ಸೌಂದತ್ತಿ

ನ್ಯಾಯ ಸಮ್ಮತವಾದ ಹೋರಾಟಗಳು ಇಂದಿನ ಯುವಕರಿಗೆ ಮಾದರಿ: ಮಾಮನಿ

ನ್ಯಾಯ ಸಮ್ಮತವಾದ ಹೋರಾಟಗಳು ಇಂದಿನ ಯುವಕರಿಗೆ ಮಾದರಿ: ಮಾಮನಿ

ಸವದತ್ತಿ 19: ಛತ್ರಪತಿ ಶಿವಾಜಿ ಮಹಾರಾಜರ ಸಾಮಾಜಿಕ ಹಾಗೂ ನ್ಯಾಯ ಸಮ್ಮತವಾದ ಹೋರಾಟಗಳು ಇಂದಿನ ಯುವಕರಿಗೆ ಮಾದರಿಯಾಗಿದ್ದು, ಹಿಂದವೀ ಸಾಮ್ರಾಜ್ಯ ಸ್ಥಾಪನೆಯಲ್ಲಿ ಶಿವಾಜಿ ಮಹಾರಾಜರ ಕಾರ್ಯ ಶ್ಲಾಘನೀಯ ಎಂದು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಹೇಳಿದರು.

ಇಲ್ಲಿನ ತಹಸೀಲ್ದಾರ ಕಾರ್ಯಾಲಯದಲ್ಲಿ ತಾಲೂಕು ಆಡಳಿತ ಮತ್ತು ಮರಾಠ ಸಮಾಜ ಹಾಗೂ ಕರ್ನಾಟಕ ಕ್ಷತ್ರೀಯ ಒಕ್ಕೂಟದಿಂದ ಹಮ್ಮಿಕೊಂಡ ಛತ್ರಪತಿ ಶಿವಾಜಿ ಮಹಾರಾಜರ 394ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಶಿವಾಜಿ ಮಹಾರಾಜರ ಹಾಗೂ ಸವಿತಾ ಮಹರ್ಷಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ತಾಲೂಕು ಮರಾಠ ಸಮಾಜದ ಅಧ್ಯಕ್ಷ ಶಿವಾಜಿರಾವ್ ಶಿಂಧೆ ಮಾತನಾಡಿ, ಪ್ರತಿಯೊಬ್ಬರಿಗೂ ಸಾಮಾಜಿಕ ಬದುಕನ್ನು ಕಲ್ಪಿಸಿಕೊಟ್ಟು ಧರ್ಮ ರಕ್ಷಣೆಯ ಹೋರಾಟದ ಮಹಾನ ಪುರುಷರಲ್ಲಿ ಶಿವಾಜಿ ಮಹಾರಾಜರು ಒಬ್ಬರಾಗಿದ್ದು, ದೇಶ ಮತ್ತು ಧರ್ಮಕ್ಕಾಗಿ ಇವರು ನೀಡಿದ ಕೊಡುಗೆ ಇಂದು ದೇಶ ಭಕ್ತರಿಗೆ ಚೈತನ್ಯವನ್ನು ಮೂಡಿಸಿದೆ ಎಂದರು.

ತಹಸೀಲ್ದಾರ ಪ್ರಶಾಂತ ಪಾಟೀಲ ಅಧ್ಯಕ್ಷತೆವಹಿಸಿದ್ದರು.

ಗ್ರೇಡ-2 ತಹಸೀಲ್ದಾರ ಎಮ್.ವಿ.ಗುಂಡಪ್ಪಗೋಳ, ಮುಖ್ಯಾಧಿಕಾರಿ ಪ್ರಕಾಶ ಚನ್ನಪ್ಪನವರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಆರ್.ಆರ್.ಕುಲಕರ್ಣಿ, ಪುರಸಭೆ ಸದಸ್ಯ ಅರ್ಜುನ ಅಮ್ಮೋಜಿ,   ರಾಮಲಿಂಗೇಶ್ವರ ಅರ್ಬನ ಅಧ್ಯಕ್ಷ ಪುಂಡಲೀಕ ಬಾಳೋಜಿ, ಎಫ್.ಎ.ಕರೀಕಟ್ಟಿ, ತಾನಾಜಿರಾವ್ ಮುರಂಕರ, ಕೇದಾರ ಮೊಕಾಶಿ, ವಿ.ಜೆ.ಪವಾರ, ತಾನಾಜಿ ಶಿಂಧೆ, ಮಂಜುನಾಥ ನಿಕ್ಕಮ, ಮಾರುತಿ ಜಾಧವ, ಲಕ್ಷ್ಮಣ ಕಿಟದಾಳ, ಪಿ.ಎಮ್.ಪಾಯಣ್ಣವರ, ಸುರೇಶ ಬಾಳೋಜಿ, ಮಲ್ಲೇಶ ರಾಜನಾಳ, ಅಣ್ಣಪ್ಪ ಪವಾರ, ಮಂಜುನಾಥ ಡಬಕೆ, ಸನ್ನಿ ನರಗೋಳ, ವಿಠ್ಠಲ ಜಾಮದಾರ, ಅಶೋಕ ಶಿಂಧೆ, ಪ್ರಶಾಂತ ಪವಾರ, ಆನಂದ ಶಿಂಧೆ, ಸಚಿನ ಗಾಯಕವಾಡ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಕ್ಷತ್ರಿಯ ಒಕ್ಕೂಟದ  ಮುಖಂಡರು ಉಪಸ್ಥಿತರಿದ್ದರು. ಶಿವಾನಂದ ತಾರೀಹಾಳ ನಿರೂಪಿಸಿ ವಂದಿಸಿದರು.

ಸುದ್ದಿ ಓದಿ