ಅಂತರರಾಷ್ಟ್ರೀಯ

ಶ್ರೀಲಂಕಾ ನೌಕಾಪಡೆಯಿಂದ ಭಾರತೀಯ ಮೀನುಗಾರರ ಮೇಲೆ ದಾಳಿ

ಶ್ರೀಲಂಕಾ ನೌಕಾಪಡೆಯಿಂದ ಭಾರತೀಯ ಮೀನುಗಾರರ ಮೇಲೆ ದಾಳಿ

ರಾಮೇಶ್ವರಂ, ಅ 27: ಶ್ರೀಲಂಕಾ ನೌಕಾಪಡೆ ಮಂಗಳವಾರ ಭಾರತೀಯ ಮೀನುಗಾರರ ಮೇಲೆ ಹಲ್ಲೆ ನಡೆಸಿ,ಅಂತಾರಾಷ್ಟ್ರೀಯ ಸಮುದ್ರ ಗಡಿರೇಖೆ (ಐಎಂಬಿಎಲ್) ಬಳಿ ಅನೇಕ ಭಾರತೀಯ ಮೀನುಗಾರಿಕಾ ದೋಣಿಗಳನ್ನು ಬೆನ್ನಟ್ಟಿದೆ ಎನ್ನಲಾಗಿದೆ. 

ಸಮುದ್ರದ ಮಧ್ಯೆ ದಾಳಿಯ ನಂತರ ರಾಮೇಶ್ವರಂಗೆ ಮರಳಿದ ಮೀನುಗಾರರು, ‘ಶ್ರೀಲಂಕಾದ ನೌಕಾ ಗಸ್ತು ಹಡಗುಗಳು ತಮ್ಮ ಮೀನುಗಾರಿಕಾ ದೋಣಿಗಳನ್ನು ಸುತ್ತುವರೆದು ಕಲ್ಲುಗಳು ಮತ್ತು ಸೋಡಾ ಬಾಟಲಿಗಳನ್ನು ನಿರ್ದಾಕ್ಷಿಣ್ಯವಾಗಿ ಸಮುದ್ರದ ಮಧ್ಯದಲ್ಲಿ ಎಸೆದಿವೆ.’ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ದಾಳಿಯ ವೇಳೆ ಸುರೇಶ್ (42) ಎಂದು ಗುರುತಿಸಲ್ಪಟ್ಟ ಮೀನುಗಾರನಿಗೆ ತಲೆಗೆ ಸಣ್ಣಪುಟ್ಟ ಗಾಯವಾಗಿದ್ದು,  ಸಮುದ್ರ ತೀರಕ್ಕೆ ತಲುಪಿದದ ನಂತರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. 

ಲಂಕಾ ನೌಕಾಪಡೆಯು ಸಮುದ್ರಗಳಲ್ಲಿ ಹಾಕಿದ ಮೀನುಗಾರಿಕಾ ಬಲೆಗಳು, , ಮೀನುಗಾರಿಕೆ ಗ್ಯಾಜೆಟ್‌ಗಳು ಮತ್ತು ಜಿಪಿಎಸ್ ಸಾಧನಗಳನ್ನು ಹಾನಿಗೊಳಿಸಿದ್ದು, ಇದರಿಂದ ಲಕ್ಷಾಂತರ ರೂ ನಷ್ಟವಾಗಿದೆ ಎಂದು ಮೀನುಗಾರರು ಅಳಲು ತೋಡಿಕೊಂಡಿದ್ದಾರೆ. 

ಎಂದಿನಂತೆ ಮೀನುಗಾರಿಕೆಗಾಗಿ ಸೋಮವಾರ ಬೆಳಿಗ್ಗೆ ಸುಮಾರು 3,000 ಮೀನುಗಾರರು ರಾಮೇಶ್ವರಂನಿಂದ ಸಮುದ್ರಕ್ಕೆ ಇಳಿದಿದ್ದರು ಎಂದು ಮೀನುಗಾರಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಮಧ್ಯೆ, ಪಿಎಂಕೆ ಸ್ಥಾಪಕ ಡಾ.ಎಸ್.ರಾಮದಾಸ್ ಅವರು ಭಾರತೀಯ ಮೀನುಗಾರರ ಮೇಲಿನ ದಾಳಿಯನ್ನು ತೀವ್ರವಾಗಿ ಖಂಡಿಸಿ,ಮೀನುಗಾರರ ಹಿತಾಸಕ್ತಿ ಕಾಪಾಡಲು ದೃಢವಾದ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.



ಸುದ್ದಿ ಓದಿ