ಜಮಖಂಡಿ

ಸಾಮಾಜಿಕ ಜನಜಾಗೃತಿ ಪಾದಯಾತ್ರಿಕರಿಗೆ ಮುಸ್ಲಿಂ ಸಮಾಜದಿಂದ ಉಚಿತ ದಾಸೋಹ

ಸಾಮಾಜಿಕ ಜನಜಾಗೃತಿ ಪಾದಯಾತ್ರಿಕರಿಗೆ ಮುಸ್ಲಿಂ ಸಮಾಜದಿಂದ ಉಚಿತ ದಾಸೋಹ


ಲೋಕದರ್ಶನ ವರದಿ 

ಜಮಖಂಡಿ 06: ಸೂರ್ಯಸಿಂಹಾಸನಾಧೀಶ್ವರ ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ‌್ಯರ ದ್ವಾದಶ ಪೀಠಾರೋಹಣ ಮಹೋತ್ಸವ ಮತ್ತು ಜನ್ಮ ಸುವರ್ಣಮಹೋತ್ಸವದ ವಿವಿಧ ಧಾರ್ಮಿಕ, ಸಾಮಾಜಿಕ ಜನಜಾಗೃತಿ ಪಾದಯಾತ್ರಿಕರಿಗೆ ಮುಸ್ಲಿಂ ಸಮಾಜದಿಂದ ಉಚಿತ ದಾಸೋಹ ನಡೆಯಿತು. 


ನಗರದ ಅಂಜುಮಾನ್‌-ಇಸ್ಲಾಂ-ಕಮೀಟಿ, ಮುಸ್ಲಿಂ ಸಮಾಜ ಮತ್ತು ಯುವಕರ ಸಂಘಟನೆ ನೂರಾರು ಸದಸ್ಯರು ಶ್ರೀಶೈಲ ಪಾದಯಾತ್ರೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಬಾಳೆಹಣ್ಣು, ಅರ್ಧ ಲೀಟರ ನೀರಿನ ಬಾಟಲಿ, ಸಿಹಿ ಶರಬತ ವಿತರಿಸುವ ಮೂಲಕ ಮಾನವೀಯತೆಯೊಂದಿಗೆ ಭಾವ್ಯಕ್ಯದ ಕೊಂಡಿ ಇನ್ನಷ್ಟು ಭದ್ರಗೊಳಿಸಿದರು. ಪಾದಯಾತ್ರೆಯಲ್ಲಿದ್ದ ಸಾವಿರಾರು ಜನರಿಗೆ ಉಚಿತವಾಗಿ ಬಾಳೆಹಣ್ಣು, ಶುದ್ಧ ಕುಡಿಯುವ ನೀರು, ಸಿಹಿ ಶರಬತ್ ವಿತರಿಸುವ ಉಚಿತ ದಾಸೋಹ ಮೂಲಕ ಮಾನವೀಯತೆ ಮೆರದರು.  

ಸಾಮಾಜಿಕ ಸೇವೆಗಳ ಹಿಂದು-ಮುಸ್ಲಿಂರ ಬಾಂಧ್ಯವ್ಯಗಳು ಮತ್ತಷ್ಟು ಗಟ್ಟಿಗೊಳಿಸಿದೆ. ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರನ್ನು ಮುಸ್ಲಿಂ ಸಮಾಜದ ಪರವಾಗಿ ಅಂಜುಮಾನ್‌-ಇಸ್ಲಾಂ-ಕಮೀಟಿ ಅಧ್ಯಕ್ಷ ಝಾಕೀರ ಹುಸೇನ ನದಾಫ ಸನ್ಮಾನಿಸಿದರು. 


ಶ್ರೀಶೈಲಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರ ಪಾದಯಾತ್ರೆಯಲ್ಲಿ ಶಾಸಕ ಆನಂದ ನ್ಯಾಮಗೌಡ, ಜಗದೀಶ ಗುಡಗುಂಟಿ, ಕಲ್ಯಾಣಮಠದ ಗೌರಿಶಂಕರ ಶಿವಾಚಾರ್ಯರು, ರುದ್ರಾವಧೂತ ಮಠದ ಸಹಜಾನಂದ ಅವಧೂತರು, ಮುಂತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯರು, ಕೊಣ್ಣೂರ ಹೊರಗಿನ ಮಠದ ಡಾ.ವಿಶ್ವಪ್ರಭುದೇವರು ಶಿವಾಚಾರ್ಯರು, ಬಸವರಾಜ ನ್ಯಾಮಗೌಡ, ಅನ್ವರ ಮೋಮಿನ, ಸುಲೇಮಾನ ಸೈಯದ, ಇರಫಾನ ಪಠಾಣ, ಎಂ.ಎಚ್‌.ಮುಲ್ಲಾ, ಬಿಜರಅಲಿ ಫೆಂಡಾರಿ, ಸಾಧಿಕಹುಸೇನ ಮಾಲದಾರ, ಎಂ.ಆರ್‌.ಶೇಖ, ಮುಸಾ ಮುಲ್ಲಾ, ಬಂದೇನವಾಜ ಬೇಪಾರಿ, ಇಬಶಿಯಾರ ಅವಟಿ, ಎನ್‌.ಎ.ಅತ್ತಾರ, ಸಿಂಕದರ ಶೇಖ, ಸಲೀಂ ಅವಟಿ, ಅಶಪಾಕ ಪಕಾಲಿ, ಯಾಶೀನ ಲೋದಿ, ಟಿ.ಎಂ.ಪಾರತನಳ್ಳಿ, ಎನ್‌.ಎಂ.ಖುದಾವನ, ಉಮರ ಕಲಾದಗಿ, ಮುನ್ನಾ ಪಾಶ್ಚಾಪೂರ, ಅಸ್ಲಂ ಗೋಲಂದಾಜ, ದಸ್ತಗೀರ ಕಂಕಣವಾಡಿ, ಸಾಜೀದ ಕಡಕೋಳ, ನಬಿ ಆಲಗೂರ ಸಹಿತ ನೂರಾರು ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಪಾಲ್ಗೊಂಡಿದ್ದರು. 


ಸುದ್ದಿ ಓದಿ