ಸೌಂದತ್ತಿ

ಉಚಿತ ನೇತ್ರ ಚಿಕಿತ್ಸಾ ಶಿಬಿರ: ಮಾಮನಿ ಪರೀಶೀಲನೆ

ಉಚಿತ ನೇತ್ರ ಚಿಕಿತ್ಸಾ ಶಿಬಿರ: ಮಾಮನಿ ಪರೀಶೀಲನೆ

ಲೋಕದರ್ಶನ ವರದಿ 


ಸವದತ್ತಿ 15: ಕಣ್ಣಿನ ತೊಂದರೆಯಿರುವಂತ ಪ್ರತಿಯೊಬ್ಬರಿಗೂ ಚಿಕಿತ್ಸೆ ಕೊಡಿಸುವಂತ ಕಾರ್ಯವನ್ನು ಮಾಡಲಾಗುತ್ತಿದ್ದು, ಪ್ರತಿಯೊಬ್ಬರು ಕೋವಿಡ್ ನಿಯಮಾವಳಿಯನ್ನು ಪಾಲಿಸುವದರ ಜೊತೆಗೆ ಶಿಬಿರವನ್ನು ಯಶಸ್ವಿಗೊಳಿಸಬೇಕೆಂದು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಹೇಳಿದರು. 

ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಿ.ಎಮ್‌.ಮಾಮನಿ ಚಾರಿಟೇಬಲ್ ಟ್ರಸ್ಟ್‌ ಆಶ್ರಯದಲ್ಲಿ ನಡೆಯುತ್ತಿರುವ ಉಚಿತ ನೇತ್ರ ಚಿಕಿತ್ಸಾ ಶಿಬಿರದಲ್ಲಿ ಚಿಕಿತ್ಸೆ ಪಡೆದುಕೊಂಡಂತ ರೋಗಿಗಳ ಆರೋಗ್ಯ ವಿಚಾರಿಸಿ ವ್ಯವಸ್ಥೆಯ ಕುರಿತು ಪರೀಶೀಲನೆ ಮಾಡಿ ಅವರು ಮಾತನಾಡಿದರು. 

ತಜ್ಞ ವೈದ್ಯರಿಂದ ಉತ್ತಮವಾದಂತ ಚಿಕಿತ್ಸೆ ನಡೆಯುತ್ತಿದ್ದು, ರೋಗಿಗಳಿಗೆ ಎಲ್ಲ ರೀತಿಯ ಸೌಲಭ್ಯವನ್ನು ಸಿ.ಎಮ್‌.ಮಾಮನಿ ಚಾರಿಟೇಬಲ್ ಟ್ರಸ್ಟ್‌ನ ಸದಸ್ಯರು ಜವಾಬ್ದಾರಿಯಿಂದ ನಿರ್ವಹಿಸುತ್ತಿದ್ದಾರೆ ಎಂದರು. ಚಿಕಿತ್ಸೆ ಪಡೆದುಕೊಂಡಂತ ರೋಗಿಗಳನ್ನು ಅಂಬುಲೆನ್ಸ್‌ಗಳ ಮುಖಾಂತರ ಅವರವರ ಮನೆಗೆ ತಲುಪಿಸುವಂತ ವ್ಯವಸ್ಥೆ ಮಾಡಲಾಗುತ್ತಿದ್ದು, ಶಿಬಿರಕ್ಕೆ ಆಗಮಿಸುವಂತ ಎಲ್ಲರಿಗೂ ವ್ಯವಸ್ಥಿತವಾಗಿ ವೈದ್ಯಕೀಯ ಚಿಕಿತ್ಸೆ ಮತ್ತು ಓಷಧಿ ಹಾಗೂ ಊಟೋಪಚಾರದ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು. 

ಮುಖ್ಯವೈದ್ಯಾಧಿಕಾರಿ ಡಾ.ಎಚ್‌.ಎಮ್‌.ಮಲ್ಲನಗೌಡ್ರ ಮಾತನಾಡಿ, ಪ್ರತಿನಿತ್ಯ ಕೋವಿಡ್ ನಿಯಮಾವಳಿಯನ್ನು ಗಮನದಲ್ಲಿಟ್ಟುಕೊಂಡು ನಾಲ್ಕು ಜನ ನೇತ್ರತಜ್ಞ ವೈದ್ಯರಿಂದ 100 ರೋಗಿಗಳಿಗೆ ಚಿಕಿತ್ಸೆ ಕೊಡಿಸುವಂತ ಕಾರ್ಯ ನಡೆಯುತ್ತಿದೆ ಎಂದರು. ಶಿಬಿರದ ಸಮಾರೋಪದವರೆಗೆ ಅಂದಾಜು 6ನೂರಕ್ಕೂ ಅಧಿಕ  ಜನರಿಗೆ ನೇತ್ರ ಶಸ್ತ್ರ ಚಿಕಿತ್ಸೆಯನ್ನು ನೀಡುವ ಗುರಿ ಹೊಂದಲಾಗಿದೆ ಎಂದರು. 

ಡಾ.ಎಸ್‌.ಬಿ.ಹಿತ್ತಲಮನಿ, ಡಾ.ಸಲೀಮ ಕಿತ್ತೂರ, ಶಿವಾನಂದ ಹೂಗಾರ, ಸಿ.ಎಸ್‌.ಪಟ್ಟಣಶೆಟ್ಟಿ, ಅರ್ಜುನ ಅಮ್ಮೋಜಿ, ಮೌಲಾಸಾಬ ತಬ್ಬಲಜಿ, ಟಿ.ಎಚ್‌.ಓ ಡಾ.ಮಹೇಶ ಚಿತ್ತರಗಿ, ಡಾ.ಪ್ರಕಾಶ ಉಪಸ್ಥಿತರಿದ್ದರು. 


ಸುದ್ದಿ ಓದಿ