ಬ್ಲಾಗೊವೆಶ್ಚೆನ್ಸ್ಕ್ ವಿಮಾನ ನಿಲ್ದಾಣದ ಅಂತರರಾಷ್ಟ್ರೀಯ ಟರ್ಮಿನಲ್ ನಲ್ಲಿ ಅಗ್ನಿ ಆಕಸ್ಮಿಕ
ಬ್ಲಾಗೊವೆಶ್ಚೆನ್ಸ್ಕ್, ಡಿ 17: ರಷ್ಯಾದ ಫಾರ್ ಈಸ್ಟರ್ನ್ ನಗರವಾದ ಬ್ಲಾಗೋವೆಶ್ಚೆನ್ಸ್ಕ್ ನಲ್ಲಿರುವ ವಿಮಾನ ನಿಲ್ದಾಣದ ಅಂತರರಾಷ್ಟ್ರೀಯ ಟರ್ಮಿನಲ್ ಗುರುವಾರ ಬೆಂಕಿ ಕಾಣಿಸಿಕೊಂಡಿದ್ದು, ಅದರಷ್ಟವಶಾತ್ ಘಟನೆಯಲ್ಲಿ ಯಾರಿಗೂ ತೊಂದರೆಯಾಗಿಲ್ಲ ಎಂದು ಪ್ರಾದೇಶಿಕ ಅಧಿಕಾರಿಗಳು ತಿಳಿಸಿದ್ದಾರೆ. “ಬೆಳಿಗ್ಗೆ 8: 30 ಕ್ಕೆ ವಿಮಾನ ನಿಲ್ದಾಣದ ಅಂತರರಾಷ್ಟ್ರೀಯ ವಲಯದ ಕಟ್ಟಡದಲ್ಲಿ ಬೆಂಕಿ ಅವಘಡದ ಬಗ್ಗೆ ಮಾಹಿತಿ ದೊರಕಿದ್ದು, ವಿಮಾನ ನಿಲ್ದಾಣ ಮತ್ತು ತುರ್ತು ಸಚಿವಾಲಯದ ಅಗ್ನಿಶಾಮಕ ಸೇವೆ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದೆ. ಯಾರಿಗೂ ಗಾಯಗಳಾದ ಬಗ್ಗೆ ಯಾವುದೇ ವರದಿಗಳಿಲ್ಲ" ವಿಮಾನ ನಿಲ್ದಾಣವು ಎಂದಿನಂತೆಯೇ ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿದೆ. ಯಾವುದೇ ವಿಮಾನಗಳ ಹಾರಾಟದಲ್ಲಿ ವಿಳಂಬವಾಗಿಲ್ಲ ಎಂದು ಸಾರಿಗೆ ಸಚಿವಾಲಯದ ಅಮುರ್ ಪ್ರದೇಶದ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಬೆಂಕಿಯನ್ನು ನಂದಿಸಿ, ಹೆಚ್ಚಿನ ನಷ್ಟವಾಗುವುದನ್ನು ತಪ್ಪಿಸಲಾಗಿದೆ. ಆದಾಗ್ಯೂ, ಘಟನೆಗೆ ಕಾರಣಗಳೇನು ಎಂಬುದರ ಬಗ್ಗೆ ಇನ್ನೂ ತಿಳಿದುಬಂದಿಲ್ಲ.