ಫೋರ್ಬ್ಸ್: ಎಲೋನ್ ಮಸ್ಕ್ 270 ಬಿಲಿಯನ್ ಡಾಲರ್ ಸಂಪತ್ತು!
ಮುಂಬೈ: ಮಾರ್ಚ್ 26: ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಟೆಸ್ಲಾದ ಮಾಲೀಕ ಎಲೋನ್ ಮಸ್ಕ್ ಅವರು ಅಗ್ರಸ್ಥಾನದಲ್ಲಿದ್ದಾರೆ. ಅವರ ನಿವ್ವಳ ಮೌಲ್ಯ $270.9 ಬಿಲಿಯನ್. ಅಮೆಜಾನ್‌ನ ಜೆಫ್ ಬೆಜೋಸ್ ಎರಡನೇ ಹಾಗೂ ಅರ್ನಾಲ್ಡ್ ಬನಾಲ್ಟ್ ಮೂರನೇ ಸ್ಥಾನದಲ್ಲಿದ್ದಾರೆ. ಇನ್ನು ಮೈಕ್ರೋಸಾಫ್ಟ್‌ನ ಬಿಲ್ ಗೇಟ್ಸ್ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ ಮತ್ತು ಅನುಭವಿ ಹೂಡಿಕೆದಾರ ವಾರೆನ್ ಬಫೆಟ್ ಐದನೇ ಸ್ಥಾನದಲ್ಲಿದ್ದಾರೆ.
ರಿಲಯನ್ಸ್ ಗ್ರೂಪ್ ಮಾಲೀಕ ಮುಖೇಶ್ ಅಂಬಾನಿಯವರ ಸಂಪತ್ತು ಮತ್ತೊಮ್ಮೆ $100 ಬಿಲಿಯನ್ ತಲುಪಿದೆ. ಈ ಮೂಲಕ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಬಂದಿದ್ದಾರೆ. ಅದಾನಿ ಸಮೂಹದ ಗೌತಮ್ ಅದಾನಿ 11ನೇ ಸ್ಥಾನಕ್ಕೆ ಕುಸಿದಿದ್ದಾರೆ. ಫೋರ್ಬ್ಸ್‌ನ ರಿಯಲ್ ಟೈಮ್ ಅಂಕಿ-ಅಂಶಗಳ ಪ್ರಕಾರ ಶುಕ್ರವಾರ ಸಂಜೆ ಮುಖೇಶ್ ಅಂಬಾನಿ ಅವರ ನಿವ್ವಳ ಮೌಲ್ಯ $ 98.4 ಬಿಲಿಯನ್ ಆಗಿದ್ದರೆ, ಗೌತಮ್ ಅದಾನಿ $ 97.1 ಬಿಲಿಯನ್ ಇಳಿಕೆಯಾಗಿದೆ.
ವಿಶ್ವದ ಟಾಪ್-10 ಶ್ರೀಮಂತ ವ್ಯಕ್ತಿಗಳ ಪೈಕಿ ಮುಖೇಶ್ ಅಂಬಾನಿ ಏಕೈಕ ಭಾರತೀಯ ಉದ್ಯಮಿ ಪಟ್ಟಿಯಲ್ಲಿ ಸ್ಥಾನ ಪಡೆದಿದದ್ದಾರೆ. ರಷ್ಯಾ-ಉಕ್ರೇನ್ ಬಿಕ್ಕಟ್ಟಿನ ನಂತರ ದೇಶೀಯ ಷೇರು ಮಾರುಕಟ್ಟೆಯಲ್ಲಿ ಇತ್ತೀಚಿನ ಕುಸಿತವು ಅಂಬಾನಿ, ಅದಾನಿ ಸಂಪತ್ತಿನ ಇಳಿಕೆಗೆ ಕಾರಣವಾಗಿದೆ. ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನ ಸೆನ್ಸೆಕ್ಸ್ ಪ್ರಸ್ತುತ ಅದರ ಅಕ್ಟೋಬರ್ 2021ರ ಗರಿಷ್ಠಕ್ಕಿಂತ ಶೇಕಡಾ 10ರಷ್ಟು ಕೆಳಗೆ ವಹಿವಾಟು ನಡೆಸುತ್ತಿದೆ.
ಫೆಬ್ರವರಿಯಲ್ಲಿ ಅದಾನಿ ವಿಲ್ಮಾರ್ ಮಾರುಕಟ್ಟೆಗೆ ಎಂಟ್ರಿ
ಅದಾನಿ ಅವರ ಏಳನೇ ಕಂಪನಿ ಅದಾನಿ ವಿಲ್ಮಾರ್ ಫೆಬ್ರವರಿ 8, 2022 ರಂದು ದಲಾಲ್ ಸ್ಟ್ರೀಟ್ ನಲ್ಲಿ ಐಪಿಒ ಲಿಸ್ಟ್ ಆಯಿತು. ಈ ಹಿನ್ನೆಲೆಯಲ್ಲಿ ಅದಾನಿ ಹಾಗೂ ಅಂಬಾನಿ ಸಂಪತ್ತಿನಲ್ಲಿ ಏರಿಳಿತ ಉಂಟಾಗಿ ಫೆಬ್ರವರಿ 4ರಂದು ಮುಖೇಶ್ ಅಂಬಾನಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿ ಉಳಿದುಕೊಳ್ಳಬೇಕಾಯಿತು. ಸದ್ಯ ಅಂಬಾನಿ 9ನೇ ಸ್ಥಾನದಲ್ಲಿದ್ದಾರೆ. ಜನವರಿ 6, 2021 ರಂದು ರಿಲಯನ್ಸ್ ಕಂಪನಿಯನ್ನು ಟಾಪ್-10 ಪಟ್ಟಿಯಿಂದ ಕೈಬಿಡಲಾಯಿತು. ಆದ್ರೂ ಸಹ ಅವರು ಸೆಪ್ಟೆಂಬರ್ 23ರಂದು ಶ್ರೀಮಂತರ ಪಟ್ಟಿಗೆ ಮರಳಿದರೂ ಕೂಡ 16 ಅಕ್ಟೋಬರ್ 2021ರಂದು ಮತ್ತೆ ಫೋರ್ಬ್ಸ್ ಪಟ್ಟಿಯಿಂದ ಹೊರಬಿದ್ದಿದ್ದರು.
ರಿಲಯನ್ಸ್ ಮುಂದಿನ ಉತ್ತರಾಧಿಕಾರಿ
ಫೆಬ್ರವರಿ 4, 2022 ರಂತೆ ಅಂಬಾನಿಯವರ ಆಸ್ತಿ $89.2 ಬಿಲಿಯನ್ ಮತ್ತು ಅದಾನಿಯವರ $90.4 ಬಿಲಿಯನ್ ಆಗಿತ್ತು. ಅಂಬಾನಿ ಕೂಡ ಉತ್ತರಾಧಿಕಾರಿಗೆ ಸಿದ್ಧತೆ ನಡೆಸುತ್ತಿದ್ದು, ಇದಕ್ಕಾಗಿ ಕೌನ್ಸಿಲ್ ರಚನೆಯಾಗಲಿದೆ. ಉತ್ತರಾಧಿಕತ್ವಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಕೌನ್ಸಿಲ್ ಒಳಗೊಂಡಿರುತ್ತದೆ. ಈ ವರ್ಷ ಅದಾನಿ ಸಂಪತ್ತು ಬರೋಬ್ಬರಿ $19 ಬಿಲಿಯನ್ ಹೆಚ್ಚಾಗಿದೆ.