ಅಂತರರಾಷ್ಟ್ರೀಯ

ವೈದ್ಯಕೀಯ ಕಟ್ಟಡದಲ್ಲಿ ಗುಂಡಿನ ದಾಳಿ: ನಾಲ್ವರು ಸಾವು

ವೈದ್ಯಕೀಯ ಕಟ್ಟಡದಲ್ಲಿ ಗುಂಡಿನ ದಾಳಿ: ನಾಲ್ವರು ಸಾವು

ನ್ಯೂಯಾರ್ಕ್: ಜೂನ್ 02: ಯುಎಸ್ ಆಸ್ಪತ್ರೆಯ ಆವರಣದಲ್ಲಿರುವ ತುಲ್ಸಾ ವೈದ್ಯಕೀಯ ಕಟ್ಟಡದಲ್ಲಿ ಬುಧವಾರ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಕ್ಯಾಪ್ಟನ್ ತಿಳಿಸಿದ್ದಾರೆ.

ಟೆಕ್ಸಾಸ್‌ನ ಉವಾಲ್ಡೆಯಲ್ಲಿರುವ ರಾಬ್ ಎಲಿಮೆಂಟರಿ ಶಾಲೆಯಲ್ಲಿ ನಡೆದ ದಾಳಿಯಿಂದಾಗಿ 19 ಮಕ್ಕಳು ಮತ್ತು ಇಬ್ಬರು ಶಿಕ್ಷಕರು ಸಾವನ್ನಪ್ಪಿದ ಎಂಟು ದಿನಗಳ ನಂತರ ಬುಧವಾರ ಗುಂಡಿನ ದಾಳಿ ನಡೆದಿದ್ದು, ಎಲ್ಲರ ಆತಂಕಕ್ಕೆ ಕಾರಣವಾಗಿದೆ.

ಕ್ಯಾಪ್ಟನ್ ರಿಚರ್ಡ್ ಮೆಲೆನ್‌ಬರ್ಗ್ ಸತ್ತವರ ಸಂಖ್ಯೆಯನ್ನು ದೃಢಪಡಿಸಿದ್ದು, ದಾಳಿಕೋರ ಕೂಡ ಸಾವನ್ನಪ್ಪಿದ್ದಾನೆ. ಆದರೆ ಶೂಟರ್ ಹೇಗೆ ಸತ್ತಿದ್ದಾನೆ ಅಥವಾ ಮಾರಣಾಂತಿಕ ಹಲ್ಲೆಗೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ ಎಂದು ಹೇಳಿದರು.

ಬೇರೆ ಯಾವುದಾದರೂ ಬೆದರಿಕೆ ಇದೆಯಾ ಎಂಬ ಅಂಶಗಳನ್ನು ಅಧಿಕಾರಿಗಳು ಪತ್ತೆ ಹಚ್ಚುತ್ತಿದ್ದಾರೆ. ಅನೇಕ ಗಾಯಗಳು ಮತ್ತು ಸಂಭಾವ್ಯ ಅನೇಕ ಸಾವುನೋವುಗಳು ಇವೆ ಎಂದು ನಮಗೆ ತಿಳಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುದ್ದಿ ಓದಿ