ರಾಜ್ಯದ 865 ಹಳ್ಳಿಗಳಿಗೆ ಮಹಾರಾಷ್ಟ್ರದ ಹಣ : ಕನ್ನಡಿಗರ ಹಿತ ರಕ್ಷೀಸದ ಬೊಮ್ಮಾಯಿ ಸಿಎಂ ಸ್ಥಾನಕ್ಕೆ ನಾಲಾಯಕ : ಕೇಂದ್ರವು ಮಹಾ ಸರಕಾರವನ್ನು ಕಿತ್ತು ಹಾಕಲಿ : ಸಿದ್ದು ವಾಗ್ದಾಳಿ

ರಾಜ್ಯದ 865 ಹಳ್ಳಿಗಳಿಗೆ ಮಹಾರಾಷ್ಟ್ರದ ಹಣ : ಕನ್ನಡಿಗರ ಹಿತ ರಕ್ಷೀಸದ ಬೊಮ್ಮಾಯಿ ಸಿಎಂ ಸ್ಥಾನಕ್ಕೆ ನಾಲಾಯಕ : ಕೇಂದ್ರವು ಮಹಾ ಸರಕಾರವನ್ನು ಕಿತ್ತು ಹಾಕಲಿ : ಸಿದ್ದು ವಾಗ್ದಾಳಿ

ಬೆಳಗಾವಿ : ಕರ್ನಾಟಕದ 865 ಹಳ್ಳಿಗಳಲ್ಲಿ ಮಹಾರಾಷ್ಟ್ರ ಸರಕಾರ ಆರೋಗ್ಯ ವಿಮೆಗೆ ಹಣ ಬಿಡುಗಡೆ ಮಾಡುವ ಮೂಲಕ ರಾಜ್ಯ ನೆಲ, ಜಲ, ಭಾಷೆ ವಿಷಯದಲ್ಲಿ ಕಾಲು ಕೆದರುತ್ತಿದೆ. ರಾಜ್ಯದ ಭಾಷೆ, ನೆಲ, ಜಲ, ಹಕ್ಕು ರಕ್ಷಣೆ ಮಾಡಲು ವಿಫಲವಾಗಿರುವ ಬಸವರಾಜ ಬೊಮ್ಮಾಯಿ ಅವರು ಸಿಎಂ ಸ್ಥಾನದಲ್ಲಿ ಮುಂದೆವರೆಯಲು ನಾಲಾಯಕ. ಕನ್ನಡಿಗರ ರಕ್ಷಣೆ ಮಾಡದೆ ಮೌನವಾಗಿ ಉಳಿದು, ಕೈಕಟ್ಟಿ ಕುಳಿತಿರುವ ಬೊಮ್ಮಾಯಿ ಅವರು ಈ ಕೂಡಲೇ ರಾಜೀನಾಮೆ ನೀಡಬೇಕು. ಕೇಂದ್ರ ಸರಕಾರ ಮಹಾರಾಷ್ಟ್ರ ಸರಕಾರವನ್ನು ವಜಾ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ವಾಗ್ದಾಳಿ ನಡೆಸಿದರು.

    ಗುರುವಾರ ನಗರದ ಕಾಂಗ್ರೆಸ್ ಭವನದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಮಹಾರಾಷ್ಟ್ರ ಸರಕಾರ ಕರ್ನಾಟಕದ 865 ಹಳ್ಳಿಗಳ ಜನರಿಗೆ ಆರೋಗ್ಯ ವಿಮೆ ನೀಡುವ ಮೂಲಕ ಮತ್ತೆ ಗಡಿ ವಿಷಯದಲ್ಲಿ ತಗಾದೆ ತೆಗೆಯುತ್ತಿದೆ. ಈಗಾಗಲೇ ಕೆಲವು ಹಳ್ಳಿಗಳಲ್ಲಿ 54 ಕೋಟಿ ಖರ್ಚು ಮಾಡಲು ಬಿಡುಗಡೆ ಮಾಡಿದ್ದರೂ ಕನ್ನಡ ಭಾಷೆ, ಕನ್ನಡಿಗರ ರಕ್ಷಣೆ, ರಾಜ್ಯ ನೆಲ, ಜಲ ವಿಷಯದಲ್ಲೂ ಮೌನ ವಹಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನೀ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

     ಮಹಾರಾಷ್ಟ್ರ ಸರಕಾರ ಅನಗತ್ಯವಾಗಿ ಮೇಲಿಂದ ಮೇಲೆ ಕಾಲ ಕೆದರುವ ಕೆಲಸ ಮಾಡಿ ರಾಜ್ಯದ 6.5 ಕೋಟಿ ಕನ್ನಡಿಗೆ ಸ್ವಾಭಿಮಾನ ಕೆನಕುವ ಕೆಲಸ ಮಾಡಿದ್ದಾರೆ. ಇದು ಮಹಾರಾಷ್ಟ್ರದ ಷಡ್ಯಂತ್ರ.ವಾಗಿದ್ದು, ಇದನ್ನು ನಾನು ಕಠೀಣವಾಗಿ ಖಂಡಿಸುತ್ತೇನೆ. ಈ ಹಿಂದೆ ಭಾಷಾವಾರು ರಾಜ್ಯ ವಿಂಗಡನೆ ಮೇಲೆ ರಾಜ್ಯಗಳು ಆಗಿವೆ. ಮಹಾಜನ್ ಅವರು ಮಹಾರಾಷ್ಟ್ರದ ನ್ಯಾಯಾಧೀಶರಾಗಿದ್ದವರು. ಅವರೆ ಅದರ ಕುರಿತು ವರದಿ ಕೊಟ್ಟರು. ನಮಗೆ ಅನ್ಯಾಯವಾದರು ಮಹಾಜನ್ ವರದಿಯನ್ನು ಕನ್ನಡಿಗರು ನಾವು ಒಪ್ಪಿಕೊಂಡಿದ್ದೇವೆ. ಅದರ ವಿರುದ್ದವಾಗಿ ಮಹಾರಾಷ್ಟ್ರದವರೇ ಸುಪ್ರೀಂ ಕೊರ್ಟ ಮೆಟ್ಟಿಲು ಏರಿದ್ದಾರೆ.

     ಆದರೆ ಇವಾಗ ಮಹಾರಾಷ್ಟ್ರ ಸರಕಾರ ಕರ್ನಾಟಕದ 865 ಹಳ್ಳಿಗಳಲ್ಲಿ ಆರೋಗ್ಯ ವಿಮೆ ಮಾಡಲು ಹೊರಟಿದ್ದಾರೆ. ಅದಕ್ಕೆ ಈಗಾಗಲೇ 54 ಕೋಟಿ ದುಡ್ಡು ಬಿಡುಗಡೆ ಮಾಡಿದ್ದಾರೆ. ಇದರಿಂದ ಮಹಾರಾಷ್ಟ್ರದವರು ರಾಜ್ಯದ ಜನರಿಗೆ ಧಕ್ಕೆ ಕೊಡಲು ಹೊರಟಿದ್ದಾರೆ. ಸಂವೀದಾನ ಬಿಕ್ಕಟ್ಟು, ಕನ್ನಡಿಗರ ಸ್ವಾಭಿಮಾನ ಕೆನಕುವ ಕಾರ್ಯ ಇದಾಗಿದೆ. ಒಕ್ಕೂಟದ ವ್ಯವಸ್ಥೆ ಬುಡಮೇಲು ಮಾಡಲು ಹೊರಟ್ಟಿದ್ದು, ಈ ಪ್ರಯತ್ನವನ್ನು ನಾನು ಕಟುವಾಗಿ ಖಂಡಿಸುತ್ತೇನೆ. ರಾಜ್ಯದ ಜನಾ ಮೌನವಾಗಿರುವದು ವೀಕ ಆಗಿದ್ದಾರೆ ಅಂತ ಅಲ್ಲ. ಎಲ್ಲ ಕನ್ನಡಿಗರು ಯಾವದೇ ಜಾತಿ, ಧರ್ಮ ಇದ್ದರು ಎಲ್ಲ ಕನ್ನಡಿಗರು ನೆಲ, ಜಲ, ಭಾಷೆ, ವಿಚಾರದಲದಲಿ ರಾಜಿ ಇಲ್ಲ ಎನ್ನುವದನ್ನು ತೋರಿಸುತ್ತಾರೆ.

    ಮಹಾರಾಷ್ಟ್ರದ ಸಾಂಗ್ಲಿ, ಜತ್ತ ಜನಾ ಕರ್ನಾಟಕ ಸೇರಲು ಬಯಸತಾ ಇದ್ದಾರೆ. ಡಿಸ್ಪೂಟ ಮಾಡಲು ಪ್ರಯತ್ನ ಮಾಡತಾ ಇದ್ದಾರೆ. ಆರೋಗ್ಯ ವಿಮೆ 54 ಕೋಟಿ ಬಿಡುಗಡೆ ಮಾಡಿದ್ದರು ಸಿಎಂ ಮೌನವಾಗಿದ್ದಾರೆ. ರಾಜ್ಯ ಹಕ್ಕು ರಕ್ಷಣೆ ಮಾಡಲು ವಿಫಲವಾಗಿದ್ದಾರೆ. ರಾಜ್ಯದ ಸಿಎಂ ಆಗಿ ರಕ್ಷಣೆ ಆಗದಿದ್ದರೆ ಆ ಸ್ಥಾನದಲ್ಲಿ ಯಾಕೆ ಇರಬೇಕು. ರಾಜೀನಾಮೆ ನೀಡಿ. ಇದು ರಾಜ್ಯದ ಜನರ ಪ್ರಶ್ನೆ ಆಗಿದೆ. ಮಹಾರಾಷ್ಟ್ರದ ಆ ಕಾರ್ಯಕ್ರಮ ವಾಪಸ ಪಡೆಯಬೇಕು. ಈ ಕೂಡಲೇ ಕೇಂದ್ರ ಸರಕಾರ ಒಕ್ಕೂಟದ ವ್ಯವಸ್ಥೆ ಕಾಪಡಲು ಮಧ್ಯ ಪ್ರವೇಶ ಮಾಡಬೇಕು. ಮಹಾರಾಷ್ಟ್ರದವರು ಕೇಂದ್ರದ ಮಾತು ಕೇಳಲ್ಲ ಅಂತಾ ಖಾತ್ರಿಯಾಗಿದೆ. ಮಾಹಾ ಸರಕಾರವನ್ನು ವಜಾ  ಮಾಡಬೇಕು. ರಾಜ್ಯ ಒಡೆಯುವ ಮಹಾರಾಷ್ಟ್ರದ ದುಷ್ಟ ಆಲೋಚನೆಗೆ ಕಡಿವಾಣ ಹಾಕದಿದ್ದರೆ. ಕನ್ನಡಿಗರಿಗೆ ರಕ್ಷಣೆ ಇಲ್ಲದಂತಾಗುತ್ತದೆ. ಅಮಿಶ್ ಶಾ ಸರಿಯಾದ ಕ್ರಮ ತೆಗೆದುಕೊಳ್ಳಬೇಕು ಇಲ್ಲದಾರೆ ಸರಕಾರ ವಜಾ ಮಾಡಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.

ಸುದ್ದಿ ಓದಿ