ಶುಕ್ರವಾರ ‘ಅಸುರ ಸಂಹಾರ’
ಬೆಂಗಳೂರು, ಫೆ 25, ಹರಿಪ್ರಸಾದ್ ನಿರ್ಮಿಸಿ, ನಾಯಕನಾಗಿ ನಟಿಸಿರುವ ‘ಅಸುರ ಸಂಹಾರ’ ಚಿತ್ರ ಇದೇ ಶುಕ್ರವಾರ ಬಿಡುಗಡೆಯಾಗಲಿದೆ.ಒಳ್ಳೆ ಸಿನಿಮಾ ಮಾಡುವ ಯೋಜನೆ ಇತ್ತು ಗೆಳೆಯ ಪ್ರದೀಪ್ ಈ ಕತೆ ಹೇಳಿದಾಗ ಸಿನಿಮಾ ಶುರುವಾಯ್ತು.ಚಿತ್ರದಲ್ಲಿ ನನ್ನದು ಸ್ಟಿಲ್ ಫೋಟೋಗ್ರಾಫರ್ ಪಾತ್ರವಾಗಿದ್ದು ಮುಂದಿನ ತಂಗಿಯ ಒಳ್ಳೆಯ ಅಣ್ಣ ಆಗಿರುತ್ತೇನೆ ಎಂದು ನಾಯಕ ಹರಿಪ್ರಸಾದ ತಿಳಿಸಿದ್ದಾರೆ.
ಸೆನ್ಸಾರ್ ಮಂಡಲಿಯಿಂದ ಯು/ಎ ಪ್ರಮಾಣ ಪತ್ರ ಪಡೆದುಕೊಂಡಿರುವ ಚಿತ್ರವನ್ನು ಪ್ರದೀಪ್ ನಿರ್ದೇಶಿಸಿದ್ದಾರೆ. ರಕ್ತ ಪಾತ ಅತ್ಯಾಚಾರಕ್ಕೆ ಸಂಬಂದಿಸಿದ ಸಿನಿಮಾ ಇದಾಗಿದೆ. ಅಣ್ಣಾ ತಂಗಿ ಸೆಂಟಿಮೆಂಟ್ ಕೂಡ ಇದೆ. ಅತ್ಯಾಚಾರಿಗಳಿಗೆ ಹೇಗೆ ಶಿಕ್ಷೆಯಾಗಬೇಕು, ಅತ್ಯಾಚಾರಿಗಳನ್ನು ಹೇಗೆ ಕಂಟ್ರೋಲ್ ಮಾಡಬಹುದು ಎಂದು ತೋರಿಸಲಾಗಿದೆ ಎಂದು ಪ್ರದೀಪ್ ತಿಳಿಸಿದ್ದಾರೆ. ಹಾಸನದ ಶ್ರವಣಬೆಳಗೊಳ, ಚನ್ನರಾಯಪಟ್ಟಣ ಮುಂತಾದ ಕಡೆ ಚಿತ್ರೀಕರಣ ಆಗಿದ್ದು, ಹಾಡು ಟ್ರೇಲರ್ ಗೆ ಒಳ್ಳೆ ರೆಸ್ಪಾನ್ಸ್ ಬಂದಿದೆ.ಹರಿಪ್ರಸಾದ್, ಹರ್ಷಲ್ ರವಿ, ಲೋಕಿ, ದೀಕ್ಷಾ ಶೆಟ್ಟಿ, ಶಿವು, ಮಂಜುನಾಥ್ ಮೊದಲಾದವರು ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 