ದಕ್ಷಿಣ ಕೊರಿಯಾ ಮಾಜಿ ಅಧ್ಯಕ್ಷ ಲೀ ಮತ್ತೆ ಜೈಲಿಗೆ
ಸಿಯೋಲ್,
ನವೆಂಬರ್ 2 : ದಕ್ಷಿಣ ಕೊರಿಯಾದ ಸುಪ್ರೀಂ ಕೋರ್ಟ್ ಕಳೆದ ವಾರ ನೀಡಿದ ತೀರ್ಪಿನ ನಂತರ ಅಲ್ಲಿನ
ಮಾಜಿ ಅಧ್ಯಕ್ಷ ಲೀ ಮ್ಯುಂಗ್-ಬಾಕ್ ಸೋಮವಾರ ಮತ್ತೆ ಜೈಲು ಸೇರಿದ್ದಾರೆ ಎಂದು ದಕ್ಷಿಣ ಕೊರಿಯಾದ ಯೋನ್ಹಾಪ್
ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕಳೆದ ಗುರುವಾರ, ಸುಪ್ರೀಂ ಕೋರ್ಟ್ ಮೇಲ್ಮನವಿಗಳನ್ನು ಎತ್ತಿಹಿಡಿದಿದ್ದು, 78 ವರ್ಷದ ಲೀಗೆ 17 ವರ್ಷ ಜೈಲು ಶಿಕ್ಷೆ ವಿಧಿಸುವುದರ ಜೊತೆಗೆ, ಸುಮಾರು 10.9 ದಶಲಕ್ಷ ಡಾಲರ್ ದಂಡವನ್ನೂ ವಿಧಿಸಿದೆ. ಅಲ್ಲದೆ, ಕಳ್ಳಸಾಗಣೆ ಮತ್ತು ಲಂಚದ ಆರೋಪದ ಮೇಲೆ 5 ದಶಲಕ್ಷ ಡಾಲರ್ ಮೊತ್ತದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಹ ನ್ಯಾಯಾಲಯ ಆದೇಶಿಸಿದೆ. ಲೀ ಅವರು ಈಗಾಗಲೇ ಒಂದು ವರ್ಷ ಜೈಲಿನಲ್ಲಿ ಕಳೆದಿರುವುದರಿಂದ ಇನ್ನೂ 16 ವರ್ಷ ಜೈಲು ಶಿಕ್ಷೆ ಅನುಭವಿಸಲಿದ್ದಾರೆ.
ಲೀ ಅವರನ್ನು ಸಿಯೋಲ್ ನ ಡೊಂಗ್ಬು ಬಂಧನಗೃಹಕ್ಕೆ ಸ್ಥಳಾಂತರಿಸಲಾಗಿದೆ ಎಂದು ಸುದ್ದಿವಾಹಿನಿ ವರದಿ ಮಾಡಿದೆ. ಇದೇ ಕೇಂದ್ರದಲ್ಲಿ ಅವರು ಈ ಹಿಂದೆ ಶಿಕ್ಷೆ ಅನುಭವಿಸಿದ್ದರು. ಲೀ ಅವರನ್ನು ಮತ್ತೊಮ್ಮೆ ಏಕಾಂತ ಬಂಧನದಲ್ಲಿಡುವ ಸಾಧ್ಯತೆ ಇದೆ.
ಲೀ ಅವರ ವಯಸ್ಸು ಮತ್ತು ಆರೋಗ್ಯ ಸ್ಥಿತಿಯನ್ನು ಪರಿಗಣಿಸಿ ಜೈಲಿಗೆ ಬದಲಾಗಿ ಬಂಧನ ಕೇಂದ್ರದಲ್ಲೇ ಮುಂದುವರೆಸುವ ಸಾಧ್ಯತೆ ಇದೆ ಎಂದು ನ್ಯಾಯ ಸಚಿವಾಲಯದ ಅಧಿಕಾರಿಯೊಬ್ಬರೊಬ್ಬರು ತಿಳಿಸಿದ್ದಾರೆ.
2008 ರಿಂದ 2013 ರವರೆಗೆ ಲೀ, ದಕ್ಷಿಣ ಕೊರಿಯಾದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 2018 ರಲ್ಲಿ ತಮ್ಮ ಒಡೆತನದ ಡಿಎಎಸ್ ಕಂಪೆನಿಯ ಕಾರ್ಪೊರೇಟ್ ನಿಧಿಗಳನ್ನು ದುರುಪಯೋಗಪಡಿಸಿಕೊಂಡಿದ್ದಕ್ಕೆ ಮತ್ತು ಸ್ಯಾಮ್‌ಸಂಗ್‌ನಂತಹ ಕಂಪನಿಗಳಿಂದ ಲಂಚ ಪಡೆದಿದ್ದಕ್ಕಾಗಿ, ಅವರನ್ನು ಬಂಧಿಸಿ ಶಿಕ್ಷೆಗೊಳಪಡಿಸಲಾಗಿದೆ.