ಅಂತರರಾಷ್ಟ್ರೀಯ

ಪಲಾಯನಗೈದ ಶ್ರೀಲಂಕಾ ಅಧ್ಯಕ್ಷ ಗೊಟಾಬಯ ರಾಜಪಕ್ಸೆ

ಪಲಾಯನಗೈದ ಶ್ರೀಲಂಕಾ ಅಧ್ಯಕ್ಷ ಗೊಟಾಬಯ ರಾಜಪಕ್ಸೆ

ಕೊಲಂಬೊ: ಜುಲೈ 09:ಶ್ರೀಲಂಕಾದ ಅಧ್ಯಕ್ಷ ಗೊಟಾಬಯ ರಾಜಪಕ್ಸೆ ಅವರು ಶನಿವಾರ ಕೊಲಂಬೊದಲ್ಲಿನ ತಮ್ಮ ಅಧಿಕೃತ ನಿವಾಸದಿಂದ ಪಲಾಯನಗೈದಿದ್ದಾರೆ.ಸಾವಿರಾರು ಪ್ರತಿಭಟನಾಕಾರರು ಗೊಟಾಬಯ ರಾಜಪಕ್ಸೆ ಅವರ ಮನೆ ಎದುರು ಜಮಾಯಿಸಿದ್ದು, ಪೊಲೀಸ್ ಬ್ಯಾರಿಕೇಡ್ ಗಳನ್ನು ಭೇದಿಸಿ ಕಾಂಪೌಂಡ್ ಒಳಗೆ ನುಗ್ಗಲು ಪ್ರಯತ್ನಿಸಿದ್ದಾರೆ. ಅಧ್ಯಕ್ಷರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ ಎಂದು ಉನ್ನತ ರಕ್ಷಣಾ ಮೂಲವು ಎಎಫ್ ಪಿಗೆ ತಿಳಿಸಿದೆ.

ದೇಶದಾದ್ಯಂತದ ಪ್ರತಿಭಟನಾಕಾರರು ಶನಿವಾರ ಮುಂಚಿತವಾಗಿ ಕೊಲಂಬೊಕ್ಕೆ ಬಸ್‌ಗಳು, ರೈಲುಗಳು ಮತ್ತು ಟ್ರಕ್‌ಗಳಲ್ಲಿ ಆಗಮಿಸಿ ಆರ್ಥಿಕ ವಿನಾಶದಿಂದ ರಕ್ಷಿಸುವಲ್ಲಿ ಸರ್ಕಾರದ ವೈಫಲ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.ಜನರು ಶ್ರೀಲಂಕಾದ ಧ್ವಜಗಳು ಮತ್ತು ಹೆಲ್ಮೆಟ್ ಗಳನ್ನು ಹಿಡಿದು ಪ್ರತಿಭಟನೆ ನಡೆಸಿದ ಜನರು ಗೋಟಾ ಮನೆಗೆ ಹೋಗು ಎಂದು ಘೋಷಣೆ ಕೂಗಿದರು.

ಸುದ್ದಿ ಓದಿ