ಮತ್ತೆ ಮುಖ್ಯಮಂತ್ರಿಯಾಗುವೆ ಮಾಜಿ ಸಿಎಂ ಸಿದ್ದರಾಮಯ್ಯ
ಹಾಸನ 24: ನನಗೆ ಜನರ ಆಶೀವರ್ಾದ ಇದೆ, ನಾನು ಎಲ್ಲಾ ಜಾತಿಯ ಬಡವರಿಗೆ ಸಹಾಯ ಮಾಡಿದ್ದೇನೆ. ಹೀಗಾಗಿ ನಾನು ಇನ್ನೊಮ್ಮೆ ಮುಖ್ಯಮಂತ್ರಿಯಾಗುವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಹಾಸನ ಜಿಲ್ಲೆ ಹೊಳೇನರಸೀಪುರದ ಹಾಡ್ಯಗ್ರಾಮದಲ್ಲಿ ಮಾತನಾಡಿದ ಸಿದ್ದರಾಮಯ್ಯ "ರಾಜಕೀಯದಲ್ಲಿ ಇಂದು ಹಣ, ಜಾತಿಯ ಪಾರಮ್ಯವಿದೆ. ಇದು ಅಪಾಯಕಾರಿ. ಜನರಿಗಾಗಿ ಕೆಲಸ ಮಾಡುವವರನ್ನೇ ಅಧಿಕಾರಕ್ಕೆ ತರಬೇಕು. ಎಂದಿದ್ದಾರೆ.
ಈ ಮೂಲಕ ಮತ್ತೊಮ್ಮೆ ಮುಖ್ಯಮಂತ್ರಿ ಗದ್ದುಗೆ ಏರುವ ಬಯಕೆ ವ್ಯಕ್ತಪಡಿಸಿರುವ ಸಿದ್ದರಾಮಯ್ಯ ತಾನು ಮುಖ್ಯಮಂತ್ರಿಯಾಗಿದ್ದಾಗ ಅಕ್ಕಿ, ಪಶು ಶೂ, ಸೇರಿ ಅನೇಕ ಭಾಗ್ಯಗಳ ಯೋಜನೆ ಜಾರಿಗೆ ತಂದಿದ್ದೆ. ಇದನ್ನು ನಾನು ಒಂದೇ ಜಾತಿ ಅಥವಾ ಸಮುದಾಯಕ್ಕಾಗಿ ಜಾರಿಗೆ ತಂದಿರಲಿಲ್ಲ. ಎಲ್ಲರಿಗೂ ಇದರಲ್ಲಿ ಪಾಲಿದೆ. ಎಂದರು.
"ರಾಜಕೀಯ ಹರಿವ ನಿರು. ಬದಲಾವಣೆ ಆಗಲೇಬೇಕು. ನಾನು ಹೆದರುವವನಲ್ಲ ಹೋರಾಟ ಮುಂದುವರಿಯುತ್ತದೆ. ಸಮಾಜದಲ್ಲಿ ಜಾತಿ ಭಾವನೆ ಇರದೆ ಹೋಗಬೇಕು. ಬಸವಣ್ಣ, ಅಂಬೇಡ್ಕರ್ ಹಾದಿಯಲ್ಲಿ ಎಲ್ಲರೂ ಸಾಗಬೇಕು.
"ನಾನು ಜನರ ಆಶೀವರ್ಾದದಿಂದ ಮತ್ತೆ ಅಧಿಕಾರಕ್ಕೆ ಬರುತ್ತೇನೆ.ಆಗ ಸಕರ್ಾರಿ ಯೋಜನೆ ಗುತ್ತಿಗೆಗಳಲ್ಲಿ ಮೀಸಲಾತಿಗೆ ಅವಕಾಶ ಕಲ್ಪಿಸುತ್ತೇನೆ. ಹಿಂದೆ ಪಂಚಾಯತಿ ವಿಭಾಗಗಳಲ್ಲಿ ಮೀಸಲಾತಿ ತಂದದ್ದು ನಾನು.ಆದರೆ ಇಂದು ಅದನ್ನು ತಾವು ಮಾಡಿದ್ದೆಂದು ಬೇರೆಯವರು ಹೇಳಿಕೊಂಡು ತಿರುಗುತ್ತಿದ್ದಾರೆ" ಎಂದು ವ್ಯಂಗ್ಯವಾಡುದ್ದಾರೆ.
ಹಾಡ್ಯಗ್ರಾಮದಲ್ಲಿ ಈಶ್ವರ ದೇವಸ್ಥಾನ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
"ದೇವರು ಎಲ್ಲೆಡೆಯೂ ಇದ್ದಾನೆ. ಭಕ್ತಿಯಿಂದ ಪೂಜಿಸಿದವರಿಗೆ ದೇವರು ದರ್ಶನ ಕೊಡುವನು. ವರನಟ ರಾಜ್ ಕುಮಾರ್ "ಅಭಿಮ್ಮಾನಿಗಳೇ ದೇವರು" ಎಂದಿದ್ದನ್ನು ನಾನು ಮರೆಯಬಾರದು.ಆತ್ಮ ಸಾಕ್ಷಿಗೆ ನಡೆದುಕೊಳ್ಳುವುದು ಮಹಾನ್ ಪೂಜೆಯಾಗುತ್ತದೆ" ಸಿದ್ದರಾಮಯ್ಯ ಹೇಳಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 