ಅಂತರರಾಷ್ಟ್ರೀಯ

ಪಾಕಿಸ್ತಾನದಲ್ಲಿ ಐವರು ಯೋಧರು ಹಾಗೂ ನಾಲ್ವರು ಉಗ್ರರು ಹತ

ಪಾಕಿಸ್ತಾನದಲ್ಲಿ ಐವರು ಯೋಧರು ಹಾಗೂ ನಾಲ್ವರು ಉಗ್ರರು ಹತ

ಇಸ್ಲಾಮಾಬಾದ್: ಏಪ್ರಿಲ್ 22 : ಪಾಕಿಸ್ತಾನದ ಖೈಬರ್, ಪೇಶಾವರ್ ಮತ್ತು ನೌಶೇರಾ ಜಿಲ್ಲೆಗಳಲ್ಲಿ ನಡೆದ ಎರಡು ಘಟನೆಗಳಲ್ಲಿ ಕನಿಷ್ಠ ಐವರು ಭದ್ರತಾ ಸಿಬ್ಬಂದಿ ಮತ್ತು ಬನ್ನುನಲ್ಲಿ ಗುಪ್ತಚರ ಮಾಹಿತಿ ಆಧರಿಸಿ ನಡೆದ ಕಾರ್ಯಾಚರಣೆಯಲ್ಲಿ ನಾಲ್ವರು ಭಯೋತ್ಪಾದಕರು ಸಾವಿಗೀಡಾಗಿದ್ದಾರೆ.

ಆಂಗ್ಲ ದೈನಿಕ ಡಾನ್ ಮಾಡಿದ ವರದಿ ಪ್ರಕಾರ, ನೌಶೇರಾ ಜಿಲ್ಲೆಯ ಅಕೋರಿ ಚೌಕ್‌ನಲ್ಲಿ ಕರ್ತವ್ಯ ನಿರತ ಪೊಲೀಸರ ಮೇಲೆ ಅಪರಿಚಿತ ಬಂದೂಕುಧಾರಿಗಳು ಗುಂಡು ಹಾರಿಸಿದ ಮೊದಲ ಘಟನೆ ಸಂಭವಿಸಿದೆ. ಎರಡನೇ ಘಟನೆಯಲ್ಲಿ, ಖೈಬರ್‌ನ ಬಾರಾ ಪ್ರದೇಶದ ಭದ್ರತಾ ಚೆಕ್‌ಪೋಸ್ಟ್‌ನಲ್ಲಿ ತಡರಾತ್ರಿ ನಡೆದ ದಾಳಿಯಲ್ಲಿ ಶಂಕಿತ ಭಯೋತ್ಪಾದಕರೊಂದಿಗೆ ಮೂವರು ಭದ್ರತಾ ಸಿಬ್ಬಂದಿ ಹತರಾಗಿದ್ದಾರೆ.

ಇನ್ನು ಬನ್ನುವಿನ ಪಿಂಗ್ ಒಮೆರ್ಜೈ ಪರ್ವತ ಪ್ರದೇಶದಲ್ಲಿ ಗುಪ್ತಚರ ಆಧಾರಿತ ಕಾರ್ಯಾಚರಣೆಯಲ್ಲಿ ನಾಲ್ವರು ಭಯೋತ್ಪಾದಕರು ಹತರಾಗಿದ್ದಾರೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.

ಸುದ್ದಿ ಓದಿ