ಮೂಡಲಗಿ

7 ಜನ ಪೊಲೀಸರ ಬೀಳ್ಕೊಡುಗೆೆ

7 ಜನ ಪೊಲೀಸರ ಬೀಳ್ಕೊಡುಗೆೆ

ಮೂಡಲಗಿ 20: ತಾಲೂಕಿನ ಕುಲಗೋಡ ಪೊಲೀಸ್ ಠಾಣೆಯಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸಿ ಬೇರೆ ಪೊಲೀಸ್ ಠಾಣೆಗೆ ವರ್ಗಾವನೆಯಾದ ಆರ್ ಬಿ ನಾಯಿಕ. ವಾಯ್ ಎಸ್ ನಿಡಗುಂದಿ. ಬಿ.ಬಿ ಬೀರಾದಾರ. ಎಸ್‌.ಎಸ್ ವಜ್ರಮಟ್ಟಿ. ಎಮ್‌.ಎಸ್ ಕುರೆನ್ನವರ. ಎ.ಕೆ ನ್ಯಾಮಗೌಡ. ಎಸ್ ಬಿ ಪಾಟೀಲ. 7 ಜನ ಪೊಲೀಸ್ ಸಿಬ್ಬಂದಿಗಳಿಗೆ ಠಾಣೆಯಲ್ಲಿ ಬಿಳ್ಕೋಡುಗೆ ಸಮಾರಂಭ ನಡೆಯಿತು. 

ಮೂಡಲಗಿ ಸಿಪಿಐ ಶ್ರೀಶೈಲ ಬ್ಯಾಕೂಡ ಮಾತನಾಡಿ ಜನತೆಯ ಸೇವೆಯೊಂದಿಗೆ ಕುಟುಂಬದ ಕಡೆ ಮತ್ತು ಮಕ್ಕಳ ಶಿಕ್ಷಣದ ಕಡೆಗೆ. ದೈಹಿಕ ಸದೃಡತೆಯ ಬಗ್ಗೆ ಗಮನ ಹರಿಸಿ. ಪ್ರಾಮಣಿಕತೆಯಿಂದ ಕಾರ್ಯ ನಿರ್ವಹಿಸಿ ಎಂದು ಕಿವಿ ಮಾತು ಹೇಳಿದರು. 

ಪಿ.ಎಸ್‌.ಐ ಆನಂದ ಬಿ . ಎ.ಡಿ ಕೊಪ್ಪದ. ಅನಿಲ ಮಡಿವಾಳರ. ಸಿ.ಎಸ್ ಹಿರೇಮಠ. ವಿ.ಎ ದೇಸಾಯಿ. ಎಮ್‌.ಆರ್ ಲದ್ದಿ. ಎಸ್‌.ಪಿ. ಮುಗ್ಗನ್ನವರ. ಮಾಳಪ್ಪ ಆಡಿನ. ವಿಠ್ಠಲ ದೂಳಪ್ಪನವರ. ಕೆ.ಸಿ ಬಾಗಲಿ. ಹಾಗೂ ಕುಲಗೋಡ ಪೊಲೀಸ್ ಠಾಣೆಯ ಸಿಬ್ಬಂದಿ ವರ್ಗ ಇದ್ದರು. 


ಸುದ್ದಿ ಓದಿ