ಸೆನೆಗಲ್ ಆಸ್ಪತ್ರೆಯಲ್ಲಿ ಬೆಂಕಿಗೆ 11 ಹಸುಗೂಸು ಸಾವು
ಡಾಕರ್: ಮೇ 26 : ರಾಜಧಾನಿ ಡಾಕರ್ ಬಳಿಯ ಆಸ್ಪತ್ರೆಯಲ್ಲಿ ಬುಧವಾರ ತಡರಾತ್ರಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ 11 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಸೆನೆಗಲ್ ಅಧ್ಯಕ್ಷ ಮ್ಯಾಕಿ ಸಾಲ್ ಹೇಳಿದ್ದಾರೆ.
“ತಿವೌನ್‌ನಲ್ಲಿರುವ ಮಾಮೆ ಅಬ್ದುಲ್ ಅಜೀಜ್ ಸಾಯಿ ದಬಾಖ್ ಆಸ್ಪತ್ರೆಯ ನಿಯೋನಾಟಲ್ ಡಿಪಾರ್ಟ್‌ಮೆಂಟ್‌ನಲ್ಲಿ ಸಂಭವಿಸಿದ ಬೆಂಕಿಯಲ್ಲಿ 11 ನವಜಾತ ಶಿಶುಗಳು ಸಾವನ್ನಪ್ಪಿದ ನೋವು ಮತ್ತು ಭಯ ನನ್ನನ್ನು ತೀವ್ರ ದುಃಖವನ್ನು ಉಂಟು ಮಾಡಿದೆ. ಅವರ ತಾಯಂದಿರು ಮತ್ತು ಅವರ ಕುಟುಂಬಗಳಿಗೆ, ನಾನು ನನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ” ಎಂದು ಅಧ್ಯಕ್ಷರು ಟ್ವೀಟ್ ಮಾಡಿದ್ದಾರೆ.