ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ದೊರೆತಿದ್ದ ನಾಲ್ವರು ಭಾರತೀಯರ ಮೃತದೇಹದ ಗುರುತು ಪತ್ತೆ
ನ್ಯೂಯಾರ್ಕ್/ಟೊರೊಂಟೊ: ಕೆನಡಾ/ಅಮೆರಿಕ ಗಡಿಯಿಂದ ಸುಮಾರು 12 ಮೀಟರ್ ದೂರದಲ್ಲಿರುವ ಮ್ಯಾನಿಟೋಬಾದ ಎಮರ್ಸನ್ ಬಳಿ ಜನೆವರಿ 19ರಂದು ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ನಾಲ್ವರನ್ನು ಭಾರತೀಯ ಮೂಲದವರು ಎಂದು ಕೆನಡಾದ ಅಧಿಕಾರಿಗಳು ಗುರುತಿಸಿದ್ದಾರೆ.
ಮೃತರನ್ನು ಗುಜರಾತಿನ ಜಗದೀಶ್ ಬಲದೇವ್ ಭಾಯ್ ಪಟೇಲ್(39) ವೈಶಾಲಿಬೆನ್ ಜಗದೀಶ್ ಕುಮಾರ್ ಪಟೇಲ್ (37) ವಿಹಂಗಿ ಜಗದೀಶ್ ಕುಮಾರ್ ಪಟೇಲ್ (11) ಮತ್ತು ಧಾರ್ಮಿಕ್ ಜಗದೀಶ್ ಕುಮಾರ್ ಪಟೇಲ್(3) ಎಂದು ಪತ್ತೆಹಚ್ಚಲಾಗಿದೆ.
ಈ ನಾಲ್ವರು ಕೆನಡಾ/ಅಮೆರಿಕ ಗಡಿಯಿಂದ ಸುಮಾರು 12 ಮೀಟರ್ ದೂರದಲ್ಲಿರುವ ಮ್ಯಾನಿಟೋಬಾದ ಎಮರ್ಸನ್ ಬಳಿ ಮೂರು ವರ್ಷದ ಮಗು ಸೇರಿದಂತೆ ನಾಲ್ವರ ಮೃತದೇಹ ಪತ್ತೆಯಾಗಿತ್ತು. ಇದೀಗ ಕೆನಡಾ ಅಧಿಕಾರಿಗಳು ಭಾರತೀಯರು ಎಂದು ಕಂಡು ಹಿಡಿದಿದ್ದು, ಮೃತರ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ ಎಂದು ಭಾರತೀಯ ಹೈ ಕಮಿಷನ್ ಹೇಳಿದೆ.
ಶವ ಸ್ಥಿತಿಯಲ್ಲಿ ದೊರೆತಿದ್ದ ಈ ನಾಲ್ವರ ಮೃತದೇಹವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ವೈದ್ಯಕೀಯ ವರದಿಯ ಪ್ರಕಾರ ಇವರು ತೀವ್ರವಾದ ಚಳಿಯ ಕಾರಣ ಸಾವನ್ನಪ್ಪಿದ್ದಾರೆ ಎಂದು ಕೆನಡಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.