ನೂತನ ಅಧ್ಯಕ್ಷ ಮಂಜುನಾಥಗೆ ಸನ್ಮಾನ
ಮುಧೋಳ16: ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ನೂತನ ಅಧ್ಯಕ್ಷರಾಗಿ ಮುಗಳಖೋಡ ಗ್ರಾಮದ ಮಂಜುನಾಥ ಪರಮಾನಂದ ಮಂಟೂರ ಅವರನ್ನು ಆಯ್ಕೆ ಮಾಡಿದ ಕೆಪಿಸಿಸಿ. ಅಧ್ಯಕ್ಷ ಡಿ. ಕೆ. ಶಿವಕುಮಾರ, ಕೆಪಿಸಿಸಿ. ದಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಲಕ್ಷ್ಮಿ ನಾರಾಯಣ ಹಾಗೂ ಜಿಲ್ಲಾಧ್ಯಕ್ಷ ಕಾಶಿನಾಥ ಹುಡೇದ ಅವರಿಗೆ ಸತೀಶ ಬಂಡಿವಡ್ಡರ ಅವರು ಅಭಿನಂದಿಸಿ ಮಂಜುನಾಥ ಮಂಟೂರ ಅವರನ್ನು ಸನ್ಮಾನಿಸಿದರು.