ಹೆಚ್ಚಿನ ದರ, ಅಕ್ರಮ ದಾಸ್ತಾನು, ಕೃತಕ ಅಭಾವ ಸೃಷ್ಟಿಸಿದರೆ ಲೈಸನ್ಸ್ ರದ್ದು: ಜಿಲ್ಲಾಧಿಕಾರಿ ಸ್ನೇಹಲ್. ಆರ್.
Fertilizer vendors meeting
ಲೋಕದರ್ಶನ ವರದಿ
ರಸಗೊಬ್ಬರ ಮಾರಾಟಗಾರರ ಸಭೆ
ಪ್ರತಿದಿನ ಮಾರಾಟ ಕೇಂದ್ರದ ಮುಂದೆ ಮಾರಾಟದರ, ಲಭ್ಯ ದಾಸ್ತಾನು ಬಗ್ಗೆ ಡಿಸ್ಪೆ-್ಲ ಬೋರ್ಡ ಹಾಕುವುದು ಕಡ್ಡಾಯ;
ಧಾರವಾಡ ಏ.15: ರಸಗೊಬ್ಬರದ ಸಗಟು ಮಾರಾಟಗಾರರು ಹಾಗೂ ಚಿಲ್ಲರೆ ಮಾರಾಟಗಾರರು ತಮ್ಮ ಮಾರಾಟ ಕೇಂದ್ರಗಳ ಮುಂದೆ ತಮ್ಮ ಅಂದಿನ ರಸಗೊಬ್ಬರ ಮಾರಾಟದರ, ಅವತ್ತಿನ ದಾಸ್ತಾನು ಕುರಿತ ಮಾಹಿತಿ ಫಲಕವನ್ನು ಎಲ್ಲ ಗ್ರಾಹಕರಿಗೆ ಎದ್ದು ಕಾಣುವಂತೆ ದಪ್ಪ ಅಕ್ಷರಗಳಲ್ಲಿ ಪ್ರದರ್ಶಿಸುವುದು ಕಡ್ಡಾಯವಾಗಿದೆ. ನಿಗದಿಗಿಂತ ಹೆಚ್ಚಿನ ದರ ವಿಧಿಸುವುದು, ಅಕ್ರಮದಾಸ್ತಾನು ಹೊಂದುವುದು ಮತ್ತು ರಸಗೊಬ್ಬರದ ಕೃತಕ ಅಭಾವ ಸೃಷ್ಟಿಸಿದರೆ ಅಂತಹ ಮಾರಾಟಗಾರರ ಲೈಸನ್ಸ್ ರದ್ದುಗೊಳಿಸಲು ಕ್ರಮಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಹೇಳಿದರು.
ಅವರು ಇಂದು (ಏ.15) ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ನೂತನ ಸಭಾಂಗಣದಲ್ಲಿ ಜಿಲ್ಲೆಯ ಬೀಜ ಮತ್ತು ರಸಗೊಬ್ಬರ, ಕೀಟನಾಶಕ ಜೌಷಧಿಗಳ ಮಾರಾಟಗಾರರ ಹಾಗೂ ಸಗಟು ಮತ್ತು ಚಿಲ್ಲರೆ ಮಾರಾಟಗಾರರ, ರಸಗೊಬ್ಬರ ಕಂಪನಿಗಳ ಪ್ರತಿನಿಧಿಗಳ ಸಭೆ ಜರುಗಿಸಿ, ಮಾತನಾಡಿದರು.
ಕಳೆದ 2025-26 ನೇ ಸಾಲಿನಲ್ಲಿ ಜಿಲ್ಲೆಗೆ ಬೇಡಿಕೆಗಿಂತ ಹೆಚ್ಚು ರಸಗೊಬ್ಬರ ದಾಸ್ತಾನು ಆಗಿದೆ. ಮತ್ತು ಕಳೆದ ಸಾಲಿನಲ್ಲಿ ಯೂರಿಯಾ 26,582.61 ಮೆಟ್ರಿಕ್ ಟನ್, ಡಿಎಪಿ 9,040.23 ಮೆಟ್ರಿಕ ಟನ್, ಪೊಟಾಷ 1,581.23 ಮೆಟ್ರಿಕ ಟನ್, ಕಾಂಪ್ಲೆಕ್ಸ 19,157.50 ಮೆಟ್ರಿಕ ಟನ್, ಎಸ್.ಎಸ್.ಪಿ 708.01 ಮೆಟ್ರಿಕ ಟನ್ ಸೇರಿದಂತೆ ವಿವಿಧ ಪ್ರಕಾರದ ಒಟ್ಟು 57,069.62 ಮೆಟ್ರಿಕ ಟನ್ ರಸಗೊಬ್ಬರ ಮಾರಾಟವಾಗಿದೆ.
ಪ್ರಸಕ್ತ 2026-27 ನೇ ಸಾಲಿನ ಮುಂಗಾರು ಬೆಳೆಗಳಿಗೆ ವಿವಿಧ ವಿಧದ ಒಟ್ಟು 54,648 ಮೆಟ್ರಿಕ ಟನ್ ರಸಗೊಬ್ಬರ ಬೇಡಿಕೆ ಇದ್ದು, ಏಪ್ರೀಲ್ 2026 ರವರೆಗೆ 3,593.01 ಮೆಟ್ರಿಕ ಟನ್ ರಸಗೊಬ್ಬರ ಮಾರಾಟವಾಗಿದೆ. ಮಾರಾಟ ಮಳಿಗೆಗಳಲ್ಲಿ 9,113.53 ಮೆಟ್ರಿಕ ಟನ್ ಹಾಗೂ ಕೆಎಸ್‌ಎಸ್‌ಸಿ ಯಲ್ಲಿ 213.46 ಮತ್ತು ಕೆಎಸ್‌ಸಿಎಂಎಫ್ ದಲ್ಲಿ 633.50 ಮೆಟ್ರಿಕ ಟನ್ ರಸಗೊಬ್ಬರ ದಾಸ್ತಾನಿದೆ. ಕೇಂದ್ರ ಮತ್ತು ರಾಜ್ಯ ಸರಕಾರದ ಹಂಚಿಕೆ ಅನುಸಾರ ಉಳಿದ ರಸಗೊಬ್ಬರ ಸಕಾಲಕ್ಕೆ ಲಭ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಹೇಳಿದರು.
ರಸಗೊಬ್ಬರ ಉತ್ಪಾದನೆ ಹಾಗೂ ವಿತರಣಾ ಸಂಸ್ಥೆಗಳು ಕಡ್ಡಾಯವಾಗಿ ಸರಕು ಬರುವ ಮುಂಚಿತವಾಗಿ ಹಂಚಿಕೆ ಮಾಡುವ ಮಾರಾಟಗಾರರ ವಿವರವನ್ನು ಜಿಲ್ಲಾಡಳಿತಕ್ಕೆ ನೀಡಬೇಕು. ಮತ್ತು ಎಲ್ಲ ಉತ್ಪಾದನೆ ಸಂಸ್ಥೆಗಳು ಸರಕು ಬರುವ ಮಾಹಿತಿಯನ್ನು ಕಡ್ಡಾಯವಾಗಿ ಕೆಎಸ್‌ಎಸ್‌ಸಿ ಹಾಗೂ ಕೆಎಸ್‌ಸಿಎಂಎಫ್ ಸಂಸ್ಥೆಗಳಿಗೆ ಮುಂಗಡವಾಗಿ ತಿಳಿಸಿ, ಜಿಲ್ಲೆಗೆ ಹಂಚಿಕೆಯಾಗುವ ಪ್ರಮಾಣದಲ್ಲಿ ಶೇ. 25 ರಷ್ಟು ಕಾಪು ದಾಸ್ತಾನು ಅಡಿ ಸಂಗ್ರಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ರಸಗೊಬ್ಬರಕ್ಕೆ ಲಿಂಕ್ ಬೇಡ: ಸಹಾಯಧನ ಆಧಾರಿತ ರಸಗೊಬ್ಬರಗಳ ಜೊತೆ ಇನ್ನಾವುದೇ ಸಾವಯವ ಉತ್ಪನ್ನಗಳು, ಕೀಟನಾಶಕಗಳು, ನ್ಯಾನೋ ರಸಗೊಬ್ಬರ, ಸೂಕ್ಷ್ಮ ಪೋಷಕಾಂಶಗಳು, ಜೈವಿಕ ಉತ್ತೇಜಕಗಳು ಮತ್ತು ಯಾವುದೇ ಇತರೆ ಉತ್ಪನ್ನಗಳನ್ನು ಸಗಟು ಅಥವಾ ಚಿಲ್ಲರೆ ವ್ಯಾಪಾರಿಗಳಿಗೆ ಜೊಡಣೆ ಮಾಡಬಾರದು ಮತ್ತು ರೈತರಿಗೆ ರಸಗೊಬ್ಬರದೊಂದಿಗೆ ಒತ್ತಾಯ ಅಥವಾ ಕಡ್ಡಾಯವೆಂದು ಲಿಂಕ್ ಮಾಡಿ ಮಾರಾಟ ಮಾಡಬಾರದು.
ರೈತರಿಗೆ ಬೇಡಿಕೆ ಅನುಸಾರವಾಗಿ ಅವರ ಎಫ್‌ಐಡಿ ಗೆ ದಾಖಲಿಸಿ ರಸಗೊಬ್ಬರ ನೀಡಬೇಕು. ಉತ್ಪದನಾ ಸಂಸ್ಥೆಗಳು ಯಾವುದೇ ನೀರೀಕ್ಷಿತ ಕೊರತೆಗಳಿದ್ದರೆ ಜಿಲ್ಲಾಡಳಿತಕ್ಕೆ ಲಿಖಿತವಾಗಿ ತಿಳಿಸಬೇಕು ಮತ್ತು ಯೂರಿಯಾ ರಸಗೊಬ್ಬರ ವರ್ಗಾವಣೆ ಮಾಡುವ ಅಪರಾಧಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು.
ನಿಯಮ ಪಾಲನೆ ಕಡ್ಡಾಯ: ಸಗಟು ಮತ್ತು ಚಿಲ್ಲರೆ ರಸಗೊಬ್ಬರ ಮಾರಾಟಗಾರರು ಯೂರಿಯಾ ರಸಗೊಬ್ಬರವನ್ನು ಕಡ್ಡಾಯವಾಗಿ ಪಿಓಎಸ್ (ಕಓಖ) ಮಶಿನ್ ಮತ್ತು ಕೆ-ಕಿಸಾನ್ (ರೈತಮಿತ್ರ) ತಂತ್ರಾಂಶ ಮೂಲಕ ರೈತರಿಗೆ ಅವರ ಎಫ್‌ಐಡಿ (ಈಋ) ಆಧಾರಿತ ಜಮೀನಿನ ವಿಸ್ತೀರ್ಣದ ಮೇಲೆ ಒಂದು ತಿಂಗಳಿಗೆ ಒಂದು ಎಕರೆಗೆ ಒಂದು ಚೀಲದಂತೆ ಮಾರಾಟ ಮಾಡಬೇಕು. ಮತ್ತು ರಸಗೊಬ್ಬರಗಳ ಪರವಾನಿಗೆಯಲ್ಲಿ ಘೋಷಿಸದೇ ಇರುವ ಉಗ್ರಾಣ ಅಥವಾ ಸ್ಥಳಗಳಲ್ಲಿ ಸಂಗ್ರಹಣೆ ಮಾಡಿ ಮಾರಾಟ ಮಾಡುವಂತಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ರಸಗೊಬ್ಬರಗಳ ಸಂಗ್ರಹಣೆ ಮತ್ತು ರಸಗೊಬ್ಬರಗಳ ದರಗಳು ಇರುವ ಫಲಕ ಹಾಕಬೇಕು. ನಿಗದಿತ ದರಗಳ ಪ್ರಕಾರ ರಸಗೊಬ್ಬರಗಳ ಮಾರಾಟ ಮಾಡಬೇಕು. ರೈತರ ರಸಗೊಬ್ಬರಗಳ ಖರೀದಿಗೆ ನಗದು ಅಥವಾ ಉದ್ರಿ ಬಿಲ್ ಕೊಟ್ಟು, ಅವರ ಸಹಿ ಪಡೆಯಬೇಕು. ರಸಗೊಬ್ಬರವನ್ನು ಕೃಷಿಯೇತರ ಉಪಯೋಗಕ್ಕೆ ಮಾರಾಟ ಮಾಡುವಂತಿಲ್ಲ. ಗೌಪ್ಯವಾಗಿ ರಸಗೊಬ್ಬರಗಳನ್ನು ಸಂಗ್ರಹಿಸಿ, ತಾತ್ಕಾಲಿಕ ಅಭಾವ ಸೃಷ್ಟಿಸಿ, ಹೆಚ್ಚಿನ ದರಗಳಲ್ಲಿ ರಸಗೊಬ್ಬರಗಳನ್ನು ಮಾರಾಟ ಮಾಡುವಂತಿಲ್ಲ. ಮತ್ತು ಎಲ್ಲ ಅಂಗಡಿಕಾರರು ಪಿಓಎಸ್ (ಕಓಖ) ಮಶಿನ ಮೂಲಕ ರಸೀದಿ ನೀಡಬೇಕೆಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಹೇಳಿದರು.
ನಿಗದಿಗಿಂತ ಹೆಚ್ಚು ರಸಗೊಬ್ಬರ ಮಾರಿದವರಿಗೆ ನೋಟಿಸ್: ಏಪ್ರೀಲ್ 1, 2025 ರಿಂದ ಏಪ್ರೀಲ್ 10, 2026 ರೊಳಗೆ ಕೆಲವು ಚಿಲ್ಲರೆ ಮತ್ತು ಸಗಟು ರಸಗೊಬ್ಬರ ಮಾರಾಟಗಾರರು ತಮ್ಮ ಹಿಂದಿನ ವರ್ಷಗಳಿಗಿಂತ ಹೆಚ್ಚು ಯೂರಿಯಾ ಮತ್ತು ಡಿಎಸಿ ರಸಗೊಬ್ಬರ ಮಾರಾಟ ಮಾಡಿದ ಬಗ್ಗೆ ಪರೀಶೀಲಿಸಲಾಗಿದೆ.
ಕೃಷಿ ಇಲಾಖೆ ಅಧಿಕಾರಿಗಳು ಏಪ್ರೀಲ್ 13 ಮತ್ತು 14, 2026 ರಂದು ಅತಿ ಹೆಚ್ಚು ಯೂರಿಯಾ ರಸಗೊಬ್ಬರ ಸಗಟು ಮಾರಾಟ ಮಾಡಿರುವ ಜಿಲ್ಲೆಯ 103 ಮಾರಾಟ ಕೇಂದ್ರಗಳಿಗೆ ಭೇಟಿ ನೀಡಿ, ಪರೀಶೀಲಿಸಿದ್ದಾರೆ. 64 ಜನ ಮಾರಾಟಗಾರರಿಗೆ ಮಾರಾಟ ನಿಲ್ಲಿಸಲು ಸೂಚಿಸಿದ್ದಾರೆ. ಮತ್ತು 32 ಜನರಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ. ನಿಯಮ ಉಲ್ಲಂಘಿಸಿರುವ 5 ಜನ ರಸಗೊಬ್ಬರ ಮಾರಾಟಗಾರರ ಲೈಸನ್ಸ್ ಅಮಾನತ್ತು ಮಾಡಿದ್ದಾರೆ.
ಅದೇ ರೀತಿ ಅತಿ ಹೆಚ್ಚು ಡಿಎಪಿ ರಸಗೊಬ್ಬರ ಮಾರಾಟ ಮಾಡಿರುವ 95 ಜನ ಮಾರಾಟಗಾರರ ಅಂಗಡಿಗಳಿಗೆ ಅಧಿಕಾರಿಗಳು ಭೇಟಿ ನೀಡಿ, ಪರೀಶೀಲಿಸಿದ್ದಾರೆ. ಈ ಪೈಕಿ 54 ಜನ ಮಾರಾಟಗಾರರಿಗೆ ರಸಗೊಬ್ಬರ ಮಾರಾಟ ನಿಲ್ಲಿಸಲು ಸೂಚಿಸಿದ್ದಾರೆ ಮತ್ತು 31 ಜನ ರಸಗೊಬ್ಬರ ಮಾರಾಟಗಾರರಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ.
ನಿಯಮ ಮೀರಿ ನಿಗದಿಗಿಂತ ಹೆಚ್ಚು ರಸಗೊಬ್ಬರ ಮಾರಾಟ ಮಾಡುವ ಮಾರಾಟಗಾರರ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಎಚ್ಚರಿಕೆ ನೀಡಿದರು.
ಎಫ್.ಐ.ಡಿ ನೋಂದಾಯಿತರು: ಕೃಷಿ ಇಲಾಖೆ ಅಭಿವೃದ್ಧಿ ಪಡಿಸಿರುವ ಪ್ರೂಟ್ಸ್ ತಂತ್ರಾಂಶದಲ್ಲಿ ಧಾರವಾಡ ಜಿಲ್ಲೆಯ 3,21,762 ಜಮೀನುಗಳು (ತಾಕುಗಳು) ಪ್ರೂಟ್ಸ್ (ಈಖಗಋಖ) ತಂತ್ರಾಂಶದಲ್ಲಿ ನೋಂದಣಿ ಆಗಬೇಕಿದ್ದು, ಇದರಲ್ಲಿ ಈಗಾಗಲೇ 2,47,145 ಜಮೀನುಗಳು (ತಾಕುಗಳು) ಯಶಸ್ವಿಯಾಗಿ ನೋಂದಣಿಯಾಗಿವೆ. ಮತ್ತು 74,617 ಜಮೀನುಗಳು (ತಾಕುಗಳು) ಪ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಪ್ರಗತಿಯಲ್ಲಿದೆ.
ಒಟ್ಟಾರೆ ಶೇ. 77 ರಷ್ಟು ಪ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ದಾಖಲಾಗಿದ್ದು, ಜಿಲ್ಲೆಯ ಒಟ್ಟು 2,44,870 ರೈತರು ಪ್ರೂಟ್ಸ್ ಗುರಿತನ ಸಂಖ್ಯೆ (ಐಡಿ) ಹೊಂದಿದ್ದಾರೆ.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಭೆ ನಿರ್ವಹಿಸಿದರು. ಉಪ ನಿರ್ದೇರ್ಶಕ ಸಂದೀಪ ಆರ್.ಜಿ. ಅವರು ಸ್ವಾಗತಿಸಿದರು. ಸಹಾಯಕ ಕೃಷಿ ಅಧಿಕಾರಿ ಪೂರ್ಣಿಮಾ ಮೇಘನ್ನವರ ವಂದಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ರಸಗೊಬ್ಬರ ಚಿಲ್ಲರೆ ಹಾಗೂ ಸಗಟು ಮಾರಾಟಗಾರರು, ರಸಗೊಬ್ಬರ ಉತ್ಪಾದನೆ ಹಾಗೂ ವಿತರಣಾ ಸಂಸ್ಥೆಗಳ ಪ್ರತಿನಿಧಿಗಳು ಮಾತನಾಡಿ, ತಮ್ಮ ಬೇಡಿಕೆ ಹಾಗೂ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 