ಅಂತರರಾಷ್ಟ್ರೀಯ

ಡಿಸೆಂಬರ್‌ನಲ್ಲಿ ಜಿ 7 ವಿದೇಶಾಂಗ ಸಚಿವರ ಸಭೆ - ಬ್ರಿಟನ್‌

ಡಿಸೆಂಬರ್‌ನಲ್ಲಿ   ಜಿ   7  ವಿದೇಶಾಂಗ   ಸಚಿವರ  ಸಭೆ -   ಬ್ರಿಟನ್‌

ಲಂಡನ್, ನವೆಂಬರ್ 22 -   ಜಿ 7 ದೇಶಗಳ ವಿದೇಶಾಂಗ  ಸಚಿವರ   ಶೃಂಗ ಸಭೆ   ಡಿಸೆಂಬರ್  10-12 ರಂದು  ಎರಡು  ದಿನಗಳ  ಕಾಲ    ಲಿವರ್‌ಪೂಲ್‌ನಲ್ಲಿ   ನಡೆಯಲಿದೆ  ಎಂದು ಬ್ರಿಟಿಷ್ ವಿದೇಶಾಂಗ, ಕಾಮನ್‌ವೆಲ್ತ್   ಹಾಗೂ   ಅಭಿವೃದ್ಧಿ  ಕಚೇರಿ ತಿಳಿಸಿದೆ.


ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್    ಅಮೆರಿಕಾ   ಫ್ರಾನ್ಸ್,  ಜರ್ಮನಿ, ಇಟಲಿ, ಕೆನಡಾ, ಜಪಾನ್  ಹಾಗೂ   ಐರೋಪ್ಯ  ಒಕ್ಕೂಟ   ಸಹವರ್ತಿಗಳಿಂದ  ಜಿ 7   ಜಾಗತಿಕ ಶೃಂಗಸಭೆ  ಆಯೋಜಿಸಲಿದ್ದಾರೆ,    ಥೈಲ್ಯಾಂಡ್,  ಇಂಡೋನೇಷ್ಯಾ,   ಮಲೇಷ್ಯಾ.  ಸೇರಿದಂತೆ  ಅಸಿಯಾನ್‌  (ಆಗ್ನೇಯ ಏಷ್ಯಾದ ರಾಷ್ಟ್ರಗಳ ಒಕ್ಕೂಟ) ದೇಶಗಳು   ಸಭೆಯಲ್ಲಿ  ಭಾಗವಹಿಸುವ  ನಿರೀಕ್ಷೆಯಿದೆ.  
ಕೋವಿಡ್    ನಂತರದ  ಚೇತರಿಕೆ,  ಜಾಗತಿಕ ಆರೋಗ್ಯ ಹಾಗೂ   ಮಾನವ ಹಕ್ಕುಗಳು  ಶೃಂಗಸಭೆಯಲ್ಲಿ    ಚರ್ಚಿಸಬೇಕಾದ  ವಿಷಯಗಳಲ್ಲಿ ಸೇರಿವೆ.

ಸುದ್ದಿ ಓದಿ