ಬ್ರೆಜಿಲ್ ನ ದಕ್ಷಿಣದಲ್ಲಿ ಪ್ರವಾಹ: ಸಾವಿನ ಸಂಖ್ಯೆ 57 ಕ್ಕೆ ಏರಿಕೆ
ಮಾಸ್ಕೋ, ಜ 27 , ಬ್ರೆಜಿಲ್ ನ ದಕ್ಷಿಣ ಭಾಗದಲ್ಲಿ ಭಾರಿ ಮಳೆಯಿಂದ ಉಂಟಾದ ಪ್ರವಾಹಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 57 ಕ್ಕೆ ಏರಿದ್ದು, ಈ ಪೈಕಿ ಮಿನಾಸ್ ಗೆರೈಸ್ ರಾಜ್ಯದಲ್ಲಿ ಅತಿಹೆಚ್ಚು 48 ಜನರು ಸಾವನ್ನಪ್ಪಿದ್ದಾರೆ ಎಂದು ರಾಜ್ಯದ ನಾಗರಿಕ ರಕ್ಷಣಾ ಕಚೇರಿ ಸೋಮವಾರ ತಿಳಿಸಿದೆ. ಧಾರಾಕಾರ ಮಳೆಗೆ 37 ಜನರು ಬಲಿಯಾಗಿದ್ದಾರೆ ಎಂದು ಈ ಹಿಂದಿನ ವರದಿಗಳು ತಿಳಿಸಿದ್ದವು. ‘ಹೆಚ್ಚಿನ ಸಾವುಗಳು (ಎಂಟು) ಮಿನಾಸ್ ಗೆರೈಸ್ ರಾಜ್ಯದ ರಾಜಧಾನಿ ಬೆಲೊ ಹೊರಿಜಾಂಟೆಯಲ್ಲಿ ದಾಖಲಾಗಿವೆ.’ ಎಂದು ನಾಗರಿಕ ರಕ್ಷಣಾ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರವಾಹಗಳಲ್ಲಿ ಇತರ 19 ಜನರು ಕಾಣೆಯಾಗಿದ್ದಾರೆ.ಬೆಲೋ ಹರೈಜಾಂಟೆದಲ್ಲಿ ಜ 24 ರಂದು 171.8 ಮಿ.ಮೀ ಮಳೆ ದಾಖಲಾಗಿದೆ. ಇದು 110 ವರ್ಷಗಳಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಮಳೆ ಮುಂದುವರಿಕೆಯ ಭೀತಿಯ ಮಧ್ಯೆ ಮಿನಾಸ್ ಗೆರೈಸ್‌ನಾದ್ಯಂತ ಇರುವ 99 ನಗರಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.ಪ್ರವಾಹ ಮತ್ತು ಭೂಕುಸಿತಗಳಿಂದಾಗಿ ಈ ಪ್ರದೇಶದಾದ್ಯಂತ 20,000 ಜನರು ತಮ್ಮ ಮನೆಗಳನ್ನು ತೊರೆದು, ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಂಡಿದ್ದಾರೆ.ಬ್ರೆಜಿಲ್ ನಲ್ಲಿ ಇತ್ತೀಚಿನ ವರ್ಷಗಳಲ್ಲೇ ದಾಖಲೆಯ ಮಳೆ ಇದಾಗಿದೆ.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 