ಅಂತರರಾಷ್ಟ್ರೀಯ

ಉತ್ತರ ಕೊರಿಯಾದಲ್ಲಿ ಆಹಾರ ಬಿಕ್ಕಟ್ಟು: 2025ರ ವರೆಗೆ ಕಡಿಮೆ ಆಹಾರ ಸೇವಿಸಿ ಎಂದ ಕಿಮ್​​ ಜಾಂಗ್

ಉತ್ತರ ಕೊರಿಯಾದಲ್ಲಿ ಆಹಾರ ಬಿಕ್ಕಟ್ಟು: 2025ರ ವರೆಗೆ ಕಡಿಮೆ ಆಹಾರ ಸೇವಿಸಿ ಎಂದ ಕಿಮ್​​ ಜಾಂಗ್

ಪ್ಯೊಂಗ್ಯಾಂಗ್: ಅ, 29: ಹದಗೆಡುತ್ತಿರುವ ಆರ್ಥಿಕತೆಯ ಮಧ್ಯೆ ಉತ್ತರ ಕೊರಿಯಾದಲ್ಲಿ ಆಹಾರ ಬಿಕ್ಕಟ್ಟು ಎದುರಾಗಿದೆ. ಅಲ್ಲದೇ ಅಗತ್ಯ ಔಷಧಿಗಳ ಕೊರತೆ ಉಂಟಾಗಿದೆ. ಹೀಗಾಗಿ ಟೈಫಾಯಿಟ್​​ ಜ್ವರದಂತಹ ರೋಗಗಳ ಹರಡುವಿಕೆಯನ್ನು ತಡೆಯಲು ಅಲ್ಲಿನ ಅಧಿಕಾರಿಗಳು ಹೆಣಗಾಡುತ್ತಿದ್ದಾರೆ.

ಆಹಾರ ಬಿಕ್ಕಟ್ಟು ಹಿನ್ನೆಲೆ ಉತ್ತರ ಕೊರಿಯಾದ ಅಧ್ಯಕ್ಷ ಕಿಮ್​ ಜಾಂಗ್​ ಉನ್​​ ಅಲ್ಲಿನ ನಾಗರಿಕರಿಗೆ 2025ರವರೆಗೆ ಕಡಿಮೆ ಆಹಾರ ಸೇವಿಸುವಂತೆ ಕರೆ ನೀಡಿದ್ದಾರೆ. ಆಹಾರ ಬಿಕ್ಕಟ್ಟು 2025 ರವರೆಗೆ ಮುಂದುವರೆಯುತ್ತದೆ ಎಂದು ನೆರೆಹೊರೆಯ ವಾಚ್ ಘಟಕದ ಸಭೆಯಲ್ಲಿ ಅಧಿಕಾರಿಗಳು ಹೇಳಿದ್ದಾರೆ. 

ನೋಟ್​​ಗಳನ್ನು ಮುದ್ರಿಸಲು ಬೇಕಾಗುವ ಕಾಗದ ಮತ್ತು ಶಾಯಿಯನ್ನು ಆಮದು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ತಾತ್ಕಾಲಿಕ ಕರೆನ್ಸಿಯನ್ನು ನೀಡುವಂತೆ ಉತ್ತರ ಕೊರಿಯಾದ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಸುಮಾರು 10 ವರ್ಷಗಳ ಅಧಿಕಾರದ ನಂತರ, ಕೊರೊನಾ ವೈರಸ್​​ ಸಾಂಕ್ರಾಮಿಕ ರೋಗದಿಂದ ಹದಗೆಟ್ಟಿರುವ ಆರ್ಥಿಕತೆಯಿಂದಾಗಿ ಕಿಮ್ ತಮ್ಮ ಆಡಳಿತದ ಕಠಿಣ ಅವಧಿಯನ್ನು ಎದುರಿಸಲು ಹರಸಾಹಸಪಡುತ್ತಿದ್ದಾರೆ. 2025 ರವರೆಗೆ ಕಷ್ಟಗಳನ್ನು ಸಹಿಸಿಕೊಳ್ಳಿ ಎಂದು ಅಧ್ಯಕ್ಷರು ಹೇಳಿರುವುದು ಹಸಿವಿನಿಂದ ಸಾಯಲು ಹೇಳುವುದಕ್ಕೆ ಸಮನಾಗಿದೆ ಎಂದು ಮೂಲಗಳು ತಿಳಿಸಿವೆ. 

ಸುದ್ದಿ ಓದಿ