¯ನೂತನ ಪದಾಧಿಕಾರಿಗಳಿಗೆ ಸನ್ಮಾನ
ಮೂಡಲಗಿ 21: ಕಲಾವಿದರು ಆರ್ಥಿಕವಾಗಿ ಬಡವರಾಗಿದ್ದರೂ ಸಹ ಅವರು ನಂಬಿರುವ ಕಲೆ ಮತ್ತು ಹೃದಯವು ಶ್ರೀಮಂತವಾಗಿರುತ್ತದೆ ಎಂದು ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಹೇಳಿದರು. ಇಲ್ಲಿಯ ಮೂಡಲಗಿ ತಾಲ್ಲೂಕು ಪ್ರೆಸ್ ಅಸೋಸಿಯೇಶನ್ಗೆ ನೂತನವಾಗಿ ಆಯ್ಕೆಯಾಗಿರುವ ಪದಾಧಿಕಾರಿಗಳಿಗೆ ಸ್ಥಳೀಯ ಕಲಾವಿದರು ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಪತ್ರಕರ್ತರನ್ನು ಸಮಾಜವು ಗಮನಿಸುತ್ತಿರುತ್ತದೆ. ಎಲ್ಲಿಯೂ ಚ್ಯುತಿ ಬಾರದಂತೆ ಪತ್ರಿಕಾ ಧರ್ಮವನ್ನು ಪಾಲಿಸಿಕೊಂಡು ಪತ್ರಕರ್ತರು ಕಾರ್ಯಮಾಡಬೇಕು ಎಂದರು.
ಪ್ರೆಸ್ ಅಸೋಸಿಯೇಶನ ಅಧ್ಯಕ್ಷ ಲಕ್ಷ್ಮಣ ಅಡಿಹುಡಿ ಮಾತನಾಡಿ ಪತ್ರಕರ್ತರ ಸಂಘದ ಬೆಳವಣಿಗೆಗೆ ಎಲ್ಲರ ಸಹಕಾರ ಅವಶ್ಯವಿದೆ ಎಂದರು.
ಮೂಡಲಗಿಯ ಇಮಾಮಸಾಬ ಜಾತಿಗಾರ ಸಿದ್ದಿ ಕಲಾ ತಂಡದ ಅಧ್ಯಕ್ಷ ಚುಟುಕುಸಾಬ ಜಾತಿಗಾರ, ಭಜನಾ ಕಲಾವಿದ ಬಸಪ್ಪ ಮೇಲಾನಟ್ಟಿ, ಗೋಂದಳಿ ಕಲಾವಿದ ನಾಗೇಂದ್ರ ಮಾನೆ, ಹುಸೇನಸಾಬ ಮನಗೂಳಿ, ಸೈಫನ್ಸಾಬ ಮಂಟೂರ, ಇನ್ನೂಸ ನಾಗರಾಳ ಇವರನ್ನು ಸನ್ಮಾನಿಸಲಾಯಿತು.
ಹಿರಿಯ ಪತ್ರಕರ್ತ ವಿ.ಎಚ್. ಬಾಲರಡ್ಡಿ ಪ್ರಾಸ್ತಾವಿಕ ಮಾತನಾಡಿದರು. ಸುಧಾರಕ ಉಂದ್ರಿ, ಶಿವಾನಂದ ಮರಾಠೆ, ಎಸ್.ಎಂ. ಚಂದ್ರಶೇಖರ, ಮಂಜುನಾಥ ರೇಳೆಕರ ಇದ್ದರು.