ಅಂತರರಾಷ್ಟ್ರೀಯ

ಪಾಕಿಸ್ತಾನದಲ್ಲಿ ಪ್ರವಾಹ... ೫೦ ಮಂದಿ ಸಾವು

ಪಾಕಿಸ್ತಾನದಲ್ಲಿ  ಪ್ರವಾಹ... ೫೦ ಮಂದಿ ಸಾವು
ಪ್ರಾತಿನಿಧ್ಯ ಉದ್ದೇಶಕ್ಕಾಗಿ ಮಾತ್ರ ಚಿತ್ರ

ಇಸ್ಲಾಮಾಬಾದ್,  ಆಗಸ್ಟ್  ೧0: ಪಾಕಿಸ್ತಾನದಲ್ಲಿ ಕಳೆದ ಮೂರು ದಿನಗಳಿಂದ ಸತತವಾಗಿ  ಸುರಿಯುತ್ತಿರುವ  ಭಾರಿ ಮಳೆಯಿಂದಾಗಿ ಉಂಟಾಗಿರುವ ಪ್ರವಾಹ  ಮತ್ತಿತರ ಮಳೆ  ಅವಗಡಗಳಲ್ಲಿ  ೫೦ ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

ಪಾಕಿಸ್ತಾನದ ಖೈಬರ್  ಫಕ್ತೂನ್  ಖವಾ  ಪ್ರಾಂತ್ಯದಲ್ಲಿ ೧೯ ಮಂದಿ,  ಸಿಂಧ್ ಪ್ರಾಂತ್ಯದಲ್ಲಿ ೧೨  ಮಂದಿ  ಹಾಗೂ  ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶದಲ್ಲಿ ೧೦  ಮಂದಿ  ಮೃತಪಟ್ಟಿದ್ದಾರೆ ಎಂದು ಪಾಕಿಸ್ತಾನ  ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

ಸಿಂಧ್ ಪ್ರಾಂತ್ಯದಲ್ಲಿ ಪ್ರವಾಹದಿಂದ  ನೂರು  ಮನೆಗಳು  ಮುಳುಗಿವೆ.  ಭಾನುವಾರ  ಸುರಿದ  ಭಾರಿ ಮಳೆಯಿಂದ  ಲಾಹೋರ್ ನಗರದ  ಬೀದಿಗಳು ಜಲಾವೃತಗೊಂಡಿವೆ. ಕರಾಚಿ ನಗರದಲ್ಲೂ ಪ್ರವಾಹ ಜನ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಪಾಕಿಸ್ತಾನದಲ್ಲಿ ಇನ್ನೂ ಒಂದು ವಾರ ಭಾರೀ ಮಳೆಯಾಗುವ  ಸಾಧ್ಯತೆಯಿದೆ  ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮುನ್ನೆಚ್ಚರಿಕೆ ನೀಡಿದ್ದಾರೆ. 

ಸುದ್ದಿ ಓದಿ