ಜು.27 ರಿಂದ ಜು.29 ರ ವರೆಗೆ ಉಚಿತ ಆರೋಗ್ಯ ತಪಾಸನಾ ಶಿಬಿರ
Free health check-up camp from July 27 to July 29
ಕಾಗವಾಡ 25 : ಮಿರಜ್‌ದ ಸಮರ್ಥ ನ್ಯೂರೋ ಮತ್ತು ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯು ಜುಲೈ 30 ಕ್ಕೆ ರೋಗಿಗಳ ಸಾರ್ಥಕ ಸೇವೆಯಲ್ಲಿ 7 ವರ್ಷಗಳನ್ನು ಪೂರೈಸಿ, 8 ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಜುಲೈ 27 ರಿಂದ ಜುಲೈ 29 ರ ವರೆಗೆ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಆಸ್ಪತ್ರೆಯ ವೈದ್ಯ ಡಾ. ರವೀಂದ್ರ ಪಾಟೀಲ ತಿಳಿಸಿದ್ದಾರೆ.
ಅವರು, ಶುಕ್ರವಾರ ದಿ. 25 ರಂದು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು. ಕಳೆದ 7 ವರ್ಷಗಳಿಂದ ನಮ್ಮ ಆಸ್ಪತೆಯಲ್ಲಿ ಉತ್ತರ ಕರ್ನಾಟಕ ಮತ್ತು ಪಶ್ಚಿಮ ಮಹಾರಾಷ್ಟ್ರದ ರೋಗಿಗಳಿಗೆ ಸೇವೆ ನೀಡುತ್ತಾ ಬಂದಿರುತ್ತೇವೆ. ಆಸ್ಪತ್ರೆಯ 7ನೇ ವಾರ್ಷಿಕೋತ್ಸವದ ನಿಮಿತ್ಯ 3 ದಿನಗಳ ಕಾಲ ಉಚಿತ ಆರೋಗ್ಯ ತಪಾಸನೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಶಿಬಿರದಲ್ಲಿ ಆರೋಗ್ಯ ತಪಾಸನೆ ಸಂಪೂರ್ಣ ಉಚಿತವಾಗಿದ್ದು, ನ್ಯೂರೋ ಸರ್ಜರಿ, ಅರ್ಥೋಪಿಡಿಕ್ಸ್, ಪಿಡಿಯಾಟ್ರಿಕ್ಸ್ (ಚಿಕ್ಕಮಕ್ಕಳ ರೋಗ), ಮನೋರೋಗ, ಫಿಜಿಯೋಥೆರಪಿ, ಜನರಲ್ ಸರ್ಜನ್, ಡೈಟಿಸಿಯನ್ ಕುರಿತು ತಜ್ಞ ವೈದ್ಯರಿಂದ ವಿಶೇಷ ಮಾರ್ಗದರ್ಶನ ದೊರೆಯಲಿದೆ.
ಶಿಬಿರದಲ್ಲಿ ರೋಗಿಗಳಿಗೆ ಅವಶ್ಯಕತೆ ಇದ್ದಲ್ಲಿ ಶಸ್ತ್ರಚಿಕಿತ್ಸೆಯನ್ನು ಶೇ.50 ರಷ್ಟು ರಿಯಾಯತಿ ಮತ್ತು ಓಷಧ ಹಾಗೂ ಪ್ರಯೋಗಾಲಯದ ಸೇವೆಗಳ ಮೇಲೆ ಶೇ.30 ರಷ್ಟು ರಿಯಾಯತಿಯನ್ನು ನೀಡಲಾಗುವುದು.
ಈಗಾಗಲೇ ರೂ. 9000 ಗೆ ಲಭ್ಯವಿರುವ ಎಚ್‌ಬಿ, ಬ್ಲಡ್ ಶುಗರ್, ಕೆಎಫ್‌ಟಿ/ಎಲ್‌ಎಫ್‌ಟಿ, ಮೂಳೆ ಸಾಂದ್ರತೆ (ಬೊನ್ ಡಿನ್ಸಿಟಿ), ವ್ಹಿಟೆಮಿನ್-ಡಿ, ಎದೆಯ ಎಕ್ಸ-ರೇ, ಇಸಿಜಿ, ಸಿಟಿ-ಸ್ಕ್ಯಾನ್, ಟಿಎಫ್‌ಟಿ, ಲಿಪಿಡ್ ಪ್ರೋಫೈಲ್ ಒಳಗೊಂಡ ಹೆಲ್ತ್ ಚೆಕ್‌ಅಪ್ ಪ್ಯಾಕೇಜ್‌ವು ಶಿಬಿರದಲ್ಲಿ ಕೇವಲ ರೂ. 1499 ರಲ್ಲಿ ಲಭ್ಯವಿದೆ. ಆದ್ದರಿಂದ ಉತ್ತರ ಕರ್ನಾಟಕ ಮತ್ತು ಪಶ್ಚಿಮ ಮಹಾರಾಷ್ಟ್ರದ ರೋಗಿಗಳು ಇದರ ಲಾಭ ಪಡೆದುಕೊಳ್ಳಬೇಕೆಂದು ಡಾ. ರವೀಂದ್ರ ಪಾಟೀಲ ತಿಳಿಸಿದ್ದಾರೆ.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 