ಕೊರೊನಾ : ರಷ್ಯಾದಲ್ಲಿರುವ ವಿದೇಶಿಯರ ವೀಸಾ ಅವಧಿ 90 ದಿನ ವಿಸ್ತರಣೆ
ಮಾಸ್ಕೋ,
ಮಾರ್ಚ್ 31, ರಷ್ಯಾದಲ್ಲಿರುವ ವಿದೇಶಿಯರ ವೀಸಾವನ್ನು ಅವರ ಭೇಟಿಯ ಉದ್ದೇಶ ಪರಿಗಣಿಸದೇ
90 ದಿನಗಳವರೆಗೆ ವಿಸ್ತರಿಸಲಾಗುವುದು ಎಂದು ರಷ್ಯಾ ಒಳಾಡಳಿತ ಸಚಿವಾಲಯ
ತಿಳಿಸಿದೆ.ಕೊರೊನಾ ಭೀತಿ ಹಿನ್ನೆಲೆಯಲ್ಲಿ ಹಲವು ರಾಷ್ಟ್ರಗಳಿಗೆ ವಿಮಾನ ಸಂಚಾರದ ಮೇಲೆ
ನಿರ್ಬಂಧ ವಿಧಿಸಲಾಗಿದೆ, ಹಲವೆಡೆ ಗಡಿ ಬಂದ್ ಮಾಡಲಾಗಿದೆ. ಹೀಗಾಗಿ ರಷ್ಯಾದಲ್ಲಿ ವೀಸಾ
ಮೇಲಿರುವ ವಿದೇಶಿ ಪ್ರಜೆಗಳಿಗೆ ತೊಂದರೆಯಾಗದಿರಲು ಭೇಟಿ ಉದ್ದೇಶ ಯಾವುದೇ ಇರಲಿ, ವೀಸಾ
ಅವಧಿ 90 ದಿನಗಳ ಕಾಲ ವಿಸ್ತರಿಸಲಾಗುವುದು ಎಂದು ಸಚಿವಾಲಯ ವಿವರಿಸಿದೆ.
ಪ್ರಸ್ತುತ
ವೀಸಾ ಅವಧಿ ಮುಗಿದಿದ್ದಲ್ಲಿ, ವೀಸಾ ನವೀಕರಿಸಲು, ರಷ್ಯಾದಿಂದ ಹೊರಡಲು ಅನುಮತಿಸುವವರೆಗೆ
ತಾತ್ಕಾಲಿಕ ವಾಸದ ಅವಧಿಯನ್ನೂ ವಿಸ್ತರಿಸಲಾಗುವುದು ಎಂದು ರಷ್ಯಾ ತಿಳಿಸಿದೆ.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 