ಸರ್ಕಾರದ ನಿಧಿ ದುರುಪಯೋಗ ಆರೋಪದ ಮೇಲೆ ಶ್ರೀಲಂಕಾದ ಮಾಜಿ ಅಧ್ಯಕ್ಷ ರಾನಿಲ್ ವಿಕ್ರಮ್‌ಸಿಂಘೆ ಬಂಧನ
ಕೊಲಂಬೊ 22: ಸರ್ಕಾರದ ನಿಧಿಯನ್ನು ದುರುಪಯೋಗ ಮಾಡಿಕೊಂಡ ಆರೋಪದ ಮೇಲೆ ಶ್ರೀಲಂಕಾದ ಮಾಜಿ ಅಧ್ಯಕ್ಷ ರಾನಿಲ್ ವಿಕ್ರಮ್‌ಸಿಂಘೆ ಅವರನ್ನು ಸಿಐಡಿ ಬಂಧಿಸಿದೆ.
ಸಿಂಘೆ ಅವರು ಅಮೆರಿಕದಲ್ಲಿ ಅಧಿಕೃತವಾಗಿ ಸಮಾರಂಭವೊಂದರಲ್ಲಿ ಭಾಗಿಯಾಗಿದ್ದರು. ಅಲ್ಲಿಂದ ಬಂದ ಬಳಿಕ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು 2023ರ ಸೆಪ್ಟೆಂಬರ್‌ನಲ್ಲಿ ವಿಕ್ರಮ್‌ಸಿಂಘೆ ಅವರು ಇಂಗ್ಲೆಂಡ್‌ಗೆ ತೆರಳಿದ್ದರು. ತಮ್ಮ ಈ ಪ್ರವಾಸಕ್ಕೆ ಸಾರ್ವಜನಿಕ ನಿಧಿಗಾಗಿ ಮೀಸಲಿಟ್ಟಿದ್ದ ಸರ್ಕಾರದ ಹಣವನ್ನು ಬಳಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಸಿಂಘೆ ಅವರು ಆರು ಬಾರಿ ಶ್ರೀಲಂಕಾದ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದಾರೆ.