ಅಂತರರಾಷ್ಟ್ರೀಯ

ಫೋರ್ಬ್ಸ್ ಜಗತ್ತಿನ ಅತ್ಯಂತ ಶಕ್ತಿಶಾಲಿ ಮಹಿಳೆಯರು .. ಇಬ್ಬರು ಭಾರತೀಯರಿಗೆ ಸ್ಥಾನ

ಫೋರ್ಬ್ಸ್  ಜಗತ್ತಿನ   ಅತ್ಯಂತ   ಶಕ್ತಿಶಾಲಿ  ಮಹಿಳೆಯರು .. ಇಬ್ಬರು  ಭಾರತೀಯರಿಗೆ ಸ್ಥಾನ

ವಾಷಿಂಗ್ಟನ್‌ ,  ಡಿ  8: ಪ್ರತಿಷ್ಠಿತ    ಫೋರ್ಬ್ಸ್   ನಿಯತಕಾಲಿಕೆ    ಪ್ರಕಟಿಸಿರುವ  ವಿಶ್ವದ   100  ಶಕ್ತಿಶಾಲಿ  ಮಹಿಳೆಯರ ಪಟ್ಟಿಯಲ್ಲಿ ಇಬ್ಬರು  ಭಾರತೀಯರು   ಸ್ಥಾನ ಪಡೆದಿದ್ದಾರೆ.   ಪ್ರತಿ ವರ್ಷ   ಫೋರ್ಬ್ಸ್ ನಿಯತಕಾಲಿಕೆ    ಪ್ರಪಂಚದಾದ್ಯಂತ   ನೀತಿ ನಿರೂಪಕರು,  ವ್ಯಾಪಾರ,  ಲೋಕೋಪಕಾರ,  CEO ಗಳು ಸೇರಿದಂತೆ  ವಿವಿಧ  ವಲಯಗಳ  ಪ್ರಭಾವಿ   ಮಹಿಳೆಯರ  ಪಟ್ಟಿಯನ್ನು ಪ್ರಕಟಿಸುತ್ತವೆ.

ಇಬ್ಬರಿಗೆ ಸ್ಥಾನ 

ಫೋರ್ಬ್ಸ್  ನಿಯತಕಾಲಿಕೆ  ಪ್ರಕಟಿಸಿದ    ಪಟ್ಟಿಯಲ್ಲಿ ಭಾರತದ  ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್,   ನೈಕಾ  ಸಂಸ್ಥಾಪಕಿ  ಫಲ್ಗುಣಿ ನಾಯರ್  ಸ್ಥಾನ ಪಡೆದುಕೊಂಡಿದ್ದಾರೆ.   100 ಮಹಿಳೆಯರ ಪಟ್ಟಿಯಲ್ಲಿ ನಿರ್ಮಲಾ  ಸೀತಾರಾಮನ್ 37ನೇ,   ಫಲ್ಗುಣಿ ನಾಯರ್ 88ನೇ ಸ್ಥಾನ ಪಡೆದುಕೊಂಡಿದ್ದಾರೆ. 

ಬಿಬಿಸಿ ಯಿಂದ

 ಭಾರತದ ರಾಜಕೀಯ  ಇತಿಹಾಸದಲ್ಲಿ   ಮೊದಲ  ಮಹಿಳಾ ಹಣಕಾಸು  ಸಚಿವೆ   ಎಂಬ   ಹೆಗ್ಗಳಿಕೆಯನ್ನು  ನಿರ್ಮಲಾ ಸೀತಾರಾಮನ್‌  ಪಡೆದುಕೊಂಡಿದ್ದಾರೆ.  ಅದಕ್ಕೂ ಮುನ್ನ  ಅವರು ರಕ್ಷಣಾ ಸಚಿವರಾಗಿ ಸೇವೆ ಸಲ್ಲಿಸಿದ್ದರು.    ರಾಜಕೀಯಕ್ಕೆ ಪ್ರವೇಶಿಸುವ   ಮೊದಲು  ನಿರ್ಮಲಾ ಸೀತಾರಾಮನ್‌  ಬಿಬಿಸಿಯಲ್ಲಿ   ಕೆಲಸ  ಮಾಡಿದ್ದರು.

Nike IPO  ಮೂಲಕ    ರಾಷ್ಟ್ರವ್ಯಾಪಿ ಸಂಚಲನ  ಸೃಷ್ಟಿಸಿರುವ, ಸೌಂದರ್ಯ  ಉತ್ಪನ್ನಗಳ  ವಹಿವಾಟಿಗೆ ಕಾಲಿರಿಸದ    ಫಲ್ಗುಣಿ ನಾಯರ್  ಬಹಳ ಹಿಂದಿನಿಂದಲೂ ಮಾರುಕಟ್ಟೆಯಲ್ಲಿ  ಒಳ್ಳೆಯ ಹೆಸರು ಸಂಪಾದಿಸಿದ್ದಾರೆ.  ಇತ್ತೀಚೆಗೆ  ಐ ಪಿ ಒ ಪ್ರವೇಶಿಸಿದ   ಮರು  ದಿನವೇ ಕೋಟ್ಯಾಧಿಪತಿಯಾದರು.    ಸೆಲ್ಫ್‌ ಮೇಡ್‌   ಭಾರತೀಯ  ಮಹಿಳಾ ಬಿಲಿಯನೇರ್ ಎಂದು ಹೆಸರಾಗಿದ್ದಾರೆ.

ಮೊದಲ ಸ್ಥಾನದಲ್ಲಿ ಮೆಕೆಂಜಿ

ಫೋರ್ಬ್ಸ್‌ನ  ಅತ್ಯಂತ   ಶಕ್ತಿಶಾಲಿ ಮಹಿಳೆಯರ   ಪಟ್ಟಿಯಲ್ಲಿ  ಮೆಕೆಂಜಿ ಸ್ಕಾಟ್  ಅಗ್ರ ಸ್ಥಾನದಲ್ಲಿದ್ದಾರೆ. ಮೆಕೆಂಜಿ ಸ್ಕಾಟ್,  ಅಮೇರಿಕಾ  ಕಾದಂಬರಿಕಾರರಾಗಿದ್ದು,   ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಅವರ ಮಾಜಿ  ಪತ್ನಿ.  ಚಾರಿಟಿ  ವಿಭಾಗದಲ್ಲಿ  ಆಕೆ  ನಡೆಸಿದ   ಲೋಕೋಪಕಾರಿ    ಸೇವೆಗಳಿಗಾಗಿ   ಆಕೆಯನ್ನು ಫೋರ್ಬ್ಸ್  ಗುರುತಿಸಿದೆ. ಹಿಂದಿನ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಜರ್ಮನಿಯ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಈಗ 15ನೇ ಸ್ಥಾನದಲ್ಲಿದ್ದಾರೆ. 


ಸುದ್ದಿ ಓದಿ