಯಾಪಿ ಪ್ರತಿಭಟನೆಗಳ ಹಿನ್ನೆಲೆಯಲ್ಲಿ 36 ವರ್ಷದ ಬೋರಿಕ್ ಆಗಮನದೊಂದಿಗೆ ಜನರಲ್ಲಿ ಹೊಸ ಭರವಸೆ ಮೂಡಿದೆ. ಆರ್ಥಿಕವಾಗಿ ಸಮೃದ್ಧವಾಗಿರುವ ದೇಶವಾದ ಚಿಲಿಯಲ್ಲಿ ಹೆಚ್ಚಿನ ಮಟ್ಟದ ಅಸಮಾನತೆಯ ಬಗ್ಗೆ ಆಗಾಗ್ಗೆ ಕಳವಳ ವ್ಯಕ್ತಪಡಿಸಲಾಗುತ್ತದೆ.

ಹದಿನೇಳು ವರ್ಷಗಳ ಕಾಲ ದೇಶವನ್ನು ಆಳಿದ ಮಿಲಿಟರಿ ಸರ್ವಾಧಿಕಾರದಿಂದ ರಕ್ತಸಿಕ್ತ ಚಿಲಿ ಅಂತ್ಯಗೊಂಡೂ ನಾಲ್ಕು ವರ್ಷಗಳು ಕಳೆದಿವೆ,ಈಗ ಪ್ರಜಾಪ್ರಭುತ್ವವನ್ನು ಪುನಃಸ್ಥಾಪನೆಯಾಗಿದ್ದೂ. ಬೋರಿಕ್ ತನ್ನ ಕ್ಯಾಬಿನೆಟ್ಗೆ 14 ಮಹಿಳೆಯರನ್ನು ಸೇರ್ಪಡೆಮಾಡಿದ್ದು ತನ್ನದು “ಸ್ತ್ರೀವಾದಿ ಕ್ಯಾಬಿನೆಟ್” ಎಂದು ಗುರ್ತಿಸಿದ್ದಾರೆ. ಜೊತೆಗೆ ಇನ್ನೂ 10 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಗೇಬ್ರಿಯಲ್ ಬೋರಿಕ್ ಕಳೆದ ವರ್ಷದ ಡಿಸೆಂಬರ್ ಚುನಾವಣೆಯಲ್ಲಿ 56% ಮತಗಳೊಂದಿಗೆ ಕನ್ಸರ್ವೇಟಿವ್ ಜಾಝ್ ಆಂಟೋನಿಯಾ ಕ್ಯಾಸ್ಟ್ ಅವರನ್ನು ಸೋಲಿಸಿದರು.

ಸುದ್ದಿ ಓದಿ