ಕ್ರೀಡೆ

ಕೊಹ್ಲಿ ಟೀಕಿಸಿದ್ದ ಮಾಜಿ ಆಟಗಾರ ರಿಕಿ ಪಾಂಟಿಂಗ್: ಕೋಚ್ ಗೌತಮ್ ಗಂಭೀರ್ ತೀವ್ರ ವಾಗ್ದಾಳಿ

ಕೊಹ್ಲಿ ಟೀಕಿಸಿದ್ದ ಮಾಜಿ ಆಟಗಾರ ರಿಕಿ ಪಾಂಟಿಂಗ್: ಕೋಚ್ ಗೌತಮ್ ಗಂಭೀರ್ ತೀವ್ರ ವಾಗ್ದಾಳಿ

ಮುಂಬೈ 11: ಭಾರತ ತಂಡದಲ್ಲಿ ವಿರಾಟ್ ಕೊಹ್ಲಿ ಅವರ ಫಾರ್ಮ್ ನ್ನು ಟೀಕಿಸಿದ್ದ ಆಸ್ಟ್ರೇಲಿಯಾದ ಮಾಜಿ ಆಟಗಾರ ರಿಕಿ ಪಾಂಟಿಂಗ್ ವಿರುದ್ಧ ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಸೋಮವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.

2024 ರಲ್ಲಿ ಆರು ಪಂದ್ಯಗಳಲ್ಲಿ ಕೇವಲ 22. 72 ರನ್ ಗಳ ಸರಾಸರಿ ಹೊಂದಿದ್ದಾರೆ. ಇತ್ತೀಚಿನ ಐಸಿಸಿ ವಿಮರ್ಶೆಯ ಸಂಚಿಕೆಯಲ್ಲಿ ಮಾತನಾಡಿದ ಪಾಂಟಿಂಗ್, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ ಆಡುವವರು ಐದು ವರ್ಷಗಳಲ್ಲಿ ಕೇವಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಶತಕ ಗಳಿಸಿರುವವರು ಬಹುಶ; ಯಾರು ಇರಲಕ್ಕಿಲ್ಲ ಎಂದು ಕೊಹ್ಲಿಯನ್ನು ಟೀಕಿಸಿದ್ದರು.

ಕಳೆದ ಐದು ವರ್ಷಗಳಲ್ಲಿ ಭಾರತದ ಬ್ಯಾಟರ್ ಕೇವಲ ಎರಡು ಟೆಸ್ಟ್ ಶತಕಗಳನ್ನು ಗಳಿಸಿದ್ದು, ಕೊಹ್ಲಿಯ ಫಾರ್ಮ್ ಕಳವಳಕಾರಿಯಾಗಿದೆ ಫಾರ್ಮ್ ಗೆ ಮರಳಲು ಕೊಯ್ಲಿ ಅವರಿಗೆ ಇನ್ನೂ ಸಾಮರ್ಥ್ಯವಿದೆ. ಅದನ್ನು ಮಾಡಲು ಆಸ್ಟ್ರೇಲಿಯಾಕ್ಕಿಂತ ಉತ್ತಮವಾದ ಸ್ಥಳವಿಲ್ಲ ಎಂದು ಪಾಂಟಿಂಗ್ ಇತ್ತೀಚೆಗೆ ಹೇಳಿದ್ದರು.

ಕೊಹ್ಲಿ ಈ ವರ್ಷ ಕಾನ್ಫುರದಲ್ಲಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ನಲ್ಲಿ ಕೇವಲ ಅರ್ಧ ಶತಕ ಗಳಿಸಿದ್ದರು. ಅವರ ಕೊನೆಯ ಟೆಸ್ಟ್ ಶತಕ ಜುಲೈ 2023 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧವಾಗಿತ್ತು. 2016 ರಿಂದ 2019 ರವರೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ 34 ಟೆಸ್ಟ್ ಪಂದ್ಯಗಳಲ್ಲಿ 2 ಶತಕದೊಂದಿಗೆ 31.68ರ ಸರಾಸರಿಯಲ್ಲಿ 1,838 ರನ್ ಗಳಿಸಿದ್ದಾರೆ.

ವಿರಾಟ್ ಬಗ್ಗೆ ಮೊದಲೇ ಹೇಳಿದ್ದೇನೆ, ಯಾವುದೇ ಸಂದೇಹವಿಲ್ಲ, ಅವರು ಶ್ರೇಷ್ಠ ಆಟಗಾರರಾಗಿದ್ದು, ಆಸ್ಟ್ರೇಲಿಯಾ ವಿರುದ್ಧ ಆಡಲು ಇಷ್ಟಪಡುತ್ತಾರೆ. ಅವರ ದಾಖಲೆ ಆಸ್ಟ್ರೇಲಿಯಾದಲ್ಲಿಯೇ ತುಂಬಾ ಚೆನ್ನಾಗಿದೆ. ಅದನ್ನು ಈ ಸರಣಿಯಲ್ಲಿಯೂ ಮಾಡಬಹುದು ಹಾಗಾಗಿ ಮೊದಲ ಪಂದ್ಯದಲ್ಲಿ ವಿರಾಟ್ ರನ್ ಗಳಿಸುವುದರಲ್ಲಿ ಆಶ್ಚರ್ಯವಾಗುವುದಿಲ್ಲ ಎಂದು ಗೌತಮ್ ಗಂಭೀರ್ ಹೇಳಿದರು..

ಇದೇ ತಿಂಗಳು ಆಸ್ಟ್ರೇಲಿಯಾದಲ್ಲಿ ಆರಂಭವಾಗಲಿರುವ ಬಾರ್ಡರ್‌–ಗವಾಸ್ಕರ್‌ ಟೆಸ್ಟ್‌ ಸರಣಿ ಕುರಿತು, 'ಆಸ್ಟ್ರೇಲಿಯಾ ನಮ್ಮ ಹೊಸ ಎದುರಾಳಿ ಮತ್ತು ಅದು ಹೊಸ ಸರಣಿ. ಖಂಡಿತವಾಗಿಯೂ ನಾವು ಜಯ ಸಾಧಿಸುತ್ತೇವೆ ಎಂಬ ವಿಶ್ವಾಸದೊಂದಿಗೆ ತೆರಳುತ್ತಿದ್ದೇವೆ' ಎಂದು ಹೇಳಿದ್ದಾರೆ.‌

ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಸರಣಿಯು ಇದೇ 26ರಿಂದ ಆರಂಭವಾಗಲಿದೆ. ಮೊದಲ ಪಂದ್ಯವು ಪರ್ತ್‌ನಲ್ಲಿ ನಡೆಯಲಿದೆ. ಒಂದು ವೇಳೆ ಆ ಪಂದ್ಯಕ್ಕೆ ರೋಹಿತ್‌ ಲಭ್ಯವಾಗದಿದ್ದರೆ, ವೇಗಿ–ಉಪನಾಯಕ ಜಸ್‌ಪ್ರೀತ್‌ ಬೂಮ್ರಾ ತಂಡ ಮುನ್ನಡೆಸಲಿದ್ದಾರೆ ಎಂದು ಗಂಭೀರ್‌ ಖಚಿತಪಡಿಸಿದ್ದಾರೆ.

ಸುದ್ದಿ ಓದಿ