ಅಂತರರಾಷ್ಟ್ರೀಯ

ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆಗೆ ಗುಂಡೇಟು; ಆರೋಪಿಯ ಹಿನ್ನೆಲೆಯೇನು?

ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆಗೆ ಗುಂಡೇಟು; ಆರೋಪಿಯ ಹಿನ್ನೆಲೆಯೇನು?

ಟೋಕಿಯೊ: ಜುಲೈ 08: ಭಾಷಣದ ವೇಳೆಯೇ ಜಪಾನ್‌ನ ಮಾಜಿ ಪ್ರಧಾನಿ ಶಿಂಜೋ ಅಬೆ ಮೇಲೆ ಶುಕ್ರವಾರ ನಾರಾ ಪ್ರದೇಶದಲ್ಲಿ ಗುಂಡಿನ ದಾಳಿ ನಡೆಸಿದ್ದು ಪ್ರಧಾನಿ ಸ್ಥಿತಿ ಗಂಭೀರವಾಗಿದೆ. ಬೆಳಗ್ಗೆ 11:30 ರ ಸುಮಾರಿಗೆ ಅವರ ಹಿಂದಿನಿಂದ 2 ಬಾರಿ ಗುಂಡು ಹಾರಿಸಲಾಗಿದೆ.

ಭಾನುವಾರದ ಮೇಲ್ಮನೆ ಚುನಾವಣೆ ನಡೆಯಲಿದ್ದು ಇದಕ್ಕಾಗಿ ಶಿಂಜೋ ಅಬೆ ಪ್ರಚಾರದ ಭಾಷಣ ಮಾಡ್ತಿದ್ರು. ಈ ವೇಳೆ 40 ವರ್ಷದ ವ್ಯಕ್ತಿಯೊಬ್ಬ ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ್ದ. ಈ ವೇಳೆ ಅವನನ್ನು ಹಿಡಿದು ಗನ್ ವಶಪಡಿಸಿಕೊಳ್ಳಲಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶಿಂಜೋ ಅಬೆ ಮೇಲಿನ ದಾಳಿ ಖಂಡಿಸಿದ್ದಾರೆ.

ಮಾಜಿ ಪ್ರಧಾನಿ ಶಿಂಜೋ ಹಬೆ ಹತ್ಯೆಗೆ ಪ್ರಯತ್ನಿಸಿದ ಆತ ಯಾರು ಎಂಬ ಬಗ್ಗೆ ಪ್ರಾಥಮಿಕವಾಗಿ ಸಿಕ್ಕ ಅಂಶಗಳು ಇಲ್ಲಿವೆ

* ಶೂಟರ್ ನನ್ನು ಸ್ಥಳೀಯ ವ್ಯಕ್ತಿ ಟೆಟ್ಸುಯಾ ಯಮಗಾಮಿ ಎಂದು ಗುರುತಿಸಲಾಗಿದೆ

* 41 ವರ್ಷದ ಟೆಟ್ಸುಯಾ ಯಮಗಾಮಿ ಮಾಜಿ ಮಿಲಿಟರಿ ವ್ಯಕ್ತಿ ಎಂದು ತಿಳಿದುಬಂದಿದೆ

* ಅವನು ಶಿಂಜೋ ಅಬೆ ಮೇಲೆ ಗುಂಡು ಹಾರಿಸಿದಾಗ 10 ಅಡಿ ದೂರದಲ್ಲಿ ನಿಂತಿದ್ದ

* ಶಿಂಜೋ ಅಬೆ ಭಾಷಣದ ಮಧ್ಯೆಯೇ ವೇದಿಕೆಯ ಮೇಲೆ ಕುಸಿದು ಬಿದ್ದರು. ಈ ವೇಳೆ ಭದ್ರತಾ ಪಡೆ ಟೆಟ್ಸುಯಾ ಯಮಗಾಮಿಯನ್ನು ವಶಕ್ಕೆ ಪಡೆದರು

* ಶಾಟ್ ಗನ್ ಬಳಸಿ ಹತ್ಯೆ ಮಾಡಲೆತ್ನಿಸಿದ ಆತನ ಮೇಲೆ ಕೊಲೆ ಯತ್ನ ಆರೋಪದಡಿ ಕೇಸ್ ಹಾಕಲಾಗಿದೆ.

ಸುದ್ದಿ ಓದಿ