ಪ್ರತಿಯೊಬ್ಬರು ಸಂಚಾರ ನಿಯಮ ಪಾಲಿಸಬೇಕು ದೊಡ್ಡಗೌಡರ
ಚನ್ನಮ್ಮನ ಕಿತ್ತೂರ. ಇಂದಿನ ದಿನಮಾನಗಳಲ್ಲಿ ಎಲ್ಲರೂ ಸೈಕಲ್ ಮರೆತು ವಾಹನಗಳ ಮೊರೆ ಹೋಗಿದ್ದಾರೆ ರಸ್ತೆಗಳಲ್ಲಿ ಜನದಟ್ಟನೆಯ ಪ್ರಮಾಣ ಹೆಚ್ಚಿದೆ ಹೀಗಾಗಿ ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿದೆ ಎಲ್ಲರೂ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಶಾಸಕ ಮಹಾಂತೇಶ ದೊಡ್ಡಗೌಡರ ಕರೆ ನೀಡಿದರು.
ಇಲ್ಲಿಯ ಕೆಎನ್ವಿವಿ ಸಂಘದ ಕಾಲೇಜು ಮೈದಾನದಲ್ಲಿ ಪೋಲಿಸ್, ಸಾರಿಗೆ, ವೈದ್ಯಕಿಯ ಇಲಾಖೆಗಳ ಮತ್ತು ಬ್ಯಾಂಕ್ ವಿವಿಧ ವಿಮೆ ಕಂಪನಿಗಳ ಸಹಯೋಗದಲ್ಲಿ ಬೃಹತ್ ಸಂಚಾರಿ ಸುರಕ್ಷತಾ ಮೇಳದ ಕಾರ್ಯಕ್ರಮದಲ್ಲಿ ಮಾತನಾಡಿ, ಒಂದು ಕುಟುಂಬದ ಜವಾಬ್ದಾರಿ ನಿಮ್ಮ ಮೇಲಿರುತ್ತದೆ. ಯಾರೂ ಈ ವಿಷಯದ ಬಗ್ಗೆ ನಿರ್ಲ್ಯಕ್ಷ ವಹಿಸಬಾರದು ಎಂದು ಹೇಳಿದರು. ಪೋಲಿಸರು ನಮ್ಮ ಒಳ್ಳೆಯದಕ್ಕೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿರುತ್ತಾರೆ ಎಂದು ಹೇಳಿ ಸಂಚಾರ ನಿಯಮಗಳನ್ನು ಪಾಲಿಸದೇ ಸಂಚರಿಸುವದರಿಂದ ನಾವು ಯುವ ಪಿಳಿಗೆಯನ್ನೆ ಹೆಚ್ಚಾಗಿ ಕಳೆದುಕೊಳ್ಳುತ್ತಿದ್ದೇವೆಂದು ಹೇಳಿದರು. ಪ್ರತಿ ತಿಂಗಳ ಮೂರನೆಯ ಸೋಮವಾರ ಕ್ಯಾಂಪಗಳನ್ನು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಬೈಲಹೊಂಗಲದ ಡಿಎಸ್ಪಿ ಶಿವಾನಂದ ಕಟಗಿ ಮಾತನಾಡಿ ನಮ್ಮ ದೇಶದಲ್ಲಿ ಪ್ರತಿವರ್ಷ 1.50 ಲಕ್ಷ ಜನರು ವಾಹನ ಅಪಘಾತದಲ್ಲಿ ಮರಣ ಹೊಂದುತ್ತಾರೆ ಇವರೆಲ್ಲರೂ ಸಂಚಾರ ನಿಯಮಗಳನ್ನು ಸರಿಯಾಗಿ ಪಾಲಿಸಿರುವದಿಲ್ಲ ಎಂದರು.
ವಿಷೇಶವಾಗಿ ದ್ವಿಚಕ್ರ ವಾಹನ ಸವಾರರು ಹೆಲ್ಮೇಟ್ ಇಲ್ಲದೇ ವಾಹನ ಚಲಾಯಿಸಿ ಅಪಘಾತದಲ್ಲಿ ತಲೆಗೆ ಪಟ್ಟಾಗಿ ಮರಣ ಹೊಂದಿದವರೇ ಹೆಚ್ಚಾಗಿದ್ದಾರೆ ಆದ್ದರಿಂದ ನಿರ್ಲ್ಯಕ್ಷವಹಿಸಬಾರದು ಎಂದರು. ವಾಹನ ಚಾಲಕರು ಕಡ್ಡಾಯವಾಗಿ ಚಾಲನಾ ಪರವಾಣಿಗೆ, ವಿಮೆ, ಹೆಲ್ಮೇಟ್ ಹಾಗೂ ಸಂಚಾರ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಬೇಕು, ನಿಮ್ಮ ಕುಟುಂಬಕ್ಕೊಸ್ಕರವಾದರೂ ಮಾಡಬೇಕೆಂದರು. ಈ ಸಪ್ತಾಹವನ್ನು ಆಚರಿಸಲು ನಿರ್ದೇಶಿಸಿದ ಮೇಲಾಧಿಕಾರಿಗಳಿಗೆ ಒಂದನೆಗಳನ್ನುಸಲ್ಲಿಸಿದರು.
ಕಲ್ಮಠದ ಮಡಿವಾಳರಾಜಯೋಗಿಂದ್ರ ಸ್ವಾಮಿಗಳು ಮಾತನಾಡಿ, ಇತ್ತಿಚ್ಚೇಗೆ ಸಣ್ಣ ಮಕ್ಕಳು ವಾಹನಗಳನ್ನು ಚಲಾಯಿಸುವದು ಹೆಚ್ಚುತ್ತಿದೆ. ಪಾಲಕರು ಇದನ್ನು ತಡೆಗಟ್ಟಬೇಕು. ಕುಟುಂಬಗಳ ಹೊಣೆ ನಿಮ್ಮ ಮೇಲೆ ನಿಂತ್ತಿರುತ್ತದೆ ಅಪಘಾತವಾಗಿ ಜೀವ ಕಳೆದುಕೊಂಡರೆ ಕುಟುಂಬಗಳು ಅನಾಥವಾಗುವ ಪರಿಸ್ಥಿತಿಗಳು ಬರುತ್ತವೆ ಆದ್ದರಿಂದ ನಿಯಮಗಳನ್ನು ಎಲ್ಲರು ಪಾಲಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ 112 ಸಂಖ್ಯೆಗೆ ಡಯಲ್ ಮಾಡುವ ಮುಖಾಂತರ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ತಿಳಿಸಿ ಭಿತ್ತಿ ಪತ್ರವನ್ನು ಬಿಡುಗಡೆಗೊಳಿಸಿದರು. ಹಾಗೂ ವಾಹನ ವಿಮೆ, ಕಡಿಮೆ ದರದಲ್ಲಿ ಹೆಲ್ಮೆಟ್ಗಳು, ವಾಹನ ಚಾಲನಾ ಪರವಾನಿಗೆ ಮಾಹಿತಿ, ಹೊಸ ವಾಹನ ಖರೀದಿಸಲು ಬ್ಯಾಂಕಿನ ವಿವಿಧ ಸೌಲಭ್ಯಗಳು, ವಾಯುಮಾಲಿನ್ಯ ಪ್ರಮಾಣ ಪತ್ರ ಸ್ಥಳದಲ್ಲಿಯೇ ನೀಡಲಾಯಿತು.
ಪಟ್ಟಣ ಪಂಚಾಯತಿ ಅಧ್ಯಕ್ಷ ಹನುಮಂತ ಲಂಗೋಟಿ, ಮೋಟರ ವಾಹನ ನೀರಿಕ್ಷಕ ಮಹೇಶ ಮಠಪತಿ, ಸಿಪಿಐ ಮಂಜುನಾಥ ಕುಸಗಲ್, ವೈದ್ಯಾಧಿಕಾರಿ ಡಾ. ಶಿವಾನಂದ ಮಾಸ್ತಿಹೊಳ್ಳಿ, ಪಿಎಸೈಗಳಾದ ದೇವರಾಜ ಉಳ್ಳಾಗಡ್ಡಿ, ಎಸ್.ಬಿ.ಮಾವಿನಕಟ್ಟಿ, ಆನಂದ ಕ್ಯಾರಕಟ್ಟಿ, ಬಿಜೆಪಿ ಮಂಡಳ ಅಧ್ಯಕ್ಷ ಬಸವರಾಜ ಪರವಣ್ಣವರ, ಜಗದೀಶ ವಸ್ತ್ರದ, ಬಸನಗೌಡ ಸಿದ್ರಾಮನಿ, ಉಳವಪ್ಪ ಉಳ್ಳಾಗಡ್ಡಿ ಇತರರು ಇದ್ದರು. ಬಸವರಾಜ ಕುಪ್ಪಸಗೌಡರ ನಿರೂಪಿಸಿದರು.