ಅಂತರರಾಷ್ಟ್ರೀಯ

ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ ನಿಧನ

ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ ನಿಧನ

ಟೋಕಿಯೋ: ಜುಲೈ 08:ಗುಂಡಿನ ದಾಳಿಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಜಪಾನಿನ ಮಾಜಿ ಪ್ರಧಾನಿ ಶಿಂಜೊ ಅಬೆ ನಿಧನರಾಗಿದ್ದಾರೆ.ನಾರಾ ಪ್ರದೇಶದಲ್ಲಿ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಅಪರಿಚಿತನೊಬ್ಬ ಅವರ ಮೇಲೆ ಗುಂಡು ಹಾರಿಸಿದ್ದರು. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ಥಿತಿ ಗಂಭೀರವಾಗಿತ್ತು.ಗುಂಡೇಟು ತಗುಲಿದ ನಂತರ ಕುಸಿದು ಬಿದ್ದ ಅವರ ಕತ್ತಿನ ಭಾಗದಲ್ಲಿ ಅತಿ ರಕ್ತಸ್ರಾವವಾಗಿತ್ತು. ಗುಂಡು ಹಾರಿಸಿದ ವ್ತಕ್ತಿಯನ್ನು ಬಂಧಿಸಲಾಗಿದೆ.

ಸುದ್ದಿ ಓದಿ