ಮೂಡಲಗಿ

ಹಿಂದುಗಳ ಒಗ್ಗಟ್ಟು ತಂದ ನಿಧಿ ಸಮರ್ಪಣೆ ಅಭಿಯಾನ

ಹಿಂದುಗಳ ಒಗ್ಗಟ್ಟು ತಂದ ನಿಧಿ ಸಮರ್ಪಣೆ ಅಭಿಯಾನ

ಮೂಡಲಗಿ 21: ಶ್ರೀರಾಮ ಜನ್ಮಭೂಮಿ ನಿಧಿ ಸಮರ್ಪಣಾ ಅಭಿಯಾನ ಜಾತಿಯ ಎಲ್ಲೆ ಮೀರಿ ಹಿಂದೂ ಸಮಾಜವನ್ನು ಒಂದುಗೂಡಿಸುತ್ತಿದೆ ಎಂದು ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಹೇಳಿದರು.

ಕಲ್ಲೋಳಿ ಪಟ್ಟಣದಲ್ಲಿ ಸೋಮವಾರ ಜ.18 ರಂದು ಶ್ರೀರಾಮ ಮಂದಿರದಲ್ಲಿ ಪೂಜೆ ಸಲ್ಲಿಸಿ, ಶ್ರೀರಾಮ ಮಂದಿರ ಟ್ರಸ್ಟ್ ಕಮೀಟಿ ಕಲ್ಲೋಳಿಯಿಂದ ನಿಧಿ ಸಮರ್ಪಣೆ ಪಡೆಯುವ ಮೂಲಕ ಮಹಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಇಂದು ಇಡಿ ದೇಶವೇ ಭಾವಪರವಶಕ್ಕೆ ಒಳಗಾಗಿದೆ ಮತ್ತು ಪ್ರತಿಯೊಬ್ಬರು ಭವ್ಯ ರಾಮ ಮಂದಿರ ನಿರ್ಮಾಣಕ್ಕಾಗಿ ತಮ್ಮನ್ನು ಸಮರ್ಪಿಸಿಕೊಳ್ಳುತ್ತಿದ್ದಾರೆ. ಈ ನಿಸ್ವಾರ್ಥ ಮನೋಭಾವವೆ ಭಾರತವನ್ನು ವಿಶ್ವಗುರುವಾಗಿಸುವ ಶಕ್ತಿಯಾಗಲಿದೆ ಎಂದರು.

ಟ್ರಸ್ಟ್ ಕಮೀಟಿಯಿಂದ ರಾಜ್ಯಸಭಾ ಸದಸ್ಯರಾದ ಈರಣ ಕಡಾಡಿ ಹಾಗೂ ಬಿಡಿಸಿಸಿ ಬ್ಯಾಂಕ ನಿರ್ದೇಶಕರಾದ ಸತೀಶ ಕಡಾಡಿ ಅವರಿಗೆ ಸನ್ಮಾನಿಸಿ ಗೌರವಿಸಿದರು.

ತವಗಮಠದ ಬ್ರಹ್ಮಶ್ರೀ ಬಾಳಯ್ಯ ಮಹಾಸ್ವಾಮಿಗಳು, ಜಿಲ್ಲಾ ಸಂಘ ಚಾಲಕರಾದ ಎಂ ವಾಯ್ ಹಾರುಗೇರಿ, ತಾಲೂಕ ಅಭಿಯಾನ ಸಂಯೋಜಕರಾದ ಚೂನಪ್ಪ ಹಟ್ಟಿ, ಭೂಪಾಲ ಖೆಮಲಾಪೂರ, ಹರೀಶ ಕಾಳೆ, ಬಸವರಾಜ ಮಾಳೆದವರ, ಸಹದೇವ ಖಾನಾಪೂರ, ಶ್ರೀಶೈಲ ಬಿ ಬಿ ಬೆಳಕೂಡ, ರಾಯಪ್ಪ ಪಾಟೀಲ, ಡಾ| ಮಹಾಂತೇಶ ಕಡಾಡಿ, ಸುರೇಶ ಪಾಟೀಲ, ತುಪ್ಪದ, ದತ್ತು ಕಲಾಲ, ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.

ಮೂಡಲಗಿ: ಕಲ್ಲೋಳಿ ಪಟ್ಟಣದಲ್ಲಿ ಶ್ರೀರಾಮ ಮಂದಿರದಲ್ಲಿ  ಶ್ರೀರಾಮ ಮಂದಿರ ಟ್ರಸ್ಟ್ ಕಮೀಟಿ ಕಲ್ಲೋಳಿಯಿಂದ ನಿಧಿ ಸಮರ್ಪಣೆ ಪಡೆಯುವ ಮೂಲಕ ಮಹಾ ಅಭಿಯಾನಕ್ಕೆ ಚಾಲನೆ ನೀಡುತ್ತಿರುವುದು. ರಾಜ್ಯಸಭಾ ಸದಸ್ಯರಾದ ಈರಣ ಕಡಾಡಿ, ತವಗಮಠದ ಬ್ರಹ್ಮಶ್ರೀ ಬಾಳಯ್ಯ ಮಹಾಸ್ವಾಮಿಗಳು, ಜಿಲ್ಲಾ ಸಂಘ ಚಾಲಕರಾದ ಎಂ ವಾಯ್ ಹಾರುಗೇರಿ, ತಾಲೂಕ ಅಭಿಯಾನ ಸಂಯೋಜಕರಾದ ಚೂನಪ್ಪ ಹಟ್ಟಿ ಉಪಸ್ಥಿತರಿದ್ದರು.  

ಸುದ್ದಿ ಓದಿ