ವಾಷಿಂಗ್ಟನ್ನಲ್ಲಿ ಗುಂಡಿನ ದಾಳಿಗೆ ಓರ್ವ ಬಲಿ: ಶಂಕಿತ ವಶಕ್ಕೆ
ವಾಷಿಂಗ್ಟನ್, ಫೆಬ್ರವರಿ 14, ಅಮೆರಿಕ ರಾಜಧಾನಿ ವಾಷಿಂಗ್ಟನ್ನ ಡೌನ್ಟೌನ್ ಪ್ರದೇಶದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಓರ್ವ ಮೃತಪಟ್ಟಿದ್ದು, ದಾಳಿಕೋರ ಶಂಕಿತನನ್ನು ಬಂಧಿಸಲಾಗಿದೆ ಎಂದು ಡಿಸಿ ಪೊಲೀಸ್ ಇಲಾಖೆ ಮುಖ್ಯಸ್ಥ ಪೀಟರ್ ನ್ಯೂಶಮ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ."ಶಂಕಿತ ಬಂದೂಕುದಾರಿಯೊಬ್ಬ ಅನೇಕ ಬಾರಿ ಗುಂಡು ಹಾರಿಸಿದ್ದು, ಇದರಿಂದ ವಯಸ್ಕ ಪುರುಷನೊಬ್ಬ ಗಾಯಗೊಂಡಿದ್ದಾನೆ. ತಕ್ಷಣ ಆತನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಆತ ಮೃತಪಟ್ಟಿದ್ದಾನೆ ಎಂದು ಘೋಷಿಸಲಾಯಿತು" ಎಂದು ನ್ಯೂಶಮ್ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.ವಾಷಿಂಗ್ಟನ್ನ ಚೈನಾಟೌನ್ನ ನ್ಯಾಷನಲ್ ಪೋರ್ಟ್ರೇಟ್ ಗ್ಯಾಲರಿಯ ಸಮೀಪವಿರುವ 8 ನೇ ಸ್ಟ್ರೀಟ್ ನಾರ್ತ್ವೆಸ್ಟ್ನ 700 ಬ್ಲಾಕ್ನಲ್ಲಿ ಅಂತಾರಾಷ್ಡ್ರೀಯ ಕಾಲಮಾನ ರಾತ್ರಿ 10 ಗಂಟೆ ಸುಮಾರಿಗೆ ಗುಂಡಿನ ದಾಳಿ ನಡೆದಿದೆ ಎಂದು ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಗುಂಡಿನ ದಾಳಿ ನಡೆಯುವುದು ಅಸಾಮಾನ್ಯ ಎಂದು ನ್ಯೂಶಮ್ ಹೇಳಿದ್ದಾರೆ.ಗುಂಡಿನ ಚಕಮಕಿಯಲ್ಲಿ ಆ ವ್ಯಕ್ತಿ ತೊಡಗುವ ಮೊದಲು ಆತನಿಗಾಗಿ ಡಿಸಿ ಪೊಲೀಸ್ ಅಧಿಕಾರಿಗಳು ಒಂದೆರಡು ಬ್ಲಾಕ್ಗಳಲ್ಲಿ ಹಿಂಬಾಲಿಸಿದ್ದಾರೆ ಎಂದು ಮುಖ್ಯಸ್ಥರು ತಿಳಿಸಿದ್ದಾರೆ. ಬಂಧಿಸುವ ಮೊದಲು ಶಂಕಿತ ಮೇಲೆ ಪೊಲೀಸರು ಗುಂಡು ಹಾರಿಸಿದ್ದು, ಇದರಿಂದ ಆತನ ಕೈಗೆ ಪೆಟ್ಟಾಗಿದೆ, ಪ್ರಾಣಾಪಾಯವಿಲ್ಲ ಎಂದು ಅವರು ಹೇಳಿದರು.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 