ಕಲ್ಲಿದ್ದಲು ಬಳಕೆ ಅಂತ್ಯಗೊಳಿಸುವ ಬಗ್ಗೆ ಮತ್ತಷ್ಟು ಅಸ್ಪಷ್ಟತೆ
ಗ್ಲಾಸ್ಗೋ, ನ 14:ಜಾಗತಿಕ ತಾಪಮಾನ ಏರಿಕೆ ಎದುರಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮ್ಮೇಳನ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಗ್ಲ್ಯಾಸ್ಗೋದಲ್ಲಿ COP-26 ಹವಾಮಾನ ಸಮ್ಮೇಳನ ಸಮಾಪನದ ಹೊರತಾಗಿಯೂ, ಹೊಸ ಪ್ರಸ್ತಾಪಗಳು ಇನ್ನೂ ಹೊರಹೊಮ್ಮುತ್ತಿವೆ. ವಿಶೇಷವಾಗಿ ಕಲ್ಲಿದ್ದಲು ಹಾಗೂ ಮುಗಿದು ಹೋಗುವ ಇಂಧನಗಳ ಬಳಕೆ ಅಂತ್ಯಗೊಳಿಸಲು ವಿಶ್ವ ಸಮುದಾಯಕ್ಕೆ ಕರೆ ನೀಡುವ ಸಲಹೆಗಳನ್ನು ಪರಿಶೀಲಿಸುತ್ತಿದೆ ಎಂದು ಶನಿವಾರ ಬಿಡುಗಡೆ ಮಾಡಿದ ಕರಡು ಹೇಳಿಕೆ ಸ್ಪಷ್ಟಪಡಿಸಿದೆ. COP-26 ನಿರ್ಣಯಗಳನ್ನು 197 ದೇಶಗಳು ಸರ್ವಾನುಮತದಿಂದ ಅನುಮೋದಿಸಬೇಕಾಗಿದೆ.
ಆಗ ಮಾತ್ರ ಅವುಗಳು ಕಾರ್ಯರೂಪಕ್ಕೆ ಬರಲಿವೆ . ಹಾಗಾಗಿ ಶೃಂಗಸಭೆ ಮುಗಿದ ನಂತರವೂ, ದೊಡ್ಡ ದೇಶಗಳು ಸಂಧಾನ ಪ್ರಕ್ರಿಯೆಯನ್ನು ಮುಂದುವರೆಸುತ್ತವೆ. COP- 26 ಶೃಂಗಸಭೆಯ ಅಧ್ಯಕ್ಷತೆ ವಹಿಸಿದ್ದ ಬ್ರಿಟಿಷ್ ಸಚಿವ ಭಾರತೀಯ ಮೂಲದ ಅಲೋಕ್ ಶರ್ಮಾ ಅವರು , ಹವಾಮಾನ ಬದಲಾವಣೆ ಸಮಸ್ಯೆಗೆ ವಿಶ್ವದ ರಾಷ್ಟ್ರಗಳು ಉತ್ತಮ ಪರಿಹಾರ ಕಂಡುಕೊಳ್ಳುತ್ತವೆ ಎಂದು ಆಶಿಸಿದ್ದಾರೆ. ಇದುವರೆಗಿನ ಬಂದಿರುವ ಯಾವುದೇ ಪ್ರಸ್ತಾಪಗಳು ಜಾಗತಿಕ ತಾಪಮಾನ ಏರಿಕೆಯನ್ನು ತಡೆಯಲು ಸಾಧ್ಯವಿಲ್ಲ, COP-26 ನಲ್ಲಿ ಮತ್ತಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ತಜ್ಞರು ನಂಬುತ್ತಾರೆ.