ಕ್ರೀಡೆ

ಮೊದಲ ಪಂದ್ಯದಲ್ಲೆ ಅಬ್ಬರಿಸಿದ ಡುಪ್ಲೆಸಿಸ್, ಆರ್ ಸಿ ಬಿ ಗೆ ಮೊದಲ ಜಯ

ಮೊದಲ ಪಂದ್ಯದಲ್ಲೆ ಅಬ್ಬರಿಸಿದ ಡುಪ್ಲೆಸಿಸ್, ಆರ್ ಸಿ ಬಿ ಗೆ ಮೊದಲ ಜಯ

ಬೆಂಗಳೂರು : ಮಾರ್ಚ್ 25: ಐಪಿಎಲ್ 2022 ಸೀಸನ್ ಆರಂಭಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಅಭ್ಯಾಸ ಪಂದ್ಯದಲ್ಲಿ ಆಟಗಾರರು ಧೂಳೆಬ್ಬಿಸಿದ್ದಾರೆ. ಡುಪ್ಲೆಸಿಸ್ XI ಮತ್ತು ಹರ್ಷಲ್ ಪಟೇಲ್ XI ಎರಡೂ ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.

ಮೊದಲು ಬ್ಯಾಟ್ ಮಾಡಿದ ಡುಪ್ಲೆಸಿಸ್ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 215 ರನ್ ಗಳಿಸಿದರೆ, ಹರ್ಷಲ್ ಪಟೇಲ್ ತಂಡ ನಿಗದಿತ ಓವರ್ ಗಳಲ್ಲಿ 213 ರನ್ ಗಳಿಸಿ 2 ರನ್ ಗಳಿಂದ ಸೋಲನುಭವಿಸಿತು. ಇದರೊಂದಿಗೆ ಡುಪ್ಲೆಸಿಸ್ XI ತಂಡಕ್ಕೆ ಮೊದಲ ಜಯ ಸಾಧಿಸಿತು.

ಅಭ್ಯಾಸ ಪಂದ್ಯದಲ್ಲಿ ಡುಪ್ಲೆಸಿಸ್ (40 ಎಸೆತಗಳಲ್ಲಿ 76), ಶೆರ್ಫೇನ್ ರುದರ್‌ಫೋರ್ಡ್ (59) ಮತ್ತು ಸುಯಶ್ ಪ್ರಭು ದೇಸಾಯಿ (46 ಎಸೆತಗಳಲ್ಲಿ 87) ಅರ್ಧಶತಕ ಬಾರಿಸಿದರು.ಯುವ ಆಟಗಾರ ಅನುಜ್ ರಾವತ್ (46), ಹಿರಿಯ ದಿನೇಶ್ ಕಾರ್ತಿಕ್ (21 ಎಸೆತಗಳಲ್ಲಿ 49) (17 ಎಸೆತಗಳಲ್ಲಿ 25) ಬೌಲಿಂಗ್ ನಲ್ಲಿ ಆಕಾಶ್ ದೀಪ್ 4 ವಿಕೆಟ್ ಪಡೆದರೆ ಹರ್ಷಲ್ ಪಟೇಲ್ 3 ಹಾಗೂ ಕರ್ಣ್ ಶರ್ಮಾ 2 ವಿಕೆಟ್ ಪಡೆದರು. ಮಾಜಿ ನಾಯಕ ವಿರಾಟ್ ಕೊಹ್ಲಿ ಅಭ್ಯಾಸ ಪಂದ್ಯದಿಂದ ಹೊರಗುಳಿದ್ದರು. ಡುಪ್ಲೆಸಿಸ್ ನೇತೃತ್ವದ ಆರ್‌ಸಿಬಿ ಭಾನುವಾರ (ಮಾರ್ಚ್ 27) ತನ್ನ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೆಣಸಲಿದೆ.

ಸುದ್ದಿ ಓದಿ