ರಬಾಕಾವಿಬನಹಟ್ಟಿ

ಠಾಣಾಧಿಕಾರಿ ಉಪ್ಪಾರರವರಿಗೆ ಸನ್ಮಾನ

ಠಾಣಾಧಿಕಾರಿ ಉಪ್ಪಾರರವರಿಗೆ ಸನ್ಮಾನ

ರನ್ನಬೆಳಗಲಿ 28:  ಸದಾ ಲವಲವಿಕೆಯಿಂದ ಎಲ್ಲರ ಪ್ರೀತಿಗೆ ಪಾತ್ರರಾಗಿ ಜನರಲ್ಲಿ ವಿಶ್ವಾಸಗಳಿಸಿ ಉತ್ತಮ ಆಡಳಿತದಿಂದ ಸಾರ್ವಜನಿಕರೆಲ್ಲರಿಗೂ ಮೆಚ್ಚುಗೆಗೆ ಪಾತ್ರರಾಗಿ 13 ತಿಂಗಳುಗಳ ಕಾಲ ಮಹಾಲಿಂಗಪುರ ಪೊಲೀಸ್ ಠಾಣೆಯ ಠಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಮಹಾಲಿಂಗಪುರ ಠಾಣೆಯಿಂದ ವಿಜಯಪುರ ಗ್ರಾಮೀಣ ಠಾಣೆಗೆ ವರ್ಗಾವಣೆಗೊಂಡಿರುವ   ಗಿರಮಲ್ಲಪ್ಪ ಉಪ್ಪಾರ್ ಅವರನ್ನು ರನ್ನಬೆಳಗಲಿ ಹಿರಿಯರು ಮತ್ತು ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾ ರನ್ನಬೆಳಗಲಿಯ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.  

ಊರಿನ ಹಿರಿಯರು ಮತ್ತು ಯುವಕ ಮಿತ್ರರಾದ ಮಹಾದೇವ ಜಗದಾಳ,   ಗಣೇಶ್ ಚೋಳಪ್ಪಗೋಲ,    ರಾಘವೇಂದ್ರ ನೀಲನ್ನವರ, ಮಹಾಲಿಂಗ್ ಮಾಳಿ,  ರಮೇಶ್ ಜಮಖಂಡಿ,   ಗೋವಿಂದ ಹಾದಿಮನಿ,  ಸಿದ್ದು ಹೆಗ್ಗಣ್ಣವರ, ಲಕ್ಷ್ಮಣ ಹೊಸೂರ್,   ವಿಠ್ಠಲ್ ಬಿರಾಜನವರ ,   ಹಣಮಂತ ನೀಲಣ್ಣವರ  ಇನ್ನಿತರರು ಹಾಜರಾಗಿ ಠಾಣಾಧಿಕಾರಿಗಳ ಮುಂದಿನ ಸರಕಾರಿ ಜೀವನವು ಇನ್ನು ಉನ್ನತವಾದ ಮಾನ ಸನ್ಮಾನಗಳಿಂದ ಕೂಡಿರಲಿ ಎಂದು ಶುಭ ಹಾರೈಸಿ ಬೀಳ್ಕೊಟ್ಟರು. 


ಸುದ್ದಿ ಓದಿ