ಅಂತರರಾಷ್ಟ್ರೀಯ

ಆಸ್ಪತ್ರೆಯಲ್ಲಿ ಬೆಂಕಿ ಅವಘಡ; ಕೋವಿಡ್ ರೋಗಿ ಸಾವು

ಆಸ್ಪತ್ರೆಯಲ್ಲಿ ಬೆಂಕಿ ಅವಘಡ; ಕೋವಿಡ್ ರೋಗಿ ಸಾವು

ಬರ್ದ್ವಾನ್: ಜನೆವರಿ 29   ಪಶ್ಚಿಮ ಬಂಗಾಳದ ಬರ್ದ್ವಾನ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಕೋವಿಡ್ ವಾರ್ಡಿನಲ್ಲಿ ಬೆಂಕಿ ಕಾಣಿಸಿಕೊಂಡು ಒಬ್ಬ ಕೋವಿಡ್ ರೋಗಿ ಮೃತಪಟ್ಟಿದ್ದಾರೆ.

ಮೃತ ಕೋವಿಡ್ ರೋಗಿಯನ್ನು ಸಂಧ್ಯಾ ರಾಯ್ (60) ಎಂದು ತಿಳಿದು ಬಂದಿದ್ದು, ಇವರು ಪೂರ್ವ ಬುರ್ದ್ವಾನ್ ಜಿಲ್ಲೆಯಲ್ಲಿ ವಾಸವಾಗಿದ್ದರು.

ಶನಿವಾರ ಬೆಳಿಗ್ಗೆ ಆಸ್ಪತ್ರೆಯ ರಾಧಾರಾಣಿ ವಾರ್ಡಿನಲ್ಲಿ ಕಾಣಿಸಿಕೊಂಡಿತು. ತದನಂತರ ಬೆಂಕಿ ಕೆನ್ನಾಲಿಗೆಯು ಕೋವಿಡ್ ರೋಗಿಗಳಿದ್ದ ವಿಶೇಷ ವಾರ್ಡಿಗೆ ಹರಡಿತು ಎಂದು ಆಸ್ಪತ್ರೆಯ ಮೂಲಗಳು ಮಾಹಿತಿ ನೀಡಿವೆ. ಆರಂಭದಲ್ಲಿ ರೋಗಿಗಳ ಸಂಬಂಧಿಕರು ಬೆಂಕಿ ನಂದಿಸಲು ಯತ್ನಿಸಿದರು. ಬೆಂಕಿ ಹರಡುವಿಕೆಯು ಹೆಚ್ಚಾದ ಕಾರಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಬೆಂಕಿ ನಂದಿಸುವ ಕಾರ್ಯ ಕೈಗೊಂಡರು ಮತ್ತು ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಘಟನೆ ನಡೆದು ಒಂದು ಗಂಟೆ ತರುವಾಯ ಬೆಂಕಿ ಹರಡುವಿಕೆಯನ್ನು ನಿಯಂತ್ರಣಕ್ಕೆ ತರಲಾಯಿತು. ಬೆಂಕಿ ಕಾಣಿಸಿಕೊಳ್ಳಲು ಕಾರಣ ಏನು ಎಂಬುದನ್ನು ತಿಳಿಯಲು ಐದು ಮಂದಿಯ ಒಂದು ತಂಡವನ್ನು ರಚಿಸಲಾಗಿದೆ.

ಸುದ್ದಿ ಓದಿ