ಹುಕ್ಕೇರಿ

ಅಬಕಾರಿ ದಾಳಿ: ಭಾರಿ ಪ್ರಮಾಣದಲ್ಲಿ ಮಹಾರಾಷ್ಟ್ರ ಸಾರಾಯಿ ಜಪ್ತಿ

ಅಬಕಾರಿ ದಾಳಿ: ಭಾರಿ ಪ್ರಮಾಣದಲ್ಲಿ ಮಹಾರಾಷ್ಟ್ರ ಸಾರಾಯಿ ಜಪ್ತಿ

ಹುಕ್ಕೇರಿ 11:  ಅಬಕಾರಿ ದಾಳಿ ಭಾರಿ ಪ್ರಮಾಣದಲ್ಲಿ ಮಹಾರಾಷ್ಟ್ರ ಸಾರಾಯಿ ಜಪ್ತಿ. ಹುಕ್ಕೇರಿ ತಾಲೂಕಿನ ಬುಗಟಿ ಆಲೂರ  ಗ್ರಾಮದ ಹತ್ತಿರ ರಾಜ್ಯ ಹೆದ್ದಾರಿಯಲ್ಲಿ ಆಕ್ರಮವಾಗಿ ಸಾಗಿಸುತ್ತಿದ್ದ ಮಹಾರಾಷ್ಟ್ರ ಸಾರಾಯಿಯನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಜಪ್ತ ಮಾಡಿ ಓರ್ವನನ್ನು ಬಂದಿಸಲಾಗಿದೆ. ಅಬಕಾರಿ ಅಪರ ಆಯುಕ್ತರು  ಎಸ್ ಕೆ ಕುಮಾರ ರವರ ಮಾರ್ಗದರ್ಶನದಲ್ಲಿ ಹಾಗೂ ಅಬಕಾರಿ ಉಪ ಆಯುಕ್ತರು, ಬೆಳಗಾವಿ ಉತ್ತರ ಜಿಲ್ಲೆ ಚಿಕ್ಕೋಡಿ  ಹಾಗೂ  ಅಬಕಾರಿ ಉಪಅಧೀಕ್ಷಕರು ಚಿಕ್ಕೋಡಿ ಉಪ ವಿಭಾಗವರವರ ನಿರ್ದೇಶನದ ಮೇರೆಗೆ ಲೋಕಸಭಾ ಉಪ ಚುನಾವಣೆ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ರವಿವಾರ ರಾತ್ರಿ 11 ಗಂಟೆ ಸುಮಾರಿಗೆ ಹುಕ್ಕೇರಿ ತಾಲೂಕಿನ  ಬುಗಟೆ ಆಲೂರಿನಲ್ಲಿ ಚುನಾವಣಾ ನಿಮಿತ್ತ ತೆರೆದ  ತಾತ್ಕಾಲಿಕ ಅಬಕಾರಿ ತನಿಖಾ ಠಾಣೆಯಲ್ಲಿ ಸಿಬ್ಬಂದಿಗಳು ವಾಹನಗಳ ತಪಾಸಣೆ ಮಾಡುವ ಕಾಲಕ್ಕೆ ಅಶೋಕ ಲೈಲಾಂಡ 6 ಚಕ್ರ ವಾಹನ, ನೋಂದಣಿ ಸಂಖ್ಯೆ ಒಊ 09ಈಐ 0653 ಅನ್ನು ತಡೆದು ತಪಾಸಣೆ ಮಾಡುವ ಸಮಯದಲ್ಲಿ ಸದರಿ ವಾಹನದಲ್ಲಿ ಮನೋರಂಜನ ದೇಸಿ ದಾರು ಸಂತ್ರ ಇರುವುದು ತಿಳಿದುಬಂದು ನಂತರ ಸದರಿ ಮುದ್ದೆಮಾಲಿನ ಪರ್ಮಿಟ್ ಅನ್ನು ಪರಿಶೀಲನೆ ಮಾಡಲಾಗಿ ಸದರಿ ವಾಹನವು ಮಹಾರಾಷ್ಟ್ರ ರಾಜ್ಯದ ರಹದಾರಿ ಪತ್ರ ಹೊಂದಿದ್ದು  ಮದ್ಯವು ಮಹಾರಾಷ್ಟ್ರದಲ್ಲಿಯೇ ಸಾಗಾಣಿಕೆ ಆಗಬೇಕಿದ್ದು ಆದರೆ ಅವರು ಮಹಾರಾಷ್ಟ್ರ ದಿಂದ ಕರ್ನಾಟಕದ ಮೂಲಕ ಸಾಗಾಣಿಕೆ ಮಾಡಿದ್ದು ಕರ್ನಾಟಕ ರಾಜ್ಯದ ಯಾವುದೇ ರಹದಾರಿ ಪತ್ರ ಹೊಂದಿಲ್ಲದೇ ಅಕ್ರಮವಾಗಿ ಚುನಾವಣಾ ಸಮಯದಲ್ಲಿ  ಸಾಗಾಣಿಕೆ ಆಗುವುದು ಕಂಡು ಬಂದಿದೆ.  ವಾಹನ ಮತ್ತು 800 ಪೆಟ್ಟಿಗೆಯಲ್ಲಿ  6984  ಲೀ ಮಹಾರಾಷ್ಟ್ರ ರಾಜ್ಯದ ಸಂತ್ರ ಸಾರಾಯಿ ಹಾಗೂ ಮಹಾರಾಷ್ಟ್ರ ರಾಜ್ಯದ ಸಾತಾರ ಜಿಲ್ಲೆಯ ಕರಾಡ ತಾಲೂಕಿನ ಸೈದಾಪೂರ ಗ್ರಾಮದ   ಪ್ರದೀಪ ಶಿವಾಜಿ ರಾವ್ ಎಂಬುವನನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

ಸುದ್ದಿ ಓದಿ