ಅಂತರರಾಷ್ಟ್ರೀಯ

ಮಾಲಿಯಲ್ಲಿ ಸ್ಫೋಟ, ನಾಲ್ವರು ಭದ್ರತಾ ಸಿಬ್ಬಂದಿ ಹತ

ಮಾಲಿಯಲ್ಲಿ  ಸ್ಫೋಟ, ನಾಲ್ವರು ಭದ್ರತಾ ಸಿಬ್ಬಂದಿ ಹತ
ಪ್ರಾತಿನಿಧ್ಯ ಉದ್ದೇಶಕ್ಕಾಗಿ ಮಾತ್ರ ಚಿತ್ರ

ಬಮಾಕೊ, ಆಗುಸ್ಟ್ 24 : ಮಾಲಿಯಲ್ಲಿ ಬಂಡುಕೋರರ ಗುಂಪು ನಡೆಸಿದ ಸುಧಾರಿತ ಸ್ಫೋಟಕ ದಾಳಿಯಲ್ಲಿ ನಾಲ್ವರು  ಭದ್ರತಾ ಸಿಬ್ಬಂದಿ ಹತರಾಗಿದ್ದಾರೆ. 

ಸಿಬ್ಬಂದಿ  ವಾಹನವು ಬಂಡಿಯಾಗರ ಪ್ರದೇಶದಲ್ಲಿ ಸ್ಫೋಟಕಕ್ಕೆ ಡಿಕ್ಕಿ ಹೊಡೆದಿದೆ. ಮಾಲಿಯಲ್ಲಿ ರಾಜಕೀಯ ಅಸ್ಥಿರತೆಯ ಮಧ್ಯೆ ಯಾವುದೇ ವ್ಯಕ್ತಿ ಅಥವಾ ಗುಂಪು ದಾಳಿಯ ಹೊಣೆಯನ್ನು ಈವರೆಗೆ ಹೊತ್ತುಕೊಂಡಿಲ್ಲ.

ಉತ್ತರ ಮಾಲಿಯ ಗಾವೊದಲ್ಲಿ, ಅಪರಿಚಿತ ಶಸ್ತ್ರಸಜ್ಜಿತ ವ್ಯಕ್ತಿಗಳು ಯುವಕರ ಗುಂಪಿನ ಮೇಲೆ ಗುಂಡು ಹಾರಿಸಿದರು, ಕನಿಷ್ಠ ಮೂವರನ್ನು ಕೊಂದು ಇನ್ನೊಬ್ಬರನ್ನು ಗಾಯಗೊಳಿಸಿದ್ದಾರೆ ಎಂದು ಪ್ರತ್ಯಕ್ಷ ಸಾಕ್ಷಿಗಳು ಹೇಳಿವೆ. ಇದೇ   18 ರಂದು ಮಾಲಿಯಲ್ಲಿ ದಂಗೆಕೋರ ಸೈನಿಕರು ಅಧಿಕಾರ ವಶಪಡಿಸಿಕೊಂಡ ನಂತರ ಈ ಘಟನೆಗಳು ಸಂಭವಿಸಿವೆ.

ಸುದ್ದಿ ಓದಿ