ಬೆಳೆವಿಮೆ ಪರಿಹಾರ ನೀಡುವಂತೆ ಆಗ್ರಹಿಸಿ ರೈತರ ಬೃಹತ್ ಪ್ರತಿಭಟನೆ
Farmers stage massive protest demanding crop insurance compensation
ಲೋಕದರ್ಶನ ವರದಿ
ಗದಗ 16: 2025-26 ನೇ ಸಾಲಿನ ಪ್ರಧಾನಮಂತ್ರಿ ಫಸಲಾ ಭೀಮಾ ಯೋಜನೆಯ ಬೆಳೆವಿಮಾ ಪರಿಹಾರ ಹಾಗೂ ಬೆಳೆವಿಮೆ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಬೆಳೆವಿಮಾ ಹೋರಾಟ ಸಮಿತಿ ಹಾಗೂ ವಿವಿದ ರೈತ ಸಂಘಟನೆಗಳ ನೇತೃತ್ವದಲ್ಲಿ ಗುರುವಾರ ನೂರಾರು ರೈತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿ ಎಚ್ಚರಿಕೆ ನೀಡಿದರು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ರೈತರು ನಗರದ ಟಿಪ್ಪು ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಬೆಳೆವಿಮಾ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಪರಮೇಶ್ವರ್ಪ ಜಂತ್ಲಿ ಅವರು ಮಾತನಾಡಿ,
ಗದಗ ಜಿಲ್ಲೆಯಲ್ಲಿ ಕೆಂಪು ಮೆಣಸಿನಕಾಯಿ, ಇರುಳ್ಳಿ, ಹೆಸರು, ಶೇಂಗಾ, ಗೋವಿನಜೋಳ ಸೇರಿದಂತೆ ಮುಂತಾದ ಮುಂಗಾರು ಬೆಳೆಗಳಲ್ಲಿ ಪ್ರಧಾನಮಂತ್ರಿ ಫಸಲ ಭೀಮಾ ಯೋಜನೆಯಡಿ ಲಕ್ಷಾಂತರ ರೈತರು ಬೆಳೆ ವಿಮಾ ಪಾವತಿಸಿದ್ದು, ಇಲ್ಲಿಯವರೆಗೂ ವಿಮಾ ಕಂಪನಿಯ ಮಧ್ಯಂತರ ಪರಿಹಾರ ಮರೀಚಿಕೆಯಾಗಿದ್ದು, ಓರಿಯಂಟಲ್ ವಿಮಾ ಕಂಪನಿ ಗದಗ ಜಿಲ್ಲೆಯ ರೈತರಿಗೂ ಮತ್ತು ಸರಕಾರಕ್ಕೂ ಮೋಸ ಮಾಡುತ್ತಿದ್ದು, ಮಧ್ಯಂತರ ಸ್ಥಳೀಯ ಗಂಡಾಂತರ ಪರಿಹಾರ ರೈತರ ಖಾತೆಗೆ ಹಾಕದೇ ಕುಂಟ ನೆಪ ಹೇಳುತ್ತ ದಿನಗಳನ್ನು ಮುಂದೆ ಹಾಕುತ್ತಿದ್ದಾರೆ. ಅದ್ದರಿಂದ ಜಿಲ್ಲಾಧಿಕಾರಿ ಅವರು ತಕ್ಷಣ ಬೆಳೆ ವಿಮಾ ಕಂಪನಿಗೆ ಆದೇಶ ಮಾಡಿ ಬೆಳೆ ವಿಮಾ ತುಂಬಿದ ಎಲ್ಲಾ ರೈತರಿಗೂ ಸ್ಥಳೀಯ ಗಂಡಾಂತರ ಬೆಳೆ ವಿಮಾ ಪರಿಹಾರ ಮತ್ತು ಬೆಳೆ ವಿಮಾ ಪಾವತಿಸುವಂತೆ ಆದೇಶ ಮಾಡಬೇಕು. ಒಂದು ವಾರದೊಳಗಾಗಿ ಓರಿಯಂಟಲ್ ವಿಮಾ ಕಂಪನಿಗೆ ಬೆಳೆವಿಮೆ ಹಣ ರೈತರ ಖಾತೆಗೆ ಜಮೆ ಮಾಡುವಂತೆ ಆದೇಶ ಮಾಡದಿದ್ದರೆ ಗದಗ ಜಿಲ್ಲೆಯ ರೈತರು ಗದಗ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮುಂದೆ ಅನಿರ್ಧಿಷ್ಟಾವದಿ ವರೆಗೆ ಸತ್ಯಾಗ್ರಹ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಪ್ರತಿಭಟನೆಯಲ್ಲಿ ರಾಜ್ಯ ಉಪಾಧ್ಯಕ್ಷರಾದ ಹನಮರಡ್ಡಿ ಮೊರಬರಡ್ಡಿ, ರಾಜ್ಯ ಕಾರ್ಯದರ್ಶಿ ಎಫ್.ಎಸ್. ಪಾಟೀಲ, ಉಮೇಶ ಲಿಂಗರಡ್ಡಿ, ಬೂದೇಶ ಮೈಲಾರ, ಜಿಲ್ಲಾಧ್ಯಕ್ಷ ರುದ್ರಯ್ಯ ಹಿರೇಮಠ, ಅಶೋಕ ಬಶೆಟ್ಟಿ, ಸತೀಶ ಗಿಡ್ಡಹನುಮಣ್ಣವರ, ಸೋಮನಗೌಡ್ರ ಪಾಟೀಲ, ಗೋವಿಂದರಡ್ಡಿ ಕೊಣ್ಣೂರ, ಕಿರಣ ಪವಾರ, ಜಗದೀಶ ಕೊಣ್ಣೂರ, ಈರಣ್ಣ ಬಂಡಿಹಾಳ, ಈರ್ಪ ಹಳ್ಳಿ, ಸಿದ್ದು ಯಾಳವಾಡ, ಮಲ್ಲನಗೌಡ ಪಾಟೀಲ, ಪ್ರಕಾಶ ರೆಡಿಯಪ್ಪನವರ, ಕೊಟ್ರಯ್ಯ ಕಟ್ಟಿಮನಿ, ಸತೀಶಕುಮಾರ ಸಲಗಾರ, ಹುಚ್ಚಪ್ಪ ಗುರಿಕಾರ, ಮಂಜು ಸಿದ್ದನಗೌಡ, ಅಶೋಕಕುಮಾರ, ಶೇಖರ, ರಾಜು, ಬಸವರಾಜ ಮಲ್ಲಿಕಾರ್ಜುನ, ವೀರ್ಪ ಚೆನ್ನಪ್ಪನವರ, ಆರ್.ಜಿ.ಪೊಲೀಸಪಾಟೀಲ, ಬಸವರಾಜ ಗುಡ್ಡಪ್ಪನವರ, ಭರಮಪ್ಪ ಹುಲಗೂರ, ಪ್ರವೀಣ, ಮಹೇಂದ್ರಗೌಡ ಚಿಕ್ಕನಗೌಡ್ರ, ಶರಣಪ್ಪ ಹುಲಗೂರ, ಮಂಜು ಕುರಡಗಿ, ಕೆ.ಸಿ.ಅಮ್ಮಿನಬಾವಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 