ಅಂತರರಾಷ್ಟ್ರೀಯ

ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾಗೆ ಕೋವಿಡ್ ದೃಢ; ಶೀಘ್ರ ಚೇತರಿಸಿಕೊಳ್ಳಲಿ ಎಂದ ಮೋದಿ

ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾಗೆ ಕೋವಿಡ್ ದೃಢ; ಶೀಘ್ರ ಚೇತರಿಸಿಕೊಳ್ಳಲಿ ಎಂದ ಮೋದಿ

ನವದೆಹಲಿ: ಮಾರ್ಚ್ 14: ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರಿಗೆ ಕರೋನವೈರಸ್ ದೃಢಪಟ್ಟಿದೆ.

ನಾನು ಕೋವಿಡ್-೧೯ ಗೆ ತುತ್ತಾಗಿದ್ದೇನೆ. ನನಗೆ ಒಂದೆರಡು ದಿನಗಳಿಂದ ಗಂಟಲು ಕೆರೆತ ಕಾಣಿಸಿಕೊಂಡಿತ್ತು, ಅದನ್ನು ಹೊರತುಪಡಿಸಿ ನಾನು ಕ್ಷೇಮವಾಗಿದ್ದೇನೆ. ಲಸಿಕೆ ಹಾಕಿಸಿದ್ದಕ್ಕಾಗಿ ಮಿಚೆಲ್ ಮತ್ತು ನಾನು ಕೃತಜ್ಞರಾಗಿರುತ್ತೇವೆ ಎಂದು ಒಬಾಮಾ ಟ್ವೀಟ್ ಮಾಡಿದ್ದಾರೆ.

ನೀವು ಈಗಾಗಲೇ ಲಸಿಕೆ ಹಾಕದಿದ್ದರೆ, ಪ್ರಕರಣಗಳು ಕಡಿಮೆಯಾಗುತ್ತಿದ್ದರೂ ಸಹ ಲಸಿಕೆ ಹಾಕಿಸಿಕೊಳ್ಳಲು ವಿನಂತಿಸುತ್ತೇನೆ ಎಂದು ಹೇಳಿದರು.

ಟ್ವೀಟ್ ಗೆ ಪ್ರತ್ಯುತ್ತರ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಒಬಾಮಾ ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ

“COVID-19 ನಿಂದ ನೀವು ಶೀಘ್ರವಾಗಿ ಚೇತರಿಸಿಕೊಳ್ಳಲು ಮತ್ತು ನಿಮ್ಮ ಕುಟುಂಬದ ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮದಿಂದ ಇರಲೆಂದು ಶುಭಹಾರೈಸುತ್ತೇನೆ” ಎಂದು ಪ್ರಧಾನಿ ಮೋದಿ ಹೇಳಿದರು.

ವಿಶ್ವದಲ್ಲೇ ಅತಿ ಹೆಚ್ಚು ಹಾನಿಗೊಳಗಾದ ಕೋವಿಡ್ -19 ದೇಶವಾದ ಯುಎಸ್. ಇಲ್ಲಿಯವರೆಗೆ 79 ಮಿಲಿಯನ್‌ಗಿಂತಲೂ ಹೆಚ್ಚು ಸೋಂಕು ಕಾಣಿಸಿಕೊಂಡಿದೆ ಮತ್ತು ಸುಮಾರು 9,67,000 ಸಾವುಗಳು ಸಂಭವಿಸಿದೆ ಎಂಬುದು ಗಮನಾರ್ಹ.

ಸುದ್ದಿ ಓದಿ