ಅಫ್ಘನ್ ವಿಮಾನ ನಿಲ್ದಾಣಗಳ ಕಾರ್ಯ ನಿರ್ವಹಣೆಗೆ ಜಿ- 20 ದೇಶಗಳ ಸಹಾಯ
ರೋಮ್, ಅ 13: ಜಿ 20 ದೇಶಗಳು ಅಫ್ಘಾನಿಸ್ತಾನಕ್ಕೆ ಆರ್ಥಿಕ ಹಾಗೂ ತಾಂತ್ರಿಕ ಸಹಾಯ ಕಲ್ಪಿಸುವುದರಿಂದ ಆ ದೇಶದ ವಿಮಾನ ನಿಲ್ದಾಣಗಳು ಉತ್ತಮ ಕಾರ್ಯ ವ್ಯವಸ್ಥೆಯಲ್ಲಿರಲಿವೆ ಎಂದು ಪ್ರಸ್ತುತ ಜಿ-20 ದೇಶಗಳ ಗುಂಪಿನ ಅಧ್ಯಕ್ಷತೆ ಹೊಂದಿರುವ ಇಟಲಿ ಸರ್ಕಾರ ಹೇಳಿದೆ.
ಅಫ್ಘಾನಿಸ್ತಾನ ಕುರಿತ ಜಿ 20 ದೇಶಗಳ ನಾಯಕರ ಸಭೆಯನ್ನು ರೋಮ್‌ನಲ್ಲಿ ವರ್ಚುವಲ್ ರೂಪದಲ್ಲಿ ನಿನ್ನೆ ನಡೆಸಲಾಯಿತು. ವಿಸ್ತೃತ ರೂಪದಲ್ಲಿ ನಡೆದ ಸಭೆಯಲ್ಲಿ ಅಂತಾರಾಷ್ಟ್ರೀಯ ಹಣಕಾಸು ನಿಧಿ, ವಿಶ್ವ ಬ್ಯಾಂಕಿನ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಸಭೆಯಲ್ಲಿ ರಷ್ಯದ ಉಪ ವಿದೇಶಾಂಗ ಸಚಿವ ಇಗೊರ್ ಮೊರ್ಗುಲೋವ್ ಹಾಗೂ ಅಫ್ಘಾನಿಸ್ತಾನದ ಅಧ್ಯಕ್ಷರ ಪ್ರತಿನಿಧಿ ಜಮೀರ್ ಕಾಬುಲೋವ್ ಭಾಗಿಯಾಗಿದ್ದರು.
ಕಾಬೂಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪೂರ್ಣವಾಗಿ ಕಾರ್ಯನಿರ್ವಹಿಸಲು ಅಗತ್ಯ ವಿರುವ ಪ್ರಸ್ತುತ ಹಾಗೂ ಭವಿಷ್ಯದ ತಾಂತ್ರಿಕ ಪ್ರಯತ್ನಗಳನ್ನು ಜಿ 20 ಸಂಪೂರ್ಣವಾಗಿ ಬೆಂಬಲಿಸಲಿದೆ ಎಂದು ಹೇಳಿಕೆಯಲ್ಲಿ ತಿಳಿಸಿವೆ, " ಅಫ್ಘಾನಿಸ್ತಾನದ ಇತರ ವಿಮಾನ ನಿಲ್ದಾಣಗಳನ್ನು ವಾಣಿಜ್ಯ ವಿಮಾನಗಳಿಗೆ ಮತ್ತೆ ತೆರೆಯಲು ಬೆಂಬಲ ಖಚಿತಪಡಿಸಲಾಗುವುದು ಸಭೆಯ ಅಧ್ಯಕ್ಷರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಫ್ಘಾನ್ ವಲಸಿಗರ ಹರಿವು ತಡೆಯಲು ಮಾನವೀಯ ನೆರವಿನ ಅಗತ್ಯವನ್ನೂ ಹೇಳಿಕೆ ಒತ್ತಿ ಹೇಳಿದೆ. " ಅಫ್ಘಾನಿಸ್ತಾನದಿಂದ ಸುತ್ತಮುತ್ತಲ ಹಾಗೂ ಅದರಾಚೆಗಿನ ದೇಶಗಳಿಗೆ ಅನಿಯಂತ್ರಿತ ವಲಸಿಗರ ಹರಿವಿನಂತಹ ಮಾನವೀಯ ದುರಂತ ತಡೆಗಟ್ಟಲು ನೆರವು ಅತ್ಯಗತ್ಯ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.