ಅಂತರರಾಷ್ಟ್ರೀಯ

ಅಂದು ‘ವಿದೇಶಿ ಸಂಚು’ ಆರೋಪ.. ಈಗ ಇಮ್ರಾನ್ ಖಾನ್ ಯೂ ಟರ್ನ್

ಅಂದು ‘ವಿದೇಶಿ ಸಂಚು’ ಆರೋಪ.. ಈಗ ಇಮ್ರಾನ್ ಖಾನ್ ಯೂ ಟರ್ನ್

ಇಸ್ಲಾಮಾಬಾದ್: ಏಪ್ರಿಲ್ 17 : ತಮ್ಮನ್ನು ಪ್ರಧಾನಮಂತ್ರಿ ಹುದ್ದೆಯಿಂದ ಕೆಳಗಿಳಿಸಲು ‘ವಿದೇಶಿ ಪಿತೂರಿ’ ಎಂದು ಆರೋಪಿಸಿದ್ದ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್  ಖಾನ್ ಯೂ ಟರ್ನ್ ಹೊಡೆದಿದ್ದಾರೆ.

ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಂಡ ಬಳಿಕ ಕರಾಚಿಯ ಬಾಗ್-ಇ-ಜಿನ್ನಾದಲ್ಲಿ ಶಕ್ತಿ ಪ್ರದರ್ಶನದ ರ್ಯಾಲಿ ಮಾಡಿ, ನಾನು ಯಾವುದೇ ದೇಶದ ವಿರೋಧಿಯಲ್ಲ. ನಾನು ಭಾರತವನ್ನಾಗಲೀ, ಯೂರೋಪ್ ನಾಗಲೀ, ಯುನೈಟೆಡ್ ಸ್ಟೇಟ್ಸ್ ನಾಗಲೀ ವಿರೋಧಿಸಲ್ಲ. ನಾನು ಯಾವುದೇ ದೇಶದ ವಿರುದ್ಧವಾಗಿಲ್ಲ ಎಂದು ಯೂ ಟರ್ನ್ ಹೊಡೆದಿದ್ದಾರೆ.

ಸದಾ ಜಾಗತಿಕ ಮಟ್ಟದಲ್ಲಿ ಭಾರತ, ಯುಎಸ್ ನ ವಿರೋಧಿಸ್ತಿದ್ದ ಪಿಟಿಇ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್,  ನಾನು ಯಾವ ದೇಶದ ವಿರೋಧಿಯೂ ಅಲ್ಲ, ಯಾವುದೇ ಸಮುದಾಯದ ವಿರುದ್ಧ ಇಲ್ಲ, ನಾನು ಮಾನವೀಯತೆಯೊಂದಿಗಿದ್ದೇನೆ ಎಂದಿದ್ದಾರೆ.

ತಮ್ಮ ವಿರುದ್ಧ ಅವಿಶ್ವಾಸ ಮತ ಗೊತ್ತುವಳಿ ವೇಳೆ ಇಮ್ರಾನ್ ಖಾನ್, ಅಮೆರಿಕಾ ವಿರುದ್ಧ ವಿದೇಶಿ ಸಂಚಿನ ಆರೋಪ ಮಾಡಿ ಪ್ರತಿಭಟಿಸಿದ್ದರು.

ವಿಶ್ವಸಂಸ್ಥೆಯ ಸಾಮಾನ್ಯ ಸಭೆ ವಿಶೇಷ ಅಧಿವೇಶನದಲ್ಲಿ ರಷ್ಯಾದ ವಿರುದ್ಧ ಮತ ಚಲಾಯಿಸುವಂತೆ ಪಾಕಿಸ್ತಾನವನ್ನು ಕೇಳಿದ ಯುರೋಪಿಯನ್ ಯೂನಿಯನ್ ವಿರುದ್ಧ ವಾಗ್ದಾಳಿ ನಡೆಸಿದ್ದರು.  ಇಸ್ಲಾಮಾಬಾದ್ ಅನ್ನು ತಮ್ಮ “ಗುಲಾಮ” ಎಂದು ಪರಿಗಣಿಸುತ್ತೀರಾ ಎಂದು ಕಿಡಿಕಾರಿದ್ದರು.

ಗಮನಾರ್ಹ ವಿಚಾರವೆಂದರೆ ಈ ಹಿಂದೆ ಭಾರತವನ್ನು ಟೀಕಿಸಿದ ಮಾಜಿ ಪ್ರಧಾನಿ, ಇತ್ತೀಚಿನ ದಿನಗಳಲ್ಲಿ ಭಾರತವನ್ನು ಮತ್ತೆ ಮತ್ತೆ ಹೊಗಳುತ್ತಿದ್ದಾರೆ. ಪಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಭಾರತವನ್ನ ಯಾವ ಸೂಪರ್ ಪವರ್ ರಾಷ್ಟ್ರವೂ ಅಲುಗಾಡಿಸಲು ಸಾಧ್ಯವಿಲ್ಲ ಎಂದಿದ್ದರು.

ಸುದ್ದಿ ಓದಿ